ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ
Team Udayavani, Apr 17, 2021, 1:23 PM IST
ಕೋಲಾರ: ಸರ್ಕಾರದ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣಾ ಕ್ರಮಕೈಗೊಳ್ಳಲು ಅನುವಾಗುವಂತೆ ಅಧಿ ಕಾರಿ, ನೌಕರರನ್ನೊಳಗೊಂಡಂತೆ ಒಂದು ಕಾರ್ಯಾಗಾರ ಹಮ್ಮಿಕೊಳ್ಳಬೇಕುಎಂದು ಸಂಸದ ಎಸ್.ಮುನಿಸ್ವಾಮಿ ಜಿಲ್ಲಾ ನೌಕರರ ಸಂಘದಅಧ್ಯಕ್ಷ ಸುರೇಶ್‌ಬಾಬು ಅವರಿಗೆ ಸಲಹೆ ನೀಡಿದರು.
ನಗರದಲ್ಲಿ ಶುಕ್ರವಾರ ಸಂಸದರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ನೌಕರರ ಸಂಘದ ಪದಾ ಧಿಕಾರಿಗಳು ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಕಾರ್ಯಾಗಾರ ಹಮ್ಮಿಕೊಂಡರೇತಾವೂ ಭಾಗವಹಿಸುತ್ತೇವೆ. ಸರ್ಕಾರಗಳ ಹಲವಾರುಯೋಜ ನೆಗಳ ಕುರಿತು ಜನತೆಗೆ ಅರಿವು ಮೂಡಿಸುವಕೆಲಸವೂ ಆಗಬೇಕಾಗಿದೆ. ಜತೆಗೆ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತದಲ್ಲೂ ಬದಲಾವಣೆತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಆಡಳಿತದಲ್ಲಿ ಸುಧಾರಣೆ ಅಗತ್ಯ: ಸರ್ಕಾರ, ಆಡಳಿತ,ನೌಕರರ, ಜನಪ್ರತಿನಿ ಧಿಗಳು ಎಲ್ಲರ ಮೂಲ ಉದ್ದೇಶಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸರ್ಕಾರದಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವುದೇ ಆಗಿದೆ.ಈ ನಿಟ್ಟಿನಲ್ಲಿ ಆಡಳಿತದಲ್ಲಿ ಸುಧಾರಣೆ ತರುವ ಅಗತ್ಯವಿದೆ.ಸರ್ಕಾರಗಳು ಬಡತನ ನಿರ್ಮೂಲನೆ, ಸಾಮಾಜಿಕ ಭದ್ರತಾಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದೆ. ಕೆಲವುಕಡೆಗಳಲ್ಲಿ ಅವು ಸೂಕ್ತ ಫಲಾನುಭವಿಗಳಿಗೆ ತಲುಪಿಸುವಲ್ಲಿಅಡಚಣೆಯಾಗಿದೆ.
ಈ ಹಿನ್ನಲೆಯಲ್ಲಿ ಜನರ ಕಷ್ಟಗಳಿಗೆಸ್ಪಂದಿಸುವ ಕೆಲಸ ಜನಪ್ರತಿನಿ ಗಳ ಜತೆಗೆ ಆಡಳಿತ ನಡೆಸುವನೌಕರರ ಕಡೆಯಿಂದಲೂ ಆಗಬೇಕು ಎಂದರು.ಕ್ರಿಯಾಶೀಲರಾಗಿ ಕೆಲಸ ಮಾಡಿ: ಕೋವಿಡ್ 2ನೇಅಲೆಯೂ ವ್ಯಾಪಕವಾಗಿ ಹರಡುತ್ತಿದೆ. ಜನತೆಯಲ್ಲಿಲಾಕ್‌ಡೌನ್ ಭೀತಿಯೂ ಆವರಿಸಿದೆ. ಆದರೆ, ಲಾಕ್‌ಡೌನ್ ಮಾಡಿದರೆ ಜನತೆಗೆ ಮತ್ತಷ್ಟು ಸಂಕಷ್ಟಎದುರಾಗುವ ಸಾಧ್ಯತೆ ಇದೆ. ಇದರಿಂದ ಸೋಂಕು ತಡೆಗೆಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಈಕಾರ್ಯದಲ್ಲಿ ಸರ್ಕಾರಿ ನೌಕರರು ಹೆಚ್ಚು ಕ್ರಿಯಾಶೀಲರಾಗಿಕೆಲಸ ಮಾಡಬೇಕು.
ಕೋವಿಡ್ ಮೊದಲನೇ ಅಲೆಸಂದರ್ಭದಲ್ಲಿ ಸರ್ಕಾರಿ ನೌಕರರು ಅತ್ಯಂತ ಹೆಚ್ಚಿನಮುತುವರ್ಜಿ ವಹಿಸಿ, ಕೊರೊನಾ ವಾರಿಯರ್ ರೀತಿಕೆಲಸ ಮಾಡಿದ್ದೀರಿ. ಈಗಲೂ ಅದೇ ಮಾದರಿಯಲ್ಲಿ 2ನೇಅಲೆಯನ್ನು ನಿಯಂತ್ರಿಸಲು ಯುಧ್ದೋಪಾದಿಯಲ್ಲಿಕೆಲಸ ಮಾಡಬೇಕಾಗಿದೆ.
ಸರ್ಕಾರಿ ನೌಕರರ ಎಲ್ಲಾಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು,ಖಜಾಂಚಿ ಕೆ.ವಿಜಯ್, ಗೌರವ ಅಧ್ಯಕ್ಷ ಶ್ರೀನಿವಾಸ ರೆಡ್ಡಿ,ರಾಜ್ಯ ಜಂಟಿ ಕಾರ್ಯದರ್ಶೀ ಕೆ.ಎನ್.ಮಂಜುನಾಥ್,ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಆಂತರಿಕ ಲೆಕ್ಕ ಪರಿಶೋಧಕವೆಂಕಟೇಶ ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ತಾಲೂಕುಕಾರ್ಯಾಧ್ಯಕ್ಷ ಆರ್.ನಾಗರಾಜ್, ಭೂ ಮಾಪನಾಇಲಾಖೆಯ ಸುಭಾಷ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.