ಪ್ರಮಾಣ ಪತ್ರ ಪಡೆಯಲು ಬರುವ ಅಂಗವಿಕಲರಿಗೆ ಅನ್ನದಾನ ಸೇವೆ
Team Udayavani, May 10, 2019, 4:04 PM IST
ಕೋಲಾರ: ಮಹಾನ್ ಪೋಷಣಾ ಎಜುಕೇಶನ್ ಟ್ರಸ್ಟ್ ವತಿಯಿಂದ ಅಂಗವಿಕಲರಿಗೆ ಸರ್ಕಾರಿ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಂಗವಿಕಲರ ಪ್ರಮಾಣಪತ್ರಕ್ಕೆ ಬರುವವರಿಗೆ ಅನ್ನದಾನ ಮಾಡಲಾಗುತ್ತಿದೆ.
ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಎಂ.ವೆಂಕಟರಾಮಪ್ಪ ಮಾತನಾಡಿ, ಆಹಾರ ಪ್ರತಿ ಜೀವಿಗೂ ಮುಖ್ಯವಾಗಿದೆ. ಅಂಗವಿಕಲರಿಗೆ ಆಹಾರ ನೀಡುವುದು ಮಹಾದಾನವೆಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಸಂತೋಷ್‌ಪ್ರಭು ಮಾತನಾಡಿ, ಇಂತಹ ಜನರಿಗೆ ಉಪಯೋಗವಾಗುವಂತ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವುದು ಸೂಕ್ತವೆಂದರು.
ಮಹಾನ್ ಪೋಷಣಾ ಎಜುಕೇಷನ್ ಕಾರ್ಯದರ್ಶಿ ಎಚ್.ಶ್ರೀನಿವಾಸಪ್ಪ ಮಾತನಾಡಿ, ಭಗವಂತನ ಕೃಪೆಯಿಂದ ನಮಗೆ ಸಿಕ್ಕ ಅವಕಾಶದಲ್ಲಿ ಮನುಷ್ಯರಿಗೆ ಸಹಾಯ ಮಾಡುವುದು ಮಾನವ ಧರ್ಮವೆಂದರು.
ಆಸ್ಪತ್ರೆಯ ವ್ಯವಸ್ಥಾಪಕ ಸಂದಪ್ಪ ಅಂಗವಿಕಲರಿಗೆ ಅನ್ನ ವಿತರಿಸಿದರು. ಶಿಳ್ಳಂಗೆರೆ ಮಹೇಶ್, ಎಸ್‌ಎನ್‌ಆರ್ ಗೋವಿಂದು, ಜನ್ನಘಟ್ಟ ನಾರಾಯಣಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.