ತಿರುಪತಿಗೆ 100ನೇ ಲೋಡ್ ತರಕಾರಿ
Team Udayavani, Sep 12, 2021, 3:38 PM IST
ಚಿಂತಾಮಣಿ: ಕಲಿಯುಗದ ಆರಾಧ್ಯ ದೈವ ತಿರುಪತಿ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ 36 ವರ್ಷಗಳಿಂದ ಅಸಂಖ್ಯಾತ ಭಕ್ತರಿಗೆ ಅನ್ನದಾನ ಸೇವೆ ನಿರಂತರವಾಗಿ ನಡೆಯುತ್ತಿದ್ದು, ಇದೆಲ್ಲ ಸಾಧ್ಯವಾಗಿದ್ದು ತಮ್ಮಂತಹ ಭಕ್ತರಿಂದ ಎಂದು ಟಿಟಿಡಿ ಅನ್ನ ಪ್ರಸಾದ ಟ್ರಸ್ಟ್‌ನ ಡೆಪ್ಯೂಟಿ
ಡೈರೆಕ್ಟರ್ ಹರಿನಾಥ್ ಹೇಳಿದರು.
ನಗರದವಿದ್ಯಾಗಣಪತಿ ರಂಗಮಂದಿರದಲ್ಲಿ ತಿರುಮಲ ತಿರುಪತಿ ಅನ್ನದಾನ ಪ್ರಸಾದಕ್ಕೆ100ನೇ ಲೋಡ್ ತರಕಾರಿ ಕಳುಸಿಕೊಡುವ ಸಂಬಂಧ ನಡೆದ ಸಮಾರಂಭದಲ್ಲಿ ತರಕಾರಿ ಕಮಿಷನ್ ವ್ಯಾಪಾರಿಗಳು, ರೈತರು, ದಾನಿಗಳನ್ನು ಅಭಿನಂದಿಸಿ ಮಾತನಾಡಿದರು. ಚಿಂತಾಮಣಿಯಿಂದ
ತಾಜಾ ತರಕಾರಿ ಕಳುಹಿಸುತ್ತಿದ್ದು, ಶ್ರೀವಾರಿಗೆ ಪ್ರೀತಿಪಾತ್ರವಾಗಿದೆ. ಈ ಭಾಗದ ರೈತರು, ವ್ಯಾಪಾರಿಗಳು, ಸಾರ್ವಜನಿಕರು ಟಿಟಿಡಿ ದೇವಾಲಯದ ಬಗ್ಗೆ ಅಪಾರ ಭಕ್ತಿ ಹೊಂದಿದ್ದು, ಮುಂದಿನ ತಲೆಮಾರು ಸ್ವಾಮಿ ಸೇವೆ ಮಾಡುವ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕೊರೊನಾ ಶೀಘ್ರ ತೊಲಗಲಿ, ಎಲ್ಲರಿಗೂ ಆರೋಗ್ಯ ನೀಡುವಂತೆ ನಾವೆಲ್ಲರೂ ನಮ್ಮ ಆರಾಧ್ಯ ದೇವರಲ್ಲಿ ಪ್ರಾರ್ಥಿಸೋಣವೆಂದರು.
ಟಿಟಿಡಿ ಅನ್ನ ಪ್ರಸಾದ ಟ್ರಸ್ಟ್‌ನ ಅಧಿಕಾರಿ ಜಿ.ಎನ್.ವಿ.ಶಾಸ್ತ್ರಿ ಮಾತನಾಡಿ, ಆರಂಭದಲ್ಲಿ ನಾವು ಹಣಕೊಟ್ಟು ತರಕಾರಿ ಖರೀದಿ ಮಾಡಿದರೂ ತಾವುಗಳು ಸೇವೆಗಳ ರೂಪ ದಲ್ಲಿ ನೀಡುತ್ತಿರುವ ತಾಜಾ ತರಕಾರಿ ಸಿಗುತ್ತಿರಲಿಲ್ಲ,ಬೆಂಗಳೂರಿನ ಶಿವಾಜಿ ನಗರದ ಮಾರ್ಕೆಟ್‌ನಲ್ಲಿಯೂ
ಅನೇಕ ಬಾರಿ ಖರೀದಿ ಮಾಡಿದ್ದುಂಟು ಎಂದು ಹೇಳಿದರು.
ಇದನ್ನೂ ಓದಿ:ಐಷಾರಾಮಿ ಕಾರು ಖರೀದಿಸಿದ ನಟಿ ಕೃತಿ ಸನೋನ್
ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಿರುಮಲದಲ್ಲಿ ಸ್ವಾಮಿ ದರ್ಶನ ಪಡೆದು ಪಾಕಶಾಲೆಯ ತರಕಾರಿ ನೋಡಿ ಇಷ್ಟು ತಾಜಾ ತರಕಾರಿ ಎಲ್ಲಿಂದ ತಂದಿರಿ ಎಂದು ಕೇಳಿದಾಗ ಚಿಂತಾಮಣಿ ಹೆಸರನ್ನು ನಾವುಗಳು ತಿಳಿಸಿದಾಗ ಬಹಳ ಸಂತೋಷಗೊಂಡರು ಎಂದು
ತಿಳಿಸಿದರು.
ಸಂಘದ ಅಧ್ಯಕ್ಷ ಟಿ.ಶ್ರೀನಿವಾಸ್ ಮಾತನಾಡಿ, 2016ರಲ್ಲಿ ಟಿ.ಟಿ.ಡಿ ಅನ್ನದಾನ ಸೇವೆ ತರಕಾರಿ ಕಳುಹಿಸಿಕೊಡುವ ಸೇವೆ ಆರಂಭಿಸಲಾಗಿತ್ತು. ಇಂದಿಗೆ 100ನೇ ಲೋಡ್ ಕಳುಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವೆಂಕಟೇಶ್ವರನ ಕೃಪಾ ಕಟಾಕ್ಷ
ನಮ್ಮೆಲ್ಲರಿಗೂ ಲಭಿಸಲಿ, ಈ ನಿರಂತರ ಸೇವೆಗೆ ಕೈಜೋಡಿಸಿದ ಎಲ್ಲಾ ತರಕಾರಿ ಕಮಿಷನ್ ವ್ಯಾಪಾರಿಗಳು , ದಾನಿಗಳು, ರೈತರಿಗೆ ಕೃತಜ್ಞತೆ ಸಲ್ಲಿಸಿದರು. ದಾನಿಗಳಾ ದ ಚೌಡರೆಡ್ಡಿ, ಎಸ್.ಸುಬ್ರಮಣ್ಯಂ, ಶ್ರೀರಾಮಪ್ಪ, ಚನ್ನಕೃಷ್ಣಪ್ಪ, ಮುನಿಸ್ವಾಮಿರೆಡ್ಡಿ, ಮೂನ್ ಸ್ಟಾರ್ ಗೌಸ್‌ಪಾಷ, ಶ್ರೀರಾಮಯ್ಯ, ಲಕ್ಷ್ಮಣ್, ನಾರಾ ಯಣಸ್ವಾಮಿ, ರಮೇಶ್ ಮತ್ತಿರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.