ನೀರು, ಆಹಾರಕ್ಕೆ ಕಾಡು ತೊರೆಯುತ್ತಿವೆ ಪ್ರಾಣಿಗಳು

ರೈತರಿಗೆ ಬೆಳೆ ಹಾನಿಯ ಸಂಕಷ್ಟ • ಗ್ರಾಮಗಳಲ್ಲೇ ಓಡಾಡುತ್ತಿರುವ ನವಿಲು, ಜಿಂಕೆಗಳು, ಕೋತಿಗಳು

Team Udayavani, Apr 25, 2019, 11:06 AM IST

kolar tdy 3

ಕೋಲಾರ: ಸತತ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಬೇಸಿಗೆಯ ಬೇಗೆ ತಡೆಯಲಾಗದೇ ಕಾಡುಪ್ರಾಣಿಗಳು, ಪಕ್ಷಿಗಳು ವಸತಿ ಪ್ರದೇಶಗಳತ್ತ ಬರುತ್ತಿರುವುದು ದಯಾನೀಯ ಸ್ಥಿತಿಗೆ ಸಾಕ್ಷಿಯಾಗಿದ್ದರೆ, ಅವುಗಳ ಉಪಟಳದಿಂದ ರೈತರು ಸಂಕಷ್ಟಕ್ಕೀಡಾಗುತ್ತಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಐದು ಅರಣ್ಯ ವಲಯಗಳಿದ್ದು, ಶ್ರೀನಿವಾಸಪುರದಲ್ಲಿ ಅತೀ ಹೆಚ್ಚು ಅಂದರೆ 18,274 ಹೆಕ್ಟೇರ್‌ ಅರಣ್ಯವಿದೆ. ಉಳಿದಂತೆ ಕೋಲಾರದಲ್ಲಿ 7053 ಹೆಕ್ಟೇರ್‌, ಮಾಲೂರಿನಲ್ಲಿ 7368 ಹೆಕ್ಟೇರ್‌, ಬಂಗಾರಪೇಟೆಯಲ್ಲಿ 8922 ಹೆಕ್ಟೇರ್‌, ಮುಳಬಾಗಿಲು ತಾಲೂಕಿನಲ್ಲಿ 9214 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯಪ್ರದೇಶ ವ್ಯಾಪಿಸಿದೆ.

ಕಾಡಲ್ಲಿರುವ ಪ್ರಾಣಿಗಳು: ಜಿಲ್ಲೆಯ ಅರಣ್ಯಗಳಲ್ಲಿ ಕೋತಿ, ಮೊಲ, ಜಿಂಕೆ ಮತ್ತು ನವಿಲು ಯಥೇಚ್ಛವಾಗಿ ಕಂಡುಬಂದರೆ ಕೆಜಿಎಫ್‌ ತಾಲೂಕಿನ ಕೃಷ್ಣಾವರಂ ಭಾಗದಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳು ಇದೆ. ಉಳಿದಂತೆ ಕಾಡುಹಂದಿ, ಚಿರತೆ ಇನ್ನಿತರೆ ವನ್ಯಜೀವಿ ಗಳು ಎಲ್ಲಾ ಅರಣ್ಯಗಳಲ್ಲೂ ಕಂಡುಬರುತ್ತಿದೆ.

ನಾಡಿಗೆ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರದ ಹಿನ್ನೆಲೆಯಲ್ಲಿ ಜನಜಾನುವಾರುಗಳ ಜತೆಗೆ ಕಾಡುಪ್ರಾಣಿಗಳಿಗೂ ನೀರಿಗೆ ತತ್ವಾರ ಉಂಟಾಗಿದೆ. ಕಾಡುಪ್ರಾಣಿಗಳಿಗೆ ಆಹಾರವೂ ಸಿಗುತ್ತಿಲ್ಲ. ಜನಜಾನುವಾರುಗಳಿಗೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ, ಜಿಪಂ ಮಾಡುತ್ತಿದ್ದರೆ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕು. ಈ ದಿಸೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದ್ದರೂ ಕಾಡುಪ್ರಾಣಿಗಳು ನೀರಿಗಾಗಿ ನಾಡಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ನೀರು ಹುಡುಕಾಡುತ್ತಾ ಕಾಡಿನಿಂದ ನಾಡಿಗೆ ರಸ್ತೆ ದಾಟಿಕೊಂಡು ಬರುವಾಗ ವಾಹನ ಡಿಕ್ಕಿಯಾಗಿ ಇಲ್ಲವೇ ಊರೊಳಗೆ ಬೀದಿ ನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗುತ್ತಿರುತ್ತದೆ. ಕಳೆದ ತಿಂಗಳು ವಕ್ಕಲೇರಿ ಅರಣ್ಯ ವ್ಯಾಪ್ತಿಯಲ್ಲಿ ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು 6 ಜಿಂಕೆಗಳು ಮೃತಪಟ್ಟಿತ್ತು. ಅಂತರಗಂಗೆ ಬೆಟ್ಟದಲ್ಲೂ ಇದೇ ರೀತಿ ವಿಷಾಹಾರ ತಿಂದು ಕೋತಿಗಳು ಮೃತಪಟ್ಟಿದ್ದವು. ಇದೆಲ್ಲದಕ್ಕೂ ಕಾಡಿನ ಜೀವ ಸಂಕುಲಗಳಿಗೆ ನೀರು, ಆಹಾರ ಇಲ್ಲದಿಂದ ಉಂಟಾಗಿರುವ ಪ್ರಾಣಹಾನಿಗಳಾಗಿದೆ.

ಜಿಂಕೆ, ಕಾಡುಹಂದಿಗಳು ಗ್ರಾಮದಲ್ಲೇ ಓಡಾಟ: ತಾಲೂಕಿನ ಹೋಳೂರು-ಬೆಣ್ಣಂಗೂರು ಮಾರ್ಗದಲ್ಲಿ ಅರಣ್ಯ ಪ್ರದೇಶವಿದ್ದು, ಇಲ್ಲಿ ಜಿಂಕೆ, ನವಿಲು, ಕಾಡುಹಂದಿ ಹೆಚ್ಚಾಗಿದೆ. ಹೋಳೂರು ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ನವಿಲುಗಳು ಕಾಡು ಬಿಟ್ಟು ನಾಡಿಗೆ ಬಂದಿದೆ. ನೀರು, ಆಹಾರವಿಲ್ಲದೆ ಸಂಕಷ್ಟ ಪಡುತ್ತಿರುವ ನವಿಲುಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಹಗಲು ವೇಳೆಯಲ್ಲೇ ಊರಿನಲ್ಲಿ ಮನೆಗಳ ಬಳಿ ಓಡಾಡಿಕೊಂಡು ನೀರು, ಆಹಾರವನ್ನು ಬಯಸುತ್ತಿವೆ. ಹಿಂದೆಂದೂ ಈ ಪ್ರಮಾಣದಲ್ಲಿ ನವಿಲುಗಳು ಊರಿನೊಳಗೆ ಬಂದಿದ್ದಿಲ್ಲ ಎನ್ನುತ್ತಾರೆ ಬೆಣ್ಣಂಗೂರು ಗ್ರಾಮಸ್ಥರು.

ಹೋಳೂರು ಮಾತ್ರವಲ್ಲದೆ ಮಾರೇನಹಳ್ಳಿ, ಘಟ್ಟಹಳ್ಳಿ, ಜಡೇರಿ, ಬೆಣ್ಣಂಗೂರು, ನಾಯಕರಹಳ್ಳಿ, ಅಣ್ಣೇನಹಳ್ಳಿ ಹೀಗೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಜಿಂಕೆ, ನವಿಲುಗಳು ನಾಡಿನೊಳಕ್ಕೆ ಬಂದು ನೀರು, ಆಹಾರ ಅರಸುತ್ತಿದೆ. ಬೇತಮಂಗಲ ರಸ್ತೆಯಲ್ಲಿ ಬರುವ ನಡುಪಳ್ಳಿ ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ. ಜಿಂಕೆಗಳ ಕಾಟಕ್ಕೆ ಬೆಳೆಗಳನ್ನು ಕಳೆದುಕೊಂಡು ಹೈರಾಣವಾಗಿದ್ದೇವೆ ಎನ್ನುತ್ತಾರೆ ನಿವಾಸಿಗಳು. ಜಿಂಕೆಗಳು ರಾತ್ರಿಯಾಗುತ್ತಿದ್ದಂತೆಯೇ ಹಿಂಡುಹಿಂಡಾಗಿ ಹೊಲಗದ್ದೆಗಳತ್ತ ದೌಡಾಯಿಸುತ್ತಿದ್ದು, ಟೊಮೆಟೋ ಸೇರಿದಂತೆ ನಾಟಿ ಮಾಡಿರುವ ತರಕಾರಿಗಳ ಗಿಡದ ಚಿಗುರುಗಳನ್ನೇ ತಿಂದು ಹಾಕುತ್ತಿದೆ. ನವಿಲುಗಳು ಹನಿ ನೀರಾವರಿಯ ಪೈಪ್‌ಗ್ಳನ್ನು ಅಲ್ಲಲ್ಲಿ ತನ್ನ ಕೊಕ್ಕಿನಿಂದ ಕುಟುಕಿ ನೀರು ಕುಡಿಯುತ್ತಿರುವುದರಿಂದ ರೈತರ ಡ್ರಿಪ್‌ನ ಪೈಪ್‌ಗ್ಳು ಹಾಳಾಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ.ಕಾಡುಹಂದಿಗಳು ಆಲೂಗಡ್ಡೆ, ಮುಸುಕಿನ ಜೋಳ ತಿಂದು ಹಾಕುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಕಾಡುಹಂದಿಯೊಂದು ರೈತರೊಬ್ಬರ ಮೇಲೆರಗಿ ದಾಳಿ ಮಾಡಿದ್ದರಿಂದ ತೀವ್ರ ಗಾಯಗೊಂಡು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ಜತೆ ಸೆಣಸಾಡಿ ಅಸುನೀಗಿದ್ದನ್ನು ಸ್ಮರಿಸಿಕೊಳ್ಳಬಹುದು.

ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳ ನಿರ್ಮಾಣ:
ಹೋಳೂರು ಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ನರೇಗಾದನ್ವಯ ಅಲ್ಲಲ್ಲಿ ಕುಂಟೆಗಳನ್ನು ನಿರ್ಮಿಸಲಾಗಿದ್ದರೂ ನೀರು ತುಂಬಿಸುವ ಕಾರ್ಯ ನಡೆಯುತ್ತಿಲ್ಲ. ಗ್ರಾಮಗಳಲ್ಲಿನ ಯುವಕರು ಸ್ವಯಂಪ್ರೇರಿತರಾಗಿ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಟ್ಯಾಂಕರ್‌ ಮೂಲಕ ನೀರು ತುಂಬಿಸಿದ್ದರೂ ಅವು ಸಾಕಾಗುತ್ತಿಲ್ಲ. ಹೀಗಾಗಿ ನವಿಲು, ಜಿಂಕೆಗಳು ನೀರು, ಆಹಾರಕ್ಕೆ ಊರೊಳಗೆ ಬರುತ್ತಿದೆ. ಹೋಳೂರು ದೊಡ್ಡಕೆರೆ ಕೆ.ಸಿ.ವ್ಯಾಲಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದು, ಇತ್ತೀಚೆಗೆ ಕೆರೆ ಸುತ್ತಮುತ್ತ ಬೆಳೆದು ನಿಂತಿದ್ದ ನೀಲಗಿರಿ ಮರ ಕಡಿಯಲಾಗಿದೆ. ಕಳೆದ ಕೆಲ ವಾರಗಳಿಂದ ನವಿಲುಗಳು ಊರಿನೊಳಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ನೀರಿಗಾಗಿ ತೊಟಗಳಲ್ಲಿನ ಡ್ರಿಪ್‌ನ ಪೈಪ್‌ಗ್ಳನ್ನು ಕುಟುಕಿ ಹಾನಿ ಮಾಡುತ್ತಿದೆ. ಕಾಡುಹಂದಿಯ ಕಾಟಕ್ಕೆ ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಅರಣ್ಯ ಇಲಾಖೆಗೆ ಮೌಖೀಕವಾಗಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಹೋಳೂರು ಗ್ರಾಮದ ರೈತರು.

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.