ಡಿಸಿಸಿ ಬ್ಯಾಂಕ್ ನೌಕರರ ಸಂಘಕ್ಕೆ 2.70 ಲಕ್ಷ ರೂ. ಲಾಭ
Team Udayavani, Sep 17, 2019, 4:27 PM IST
ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಸಾಲಿನ ಆಯವ್ಯಯ ಮಂಡಿಸಿದ್ದು, ಸಂಘ 2.70 ಲಕ್ಷ ರೂ. ಲಾಭಗಳಿಸಿದೆ ಎಂದು ಅಧ್ಯಕ್ಷ ಹುಸೇನ್ ದೊಡ್ಡಮನಿ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಂಘ ಸದಸ್ಯರ ಆರ್ಥಿಕಾಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಸಾಲ ವಸೂಲು: ಸಂಘಕ್ಕೆ 10 ಮಂದಿ ಸುಸ್ತಿದಾರರಿಂದ ವಸೂಲಾಗಬೇಕಾದ 65 ಲಕ್ಷ ರೂ. ವಸೂಲಿಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಈ ಸುಸ್ತಿದಾರರು ನಿವೃತ್ತರಾಗಿದ್ದು, ಬಡ್ಡಿಯೇ ಹೆಚ್ಚಾಗಿರುವುದರಿಂದ ಅವರ ಮನವೊಲಿಸಿ ಏಕಕಾಲಿಕ ಸಾಲ ತೀರುವಳಿ ಯೋಜನೆ ಅನುಷ್ಠಾನಗೊಳಿಸಿ ಸಾಲ ವಸೂಲು ಮಾಡಲು ಸಭೆ ನಿರ್ಧರಿಸಿತು.
ಹೊಸ ಸದಸ್ಯತ್ವ: ಈ ಸಂದರ್ಭದಲ್ಲಿ ಮಂಡಿಸಲಾದ ವಾರ್ಷಿಕ ಆಯವ್ಯಯದಲ್ಲಿ 10.26 ಲಕ್ಷ ರೂ. ಖರ್ಚು ಮತ್ತು ಲಾಭ ಸರಿದೂಗಿಸಿ ಕ್ರಮವಹಿಸಲು ತೀರ್ಮಾನಿಸಿದ್ದು, ಇದೇ ಸಂದರ್ಭದಲ್ಲಿ ಸಂಘಕ್ಕೆ 7 ಮಂದಿ ನೌಕರರಾದ ವಿ.ರತ್ನ, ಎನ್.ಯಲ್ಲಪ್ಪರೆಡ್ಡಿ, ಬೇಬಿ ಶಾಮಿಲಿ, ವೈ.ಎನ್.ಚಂದ್ರಶೇಖರರೆಡ್ಡಿ, ಕೃಷ್ಣಮೂರ್ತಿ, ಎಂ.ಆರ್.ಶ್ರುತಿ, ಎನ್.ಸತೀಶ್‌ರಿಗೆ ಹೊಸದಾಗಿ ಸದಸ್ಯತ್ವ ನೀಡಲು ಸಭೆ ಒಪ್ಪಿಗೆ ನೀಡಿತು. ಈಗಿರುವ ಬೈಲಾದಂತೆ ವಿಶೇಷ ಸಾಲವನ್ನು ಸದಸ್ಯರಿಗೆ 50 ಸಾವಿರ ರೂ.ವರೆಗೂ ನೀಡಬಹುದಾಗಿದ್ದು, ಅದನ್ನು 1 ಲಕ್ಷಕ್ಕೇರಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.
ಸಂಘ ಸದೃಢವಾಗಿ ಮುನ್ನಡೆಸಲು ಸಲಹೆ: ಸಹಕಾರ ಸಂಘ ನೀಡಿದ ಸನ್ಮಾನ ಸ್ವೀಕರಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಪ್ರತಿಯೊಂದಕ್ಕೂ ಆರ್ಥಿಕ ಸದೃಢತೆ ಬೇಕು, ಈ ಕಾರ್ಯ ಸಾಸಲು ನಿಮ್ಮಲ್ಲಿ ಬದ್ಧತೆ ಇರಬೇಕು ಎಂದು ತಿಳಿಸಿ ಸಭೆಗೆ ಶುಭ ಕೋರಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ಬ್ಯಾಂಕಿನ ನಿರ್ದೇಶಕ ಕೆ.ವಿ.ದಯಾನಂದ್, ಸಂಘವನ್ನು ಆರ್ಥಿಕವಾಗಿ ಮುನ್ನಡೆಸಿಕೊಂಡು ಹೋಗಿ, ನಿಮ್ಮ ವ್ಯವಹಾರ ಪಾರದರ್ಶಕವಾಗಿರಲಿ, ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಿರ್ದೇಶಕರಾದ ಸೊಣ್ಣೇಗೌಡ, ಚೆನ್ನರಾಯಪ್ಪ ತಮ್ಮ ಸಲಹೆ ನೀಡಿದರು. ಸಭೆಯಲ್ಲಿ 1018-19ನೇ ಸಾಲಿನಲ್ಲಿ ಅಂದಾಜು ಆಯವ್ಯಯಕ್ಕಿಂತ ಹೆಚ್ಚಾಗಿ ಖರ್ಚಾಗಿರುವ ಬಾಬ್ತುಗಳಿಗೆ ಅನುಮೋದನೆ ಪಡೆಯಲಾಯಿತು. 2019-20ನೇ ಸಾಲಿನ ಅಂದಾಜು ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. ವಯೋನಿವೃತ್ತರಾದ ಸಂಘದ ಸದಸ್ಯ ವೆಂಕಟೇಶಪ್ಪರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ವಿ.ರಾಮಕೃಷ್ಣಾರೆಡ್ಡಿ, ಕಾರ್ಯದರ್ಶಿ ಖಲೀಮುಲ್ಲಾ, ಕೆ.ಎನ್.ಪದ್ಮ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.