ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು: ಯತ್ನಟ್ಟ
ದೇವರಕೊಲ್ಲಿಯಲ್ಲಿ ಕಾನೂನು ಅರಿವು
Team Udayavani, May 12, 2019, 6:00 AM IST
ಮಡಿಕೇರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಉದ್ಯೋಗ ಸಂಘ ಹಾಗೂ ಕೊಯನಾಡು ನೀಲಾಂಬರ್ ರಬ್ಬರ್ ಸಂಸ್ಥೆ, ಥೋಮ್ಸನ್ ತೋಟ ಇವರ ಸಹಕಾರದಲ್ಲಿ ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವುದು ನಿಷೇಧ ಮತ್ತು ಕಾರ್ಮಿಕ ಕಾನೂನು ಕುರಿತು ಕಾನೂನು ಅರಿವು ಕಾರ್ಯಕ್ರಮವು ದೇವರಕೊಲ್ಲಿ ಮತ್ತು ಥೋಮ್ಸನ್ ತೋಟದಲ್ಲಿ ನಡೆುತು.
ತಾಲೂಕು ಕಾರ್ಮಿಕ ಹಿರಿಯ ಅಧಿಕಾರಿ ಎಂ.ಎಂ.ಯತ್ನಟ್ಟಿ ಅವರು ಮಾತನಾಡಿ, ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಬಾರದು ಎಂದು ಅವರು ಹೇಳಿದರು.
ಕಾರ್ಮಿಕರಿಗಾಗಿ ಹಲವು ಕಾನೂನುಗಳು ಮತ್ತು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ವಿವಿಧ ಕಾರ್ಮಿಕ ಕಾಯ್ದೆಗಳಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಯತ್ನಟ್ಟಿ ಅವರು ಕನಿಷ್ಠ ವೇತನ ಪಾವತಿ, ಸಮಾನ ವೇತನ, ಹೆರಿಗೆ ಭತ್ಯೆ, ತೋಟ ಕಾರ್ಮಿಕರ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಕೆಲಸದ ಸಂದರ್ಭದಲ್ಲಿ ದೌರ್ಜನ್ಯ ಆಗದಂತೆ ನೋಡಿಕೊಳ್ಳುವುದು ಮತ್ತಿತರ ಬಗ್ಗೆ ಹಲವು ಕಾಯ್ದೆಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಯತ್ನಟ್ಟಿ ಅವರು ಹೇಳಿದರು.
ದೇವರಕೊಲ್ಲಿಯ ನೀಲಾಂಬರ್ ರಬ್ಬರ್ ಸಂಸ್ಥೆಯ ವ್ಯವಸ್ಥಾಪಕರಾದ ಎ.ಎಂ.ಸುಬ್ಬಯ್ಯ, ಥೋಮ್ಸನ್ ತೋಟದ ವ್ಯವಸ್ಥಾಪಕರಾದ ಇ.ಎನ್.ಮಾರ್ಕೋಸ್ ಹಿರಿಯ ಕಾುìಕ ನಿರೀಕ್ಷಕರಾದ ಎಂ.ಮಹದೇವ ಸ್ವಾಮಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ಮತ್ತಿತ್ತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.