ಗುರುಭವನದ ಮುಂದೆ ಕಸದ ರಾಶಿ
Team Udayavani, Jun 22, 2020, 7:18 AM IST
ಕೆಜಿಎಫ್: ಗುರುಭವನಕ್ಕೆಂದು ಮೀಸಲಾದ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಘಟಕವಾಗಿ ಮಾರ್ಪಡಿಸಿಕೊಂಡಿದ್ದಾರೆ. ನಗರದ 6ನೇ ಕ್ರಾಸ್ ಬಳಿ ಇರುವ ಗುರುಭವನ ಶಿಕ್ಷಕರ ಬಹುದಿನದ ಕನಸಾಗಿದೆ. ಆದರೆ, ಹಲವು ಕಾರಣಗಳಿಂದಾಗಿ ಭವನ ಕೈಗೂಡಲಿಲ್ಲ. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದೆ.
ಇದನ್ನೇ ದುರುಪಯೋಗ ಪಡೆದ ನಗರಸಭೆ ಸಿಬ್ಬಂದಿ, ಕಟ್ಟಡದ ಆವರಣವನ್ನು ತ್ಯಾಜ್ಯ ವಸ್ತು ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದೆ. ಒಂದೆಡೆ ಗುರುರಾಘವೇಂದ್ರ ಸ್ವಾಮಿಗಳ ಮಠ ಇದೆ. ಮತ್ತೂಂದೆಡೆ ಬಾಲಕಿಯರ ಪಿಯು ಕಾಲೇಜು ಇದೆ. ಇನ್ನೊಂದೆಡೆ ಖಾಸಗಿ ಶಾಲೆ ಇದೆ. ಇಂತಹ ಆಯಕಟ್ಟಿನ ಜಾಗ, ಸದಾ ಜನದಟ್ಟಣೆ ಇರುವ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿಯೇ ಈ ರೀತಿ ತ್ಯಾಜ್ಯ ಸಂಗ್ರಹ ಮಾಡಿದರೆ, ಸಾರ್ವಜನಿಕರು ಹೇಗೆ ಮಾಡಬಹುದು ಎಂಬುದು ಚರ್ಚಿತ ವಿಷಯವಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ಕೈಗಾಡಿಗಳಲ್ಲಿ ತರುತ್ತಾರೆ. ಅವುಗಳನ್ನೆಲ್ಲ, ಈ ಆವರಣದಲ್ಲಿ ಸುರಿಯುತ್ತಾರೆ. ಹಲವು ದಿನಗಳ ಬಳಿಕ ಒಂದಷ್ಟು ತ್ಯಾಜ್ಯವನ್ನು ಟ್ರ್ಯಾಕ್ಟರ್‌ನಲ್ಲಿ ಸುರಿದುಕೊಂಡು ಹೋಗುತ್ತಾರೆ. ಪುನಃ ಅದೇ ಚಾಳಿ ಮುಂದುವರಿಯುತ್ತದೆ. ಕಸ ಕಡ್ಡಿ ಸುರಿಯುವುದರಿಂದ ಕಟ್ಟಡ ಒಳಗೆ ಯಾರೂ ಬರಲು ಸಾಧ್ಯವಾಗುತ್ತಿಲ್ಲ.
ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಸಾರ್ವಜನಿಕರು ಮಲ ಮೂತ್ರ ವಿಸರ್ಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವತ್ಛ ಭಾರತ್ ಆಂದೋಲನ ಅಂಗವಾಗಿ ನಗರದ ಕೋರ್ಟ್ ನ್ಯಾಯಾಧೀಶರು ಇದೇ ಆವರಣದಲ್ಲಿ ಸ್ವತ್ಛ ಭಾರತ ದಿನದ ಪ್ರಯುಕ್ತ ಶ್ರಮದಾನ ಹಮ್ಮಿಕೊಂಡಿದ್ದರು. ಸ್ವಲ್ಪ ದಿನದ ನಂತರ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ ಎಂದು ಸ್ಥಳೀಯ ನಿವಾಸಿ ಆನಂದ್ ಅಭಿಪ್ರಾಯ ಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.