5 ನೇ ತರಗತಿವರೆಗೆ ಶಾಲೆ ನಡೆಸಿದರೆ ಬೀಗ
Team Udayavani, Mar 15, 2021, 1:35 PM IST
ಕೋಲಾರ: ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ, 1ರಿಂದ 5ನೇ ತರಗತಿ ಶಾಲೆ ನಡೆಸಿದರೆಅಂತಹ ಶಾಲೆಗೆ ಬೀಗ ಜಡಿದು ಪ್ರಕರಣ ದಾಖಲಿಸುವುದಲ್ಲದೇ ಮಾನ್ಯತೆ ರದ್ದುಪಡಿಸಲು ಶಿಫಾರಸು ಮಾಡಿ ಎಂದು ಶಿಕ್ಷಣ ಸಂಯೋಜಕರಿಗೆ ಬಿಇಒ ಕೆ.ಎಸ್.ನಾಗರಾಜಗೌಡ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರ ಸಭೆ ನಡೆಸಿದ ಬಿಇಒ ಅವರು,ಮಾಲೂರಿಗೆ ಬಂದಿದ್ದ ಶಿಕ್ಷಣ ಸಚಿವರೂ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲಾಖೆಯಆಯುಕ್ತರೂ ಸುತ್ತೋಲೆ ಕಳುಹಿಸಿದ್ದಾರೆ ಎಂದರು.
ಶಾಲೆಗಳಿಗೆ ಭೇಟಿ ನೀಡಿ: 1ರಿಂದ 5ನೇ ತರಗತಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕರೆಸಬೇಡಿಎಂದು ಸೂಚನೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಕರೆಸುತ್ತಿದ್ದಾರೆ ಎಂಬದೂರುಗಳ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಶಾಲೆಗಳಿಗೆ ಭೇಟಿ ನೀಡಿ ಕ್ರಮವಹಿಸಲು ಸಿಸಿಒಗಳಿಗೆಸೂಚನೆ ನೀಡಿದರು.
ಇಲಾಖೆಯ ಗಮನಕ್ಕೆ ತನ್ನಿ: ಮಕ್ಕಳ ಆರೋಗ್ಯ ರಕ್ಷಣೆ ಪೋಷಕರ ಜವಾಬ್ದಾರಿಯಾಗಿದೆ.ಪೋಷಕರು ತಮ್ಮ ಪೂರ್ವ ಪ್ರಾಥಮಿಕತರಗತಿಗಳಿಂದ 5ನೇ ತರಗತಿ ವರೆಗಿನ ಮಕ್ಕಳನ್ನುಶಾಲೆಗೆ ಕಳುಹಿಸಬಾರದು, ಶಾಲೆಯವರುಕಳುಹಿಸಲು ಸೂಚಿಸಿದರೆ ಕೂಡಲೇ ಇಲಾಖೆಯಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಓದುವ ಬೆಳಕು ಪ್ರಗತಿ ಪರಿಶೀಲಿಸಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಪಂ ಗ್ರಂಥಾಲಯಗಳಲ್ಲಿಶಾಲಾ ಮಕ್ಕಳಿಗೆ ಸದಸ್ಯತ್ವ ನೀಡಲಾಗಿದೆ. ಇದರ ಪ್ರಗತಿಯನ್ನು ಪರಿಶೀಲಿಸಲು ಇಸಿಒಗಳಿಗೆ ಸೂಚಿಸಿದರು.
ಶಾಲೆಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆಸಂಬಂಧಿಸಿದಂತೆ ಪಿಡಿಒಗಳನ್ನು ಸಂಪರ್ಕಿಸಿ, ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ ಅವರು, ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಗಮನಹರಿಸಲು ಇಸಿಒಗಳಿಗೆ ಸಲಹೆ ನೀಡಿದರು.
ಹರಾಜು ಹಾಕಿ: ಶಾಲೆಗಳಲ್ಲಿನ ಹಳೆಯ ಸಾಮಗ್ರಿಗಳು, ಹಾಳಾದ ವಸ್ತುಗಳನ್ನುಸಂಗ್ರಹಿಸಬೇಡಿ, ಕೂಡಲೇ ಎಸ್‌ಡಿಎಂಸಿ ಅನುಮತಿ ಪಡೆದು ಹರಾಜು ಹಾಕಿ ವಿಲೇವಾರಿ ಮಾಡಿ ಎಂದುಮುಖ್ಯ ಶಿಕ್ಷಕರಿಗೆ ಸೂಚಿಸಿದ ಬಿಇಒ, ಈ ಸಂಬಂಧಈಗಾಗಲೇ ಇ-ವೇಸ್ಟ್ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಲೆಗಳ ಆವರಣವನ್ನು ಸುಂದರಗೊಳಿಸಿ ಗಿಡಮರ ಬೆಳೆಸಿ, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆಮುಖ್ಯಶಿಕ್ಷಕರೊಂದಿಗೆ ಎಲ್ಲಾ ಶಿಕ್ಷಕರು ಸಹಕಾರ ನೀಡಿಎಂದು ತಿಳಿಸಿದರು. ಸಭೆಯಲ್ಲಿ ಕಚೇರಿ ವ್ಯವಸ್ಥಾಪಕಮುನಿಸ್ವಾಮಿಗೌಡ,ಇಸಿಒಗಳಾದ ಮುನಿರತ್ನಯ್ಯಶೆಟ್ಟಿ,ರಾಘವೇಂದ್ರ, ಆರ್.ಶ್ರೀನಿವಾಸನ್, ಭೈರೆಡ್ಡಿ, ವೆಂಕಟಾಚಲಪತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.