Digital Sakhi program: ವಿನೂತನ ಡಿಜಿಟಲ್‌ ಸಖಿ ಕಾರ್ಯಕ್ರಮ


Team Udayavani, Oct 31, 2023, 4:05 PM IST

tdy-13

ಕೋಲಾರ: ಗ್ರಾಮೀಣ ಮಹಿಳೆಯರನ್ನು ಡಿಜಿಟಲ್‌ ಸಾಕ್ಷರರನ್ನಾಗಿಸುವ ವಿನೂತನ ಡಿಜಿಟಲ್‌ ಸಖಿ ಕಾರ್ಯಕ್ರಮ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಕಾರ್ಯಗತವಾಗುತ್ತಿದೆ.

ಒಂದೂವರೆ ವರ್ಷದ ಹಿಂದೆ ಕರ್ನಾಟಕದ ಕೋಲಾರ, ತುಮಕೂರು, ಬೀದರ್‌ ಮತ್ತು ಗುಲ್ಬರ್ಗ ಮತ್ತು ಕೇರಳದ ಅಲೆಪ್ಪಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ 4100 ಸಮುದಾಯದ ಸದಸ್ಯರಿಗೆ ಮತ್ತು ಫೈನಾನ್ಷಿಯಲ್‌ ಕುರಿತಾದ ತರಬೇತಿಯನ್ನು ಹಾಗೂ 410 ಡಿಜಿಟಲ್‌ ಸಖಿಯರು 4100 ಮಹಿಳಾ ಉದ್ಯಮಿಗಳಿಗೆ ಸಹಾಯ ಹಸ್ತದ ನೆರವಿನೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ.

ಏನಿದು ಡಿಜಿಟಲ್‌ ಸಖಿ: ಡಿಜಿಟಲ್‌ ಸಖಿ ಕಾರ್ಯಕ್ರಮವು ಎಲ್‌ ಅಂಡ್‌ ಟಿ ಫೈನಾನ್ಷಿಯಲ್‌ ಅಂಡ್‌ ಸರ್ವಿಸ್‌ ಅನುದಾನದಡಿಯಲ್ಲಿ ಆಕ್ಸೆಸ್‌ ಲೈವಿÉಹುಡ್‌ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದ್ದು , ಡಿಜಿಟಲ್‌ ಸಾಕ್ಷರತೆ, ಉದ್ಯಮ ಅಭಿವೃದ್ಧಿ, ಜೀವನೋಪಾಯಗಳನ್ನು ವೃದ್ಧಿಸುವ ಕಾರ್ಯಕ್ರಮ ಇದಾಗಿದೆ. ಡಿಜಿಟಲ್‌ ಸಖಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ತರಬೇತಿ ನೀಡಿ ಅವರನ್ನು ಸಮುದಾಯ ಮಟ್ಟದಲ್ಲಿ ಡಿಜಿಟಲ್‌ ಸಾಕ್ಷರತೆಯನ್ನು ನೀಡುವ ಗುರಿಯನ್ನು ಹೊಂದಿದ್ದು, ಅವರೇ ಸಮುದಾಯದ ನಾಯಕರನ್ನಾಗಿಸುವ ಮೂಲಕ ತರಬೇತಿಗಳನ್ನು ನೀಡುವ ಸಮುದಾಯದ ಕಾರ್ಯಕರ್ತರನ್ನಾಗಿ ಅಭಿವೃದ್ಧಿ ಪಡಿಸುವ ಡಿಜಿಟಲ್‌ ಸಖಿಯರು ಹಣಕಾಸು ಸಾಕ್ಷರತೆಯನ್ನು ತಿಳಿಸುವಂತೆ ಮಾಡುವುದು ಈ ಕಾರ್ಯಕ್ರಮದ ಭಾಗವಾಗಿದೆ.

ಉದ್ದೇಶಗಳೇನು?: ವೈಯಕ್ತಿಕ ಹಣಕಾಸು ಮತ್ತು ಡಿಜಿಟಲ್‌ ಮೂಲಕ ಪಾವತಿಸುವ ಕುರಿತು ಹೆಚ್ಚಿನ ಜಾಗೃತಿ ಮತ್ತು ಜ್ಞಾನ ಹಾಗೂ ಡಿಜಿಟಲ್‌ ಸಾಕ್ಷರತೆಯ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಸುವುದು. ಗ್ರಾಮೀಣ ಮಹಿಳೆಯರನ್ನು ಜೀವನೋಪಾಯಗಳನ್ನು ಹೆಚ್ಚಿಸಲು ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದು ಉದ್ದಿಮೆಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು  ನೀಡುವ ಸಬಲೀಕರಣ, ಮಹಿಳೆಯರನ್ನು ಕುಟುಂಬಗಳಲ್ಲೇ ಮತ್ತು ಸಮುದಾಯಗಳಲ್ಲೇ ಸಬರನ್ನಾಗಿಸುವುದು ಪ್ರಮುಖ  ಉದ್ದೇಶವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಡಿಜಿಟಲ್‌ ಸಖಿ: ಒಂದೂವರೆ ವರ್ಷದ ಹಿಂದೆ ಕೋಲಾರ ಜಿಲ್ಲೆಯಲ್ಲಿ ಈ ಡಿಜಿಟಲ್‌ ಸಖೀ ಆರಂಭವಾಗಿದೆ. ಮುಳಬಾಗಿಲು ತಾಲೂಕು ಹಾಗೂ ಕೋಲಾರ, ಶ್ರೀನಿವಾಸಪುರ ಮತ್ತು ಬಂಗಾರಪೇಟೆಯಲ್ಲಿ ತಲಾ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 60 ಮಂದಿ ಡಿಜಿಟಲ್‌ ಸಖಿಯರನ್ನು ನೇಮಕ ಮಾಡಿಕೊಂಡಿದ್ದು , ಇವರು ನಾಲ್ಕು ಕ್ಲಸ್ಟರ್‌ಗಳನ್ನಾಗಿ ವಿಂಗಡಿಸಿದ್ದು, ರುಕ್ಸರ್‌, ಮಂಜುಳಾ, ಶ್ವೇತಾ ಮತ್ತು ಸಂತೋಷ್‌ ಕ್ಲಸ್ಟರ್‌ ಮ್ಯಾನೇಜರ್‌ಗಳಾಗಿದ್ದಾರೆ. ಪ್ರಾಜೆಕ್ಟ್ ಮ್ಯಾನೇಜರ್‌ ಆಗಿ ಎಚ್‌.ಆರ್‌.ಮಲ್ಲೇಶ್‌ ರೇವೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿಜಿಟಲ್‌ ಸಖೀಯರ ಕಾರ್ಯಗಳೇನು?: ತಮಗೆ ನಿಗದಿಯಾದ ಗ್ರಾಮಗಳಲ್ಲಿನ ಪ್ರತಿ ಮನೆಯ ಮಹಿಳೆಯರನ್ನು ದಿನದ ಅನುಕೂಲವಾದ ಸಮಯದಲ್ಲಿ ಡಿಜಿಟಲ್‌ ಸಖಿಯರು ಭೇಟಿ ಮಾಡಿ ಅವರಿಗೆ ಡಿಜಿಟಲ್‌ ಪಾಟ್‌ಫಾರಂ ವ್ಯವಹಾರಗಳಾದ ಫೋನ್‌ ಪೇ ಪೇಮೆಂಟ್‌, ಒಟಿಪಿ, ಎಟಿಎಂ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳೆಂದರೇನು ಬ್ಯಾಂಕ್‌ ವ್ಯವಹಾರ ಹೇಗೆ ಎಂಬಿತ್ಯಾದಿ ಕುರಿತು ತರಬೇತಿ ನೀಡುತ್ತಾರೆ.

ಹೀಗೆ ಮಾಹಿತಿ ನೀಡಿದ ಮಹಿಳೆಯರಿಗೆ ಕುಟುಂಬದ ಆಯ ವ್ಯಯ ದಾಖಲಿಸಲು ವರ್ಕ್‌ ಬುಕ್‌ ನೀಡುವುದು ಮೊಬೈಲ್‌ ಬಳಸುವವರಿಗೆ ಆಯವ್ಯಯ ದಾಖಲಿಸಲು ಕ್ರಿಯೋ ಆಪ್‌ ಬಳಸುವಂತೆ ಸೂಚಿಸುವುದು. ಇದರಿಂದ ಮಹಿಳೆಯರಿಗೆ ಕುಟುಂಬದ ಆದಾಯವೆಷ್ಟು, ಖರ್ಚು ಎಷ್ಟು, ಉಳಿತಾಯ ಆಗುತ್ತಿದೆಯೇ ಆದಾಯಕ್ಕಿಂತೂ ಹೆಚ್ಚಿನ ಹಣ ವೆತ್ಛವಾಗುತ್ತಿದೆಯೇ ಎಂಬುದರ ಕುರಿತು ನಿಗಾ ಇಡುವುದನ್ನು ಕಲಿಸಲಾಗುವುದು. ನಂತರ ಈ ಮಹಿಳೆಯರಲ್ಲಿ  ಉದ್ಯಮಶೀಲತಾ ತರಬೇತಿಯನ್ನು ನೀಡುವ ಮೂಲಕ ಗೃಹೋದ್ಯಮ ಉದ್ದಿಮೆದಾರರನ್ನಾಗಿಸಲು ಪ್ರೋತ್ಸಾಹಿಸುತ್ತಾರೆ. ಈಗಾಗಲೇ ಉದ್ದಿಮೆದಾರರಾಗಿರುವವರನ್ನು ಗುರುತಿಸಿ ಅವರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಡಿಜಿಟಲ್‌ ಸಖಿಯರ ಕಾರ್ಯಕ್ರಮವಾಗಿದೆ.

ಶಾಲಾ ಕಾಲೇಜುಗಳಲ್ಲಿ ಮಾಹಿತಿ: ಗ್ರಾಮೀಣ ಮಹಿಳೆಯರನ್ನು ಅವರ ಮನೆಗೆ ಹೋಗಿ ಡಿಜಿಟಲ್‌ ಸಾಕ್ಷರನ್ನಾಗಿಸುವುದರ ಜೊತೆಗೆ, ಶಾಲಾ ಕಾಲೇಜುಗಳಿಗೆ ತೆರಳು 13 ರಿಂದ 65 ವರ್ಷದ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಸಮುದಾಯ ಭೇಟಿಯ ಮೂಲಕ ಸಂಪರ್ಕಿಸಲಾಗುವುದು.

ಡಿಜಿಟಲ್‌ ಸಖಿ ಕಾರ್ಯಕ್ರಮ ಕುರಿತು ಮೌಖೀಕ ಭೇಟಿಯಲ್ಲಿ ತಿಳಿಸುವುದರ ಜೊತೆಗೆ, ಪಿಪಿಟಿ ಪ್ರದರ್ಶನ, ಗೋಡೆ ಬರಹ, ಶಿಬಿರಗಳ ಮೂಲಕ, ಆರೋಗ್ಯ ಶಿಬಿರ, ವಿವಿಧ ಈವೆಂಟ್ಸ್‌ ಆಯೋಜನೆ,  ಸ್ಪರ್ಧೆ, ಬಹುಮಾನ ವಿತರಣೆಯ ಮೂಲಕವು ಸಾಮುದಾಯಿಕವಾಗಿ ಮಾಹಿತಿ ನೀಡಲಾಗುತ್ತಿದೆ.

ಕೋಲಾರ ಮೊದಲು: ಡಿಜಿಟಲ್‌ ಸಖಿ ಕಾರ್ಯಕ್ರಮವು ಕರ್ನಾಟಕ, ಕೇರಳ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನವಾಗುತ್ತಿದ್ದರೂ ಕೋಲಾರ ಜಿಲ್ಲೆಯ ಅನುಷ್ಠಾನ ಮೊದಲ ಸ್ಥಾನದಲ್ಲಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಿಜಿಟಲ್‌ ಸಖಿ ಮೂಲಕ ನೀಡಿರುವ ಎಲ್ಲಾ ರೀತಿಯ ಗುರಿಯನ್ನು ಕೋಲಾರ ಜಿಲ್ಲೆಯಲ್ಲಿ ತಲುಪಿರವುದಕ್ಕೆ ಈ ಬಹುಮಾನ ದೊರೆತಿದೆ. ಡಿಜಿಟಲ್‌ ಸಖಿಯರ ಕಾರ್ಯಕ್ಷಮತೆ ಜೊತೆಗೆ ಕೋಲಾರ ಜಿಲ್ಲೆಯ ಗ್ರಾಮೀಣ ಮಹಿಳೆಯರು ಡಿಜಿಟಲ್‌ ವ್ಯವಹಾರ ಕಲಿತುಕೊಳ್ಳಲು ತೋರುತ್ತಿರುವ ಆಸಕ್ತಿಯೂ ಇದಕ್ಕೆ ಕಾರಣವಾಗಿದೆ. ಇದರಿಂದ ಉತ್ತೇಜಿತವಾಗಿರುವ ಕಾರ್ಯಕ್ರಮ ಆಯೋಜಕರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವ ಮೂಲಕ ತ್ವರಿತಗತಿಯಲ್ಲಿ ಕೋಲಾರ ಮಹಿಳೆಯರನ್ನು ಡಿಜಿಟಲ್‌ ಸಾಕ್ಷರರನ್ನಾಗಿಸುತ್ತಿದ್ದಾರೆ.

ಡಿಜಿಟಲ್‌ ಸಖಿಯರನ್ನಾಗಿ ಕೋಲಾರ ಜಿಲ್ಲೆಯಲ್ಲಿ 60 ಮಂದಿಯನ್ನು ನೇಮಕ ಮಾಡಿಕೊಂಡು ಗೌರವ ಧನ ನೀಡಿ ಅವರಿಗೆ ತರಬೇತಿ ನೀಡಿ ಡಿಜಿಟಲ್‌ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮುಳಬಾಗಿಲು ತಾಲೂಕಿನಲ್ಲಿ ನಡೆಸಲಾಗುತ್ತಿದೆ. ನಂತರ ಇಡೀ ಜಿಲ್ಲೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.– ಮಂಜುಳಾ, ಕ್ಲಸ್ಟರ್‌ ವ್ಯವಸ್ಥಾಪಕರು. 

ಡಿಜಿಟಲ್‌ ಸಖಿ ಐದು ವರ್ಷಗಳ  ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಉದ್ದೇಶಿದ ತಾಲೂಕುಗಳ ಎಲ್ಲಾ ಗ್ರಾಮ ಗಳ ಎಲ್ಲಾ ಮನೆಗಳನ್ನು ತಲುಪಿ ಪ್ರತಿ ಮಹಿಳೆಯರನ್ನು ಡಿಜಿಟಲ್‌ ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಡಿಜಿಟಲ್‌ ಸಖೀಯರು ಆಸಕ್ತಿಯಿಂದ ಶ್ರಮಿಸುತ್ತಿದ್ದಾರೆ. ಮಂಗಳವಾರ ಡಿಜಿಟಲ್‌ ಸಖಿಯರ ಜಿಲ್ಲಾ ಮಟ್ಟದ ಕಾರ್ಯಾಗಾರವು ಕೋಲಾರದಲ್ಲಿ ನಡೆಯುತ್ತಿದೆ.-ರುಕ್ಸರ್‌, ಕ್ಲಸ್ಟರ್‌ ವ್ಯವಸ್ಥಾಪಕರು.

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.