ಆಲಿಕಲ್ಲು ಮಳೆಗೆ 77 ಹೆಕ್ಟೇರ್ ಬೆಳೆ ನಾಶ
Team Udayavani, Apr 4, 2018, 3:21 PM IST
ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 77 ಹೆಕ್ಟೇರ್ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ನಾಶವಾಗಿದ್ದು, ಸುಮಾರು 40 ಲಕ್ಷ ರೂ. ನಷ್ಟ ಸಂಭವಿಸಿದೆ. ಮಾರ್ಚ್ 30 ರಂದು ಕೋಲಾರ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಿಂದಾಗಿ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಬೆಳೆ ಹಾನಿಯಿಂದ 94 ರೈತರು ನಷ್ಟ ಅನುಭವಿಸಿದ್ದಾರೆ.
ಮಾಲೂರು ತಾಲೂಕಿನ ಕಸಬಾ ಹೋಬಳಿ ಸೊಣ್ಣ ಹಳ್ಳಿ, ಪಿಚ್ಚಗುಂಟ್ರಹಳ್ಳಿ, ಗುಂಡನಹಳ್ಳಿ, ಮಾದನಹಳ್ಳಿ, ಮಾಸ್ತಿ ಹೋಬಳಿಯ ರಾಮಸಾಗರ, ಕೋತಿಗುಂಡ್ಲ ಹಳ್ಳಿ, ದಿನ್ನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಗೆ ಭಾರಿ ಹಾನಿಯಾಗಿದೆ.
ಮಾಲೂರಲ್ಲಿ 32 ಹೆಕ್ಟೇರ್ ಬೆಳೆ ನಾಶ: ಆಲಿಕಲ್ಲು ಮಳೆಗೆ ಮಾಲೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 32 ಹೆಕ್ಟೇರ್ ಬೆಳೆ ನಾಶವಾಗಿದ್ದು, ಶ್ರೀನಿವಾಸಪೂರ ತಾಲೂಕು 29 ಹೆಕ್ಟೇರ್ ಪ್ರದೇಶ ಬೆಳೆ ಹಾನಿ ಮೂಲಕ ಎರಡನೇ ಸ್ಥಾನದಲ್ಲಿದೆ. ಕೋಲಾರ ತಾಲೂಕಿನಲ್ಲಿ 16 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಒಟ್ಟು 77 ಹೆಕ್ಟೇರ್ ಬೆಳೆ ಹಾನಿಯಲ್ಲಿ ಶೇ.50.90 ರಷ್ಟು ಕ್ಯಾಪ್ಸಿಕಂ, ಟೊಮೆಟೊ, ಬೀನ್ಸ್, ಹೂವು, ಪಪ್ಪಾಯ, ಮೆಣಸಿನಕಾಯಿಯಂತಹ ತರಕಾರಿ ಬೆಳೆ ಗಳಾಗಿದ್ದರೆ, ಶೇ.26.20 ರಷ್ಟು ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಸೀಬೆ ಹಾನಿಗೀಡಾಗಿವೆ.
94 ರೈತರ ಬೆಳೆ ಹಾನಿ: ಕೋಲಾರ ತಾಲೂಕಿನ 10 ಮಂದಿ ರೈತರು, ಮಾಲೂರು ತಾಲೂಕಿನ 46 ಮಂದಿ
ರೈತರು ಹಾಗೂ ಶ್ರೀನಿವಾಸಪುರ ತಾಲೂಕಿನ 38 ರೈತರು ಸೇರಿದಂತೆ ಒಟ್ಟು 94 ಮಂದಿ ರೈತರ ಬೆಳೆಹಾನಿ
ಯಾಗಿದೆ ಎಂದು ಸಮೀಕ್ಷೆಯಿಂದ ಖಚಿತವಾಗಿದೆ.
11.58 ಲಕ್ಷ ರೂ.ಪರಿಹಾರಕ್ಕೆ ಕೋರಿಕೆ: ಆಲಿಕಲ್ಲು ಮಳೆಯಿಂದಾಗಿ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ನಂತೆ ಅಂದಾಜು 40 ಲಕ್ಷ ರೂ. ಬೆಳೆ ಹಾನಿ ಸಂಭ ವಿಸಿದೆ. ಆದರೂ, ಪರಿಹಾರದ ನಿಯಮಗಳ ಪ್ರಕಾರ ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆಗೆ 18 ಸಾವಿರ ರೂ. ಹಾಗೂ ಪ್ರತಿ ಹೆಕ್ಟೇರ್ ತರಕಾರಿ ಬೆಳೆಗೆ 13.5 ಸಾವಿರ ರೂ.ನಂತೆ ರೈತರಿಗೆ 11.58 ಲಕ್ಷ ರೂ. ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ತೋಟಗಾರಿಕೆ ಇಲಾಖೆ ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ನಿಧಿಗೆ ಶಿಫಾರಸು ಮಾಡಿದೆ.
ಆಲಿಕಲ್ಲು ಮಳೆಯಿಂದ ಬೆಳೆ ಹಾನಿ: ಆಲಿಕಲ್ಲು ಮಳೆ ಯಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಅದರಲ್ಲೂ ಫಸಲು ಬಿಡಲು ಸಿದ್ಧವಾಗಿರುವ ಮಾವಿಗೆ ಸಾಕಷ್ಟು ಹಾನಿ ಸಂಭವಿಸುತ್ತದೆ. ಆಲಿಕಲ್ಲು ಮಳೆಯಿಂದ ಮಾವಿನ ಕಾಯಿಗಳ ಮೇಲೆ ಗಾಯಗಳಾದರೆ ಅವುಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಿನಲ್ಲಿ ಊಜಿ ನೊಣ ಸೇರುವಂತೆ ಮಾಡುತ್ತದೆ. ಇದರಿಂದ ಬೆಳೆ ನಾಶವಾಗುತ್ತದೆ.
ಇದೇ ರೀತಿ ಬಿರುಗಾಳಿಯಿಂದಾಗಿ ಮಾವಿನ ಕಾಯಿ ಗಳು ಪಿಂದೆಯಾಗಿಯೇ ನೆಲಕ್ಕುರುಳಿ ಬೀಳುತ್ತವೆ. ತರಕಾರಿ ಬೆಳೆಗಳಿಗೂ ಆಲಿಕಲ್ಲು ಮಳೆಯಿಂದ ಹಾನಿ ಯಾಗುತ್ತದೆ. ಹೂವಿನ ತೋಟಗಳಿಗೂ ನಷ್ಟ ಸಂಭವಿ ಸುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ 77 ಹೆಕ್ಟೇರ್ ಬೆಳೆ ನಾಶವಾಗಿದೆ. ಹಾಗಾಗಿ, 94 ರೈತರಿಗೆ ಒಟ್ಟು 11.58 ಲಕ್ಷ ರೂ. ಪರಿಹಾರವನ್ನು ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡು
ವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಮುಂದೆ ಆಗುವ ಬೆಳೆ ಹಾನಿಯ ಬಗ್ಗೆಯೂ ನಿಗಾ ಇಡಲಾಗಿದೆ.
ಡಾ.ಕೆ.ಬಿ.ಕೃಷ್ಣಮೂರ್ತಿ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ಜಿಲ್ಲೆಯಲ್ಲಿ ಮತ್ತೆ ಮಳೆ ಸಾಧ್ಯತೆ ಕೋಲಾರ ಜಿಲ್ಲೆಯಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಮತ್ತೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆಗಳಿವೆ. ಚುನಾವಣಾ ಕಾರ್ಯದಲ್ಲೂ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಮುಂಜಾಗ್ರತಾ ಸೂಚನೆಗಳನ್ನು ನೀಡಲಾಗಿದೆ. ಆಲಿಕಲ್ಲು ಬಿರುಗಾಳಿ ಮಳೆಯಿಂದ ಬೆಳೆ ನಾಶವಾದರೆ ತಕ್ಷಣ ಜಿಲ್ಲಾ ಕೇಂದ್ರಕ್ಕೆ ಅಗತ್ಯ ಮಾಹಿತಿಯೊಂದಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಮಾಹಿತಿಯನ್ನು ಕ್ರೋಢೀ ಕರಿಸಿ ಬೆಲೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ
ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.