ನೇಮಕ: ಸಂಪಂಗಿಗೆ ಮುಖಭಂಗ
Team Udayavani, Jun 9, 2020, 7:03 AM IST
ಬಂಗಾರಪೇಟೆ: ಪಟ್ಟಣದಲ್ಲಿನ ಎಪಿಎಂಸಿಗೆ ಮೂರನೇ ಬಾರಿಗೆ ನಾಮನಿರ್ದೇಶಿತ ಸದಸ್ಯರನ್ನು ಬದಲಾವಣೆ ಮಾಡಿ ಆದೇಶ ಮಾಡಿದೆ. ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಬೆಂಬಲಕ್ಕೆ ನಿಂತಿದ್ದು, ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಜಿಪಂ ಸದಸ್ಯ ಜಯಪ್ರಕಾಶ ನಾಯ್ಡುಗೆ ಮುಖಭಂಗವಾಗಿದೆ.
ಜೂ.10 ರಂದು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ಅಧಿಕಾರ ಹಿಡಿಯಲು ಬಿಜೆಪಿ ಲಾಬಿ ಮಾಡುತ್ತಿದೆ. ಬಿಜೆಪಿಯಿಂದ ಗೆದ್ದಿರುವ 6 ಸದಸ್ಯರ ಜೊತೆಗೆ ಬಹುಮತಕ್ಕಾಗಿ ಸರ್ಕಾರದ ಮೂವರು ನಾಮನಿರ್ದೇಶಿತ ಸದಸ್ಯರ ಅಗತ್ಯವಿದೆ. ಇದರಿಂದ ಇಬ್ಬರು ಮಾಜಿ ಶಾಸಕರ ನಡುವಿನ ರಾಜಕೀಯ ಪೈಪೋಟಿಗೆ ರಾಜ್ಯ ಬಿಜೆಪಿಯಲ್ಲಿ ಗೊಂದಲ ಉಂಟಾಗಿತ್ತು.
ಮೊದಲ ಬಾರಿಗೆ ಆದೇಶ: ಹಿಂದಿನಿಂದಲೂ ಮೂರು ನಾಮನಿರ್ದೇಶನ ಸ್ಥಾನಗಳಲ್ಲಿ ಬಂಗಾರಪೇಟೆ ತಾಲೂಕಿಗೆ ಎರಡು, ಕೆಜಿಎಫ್ಗೆ ಒಂದು ಸ್ಥಾನ ಬಿಟ್ಟುಕೊಡಲಾಗುತ್ತಿತ್ತು. ಅದರಂತೆ ಸರ್ಕಾರ ಜೂ.1ರಂದು ಬಂಗಾರಪೇಟೆ ತಾಲೂಕಿನಿಂದ ಕೆ.ಸಿ.ಸೀತಾರಾಮಪ್ಪ, ಎಂ.ವಿ.ಚಂದ್ರಕಲಾ ಹಾಗೂ ಕೆಜಿಎಫ್ ತಾಲೂಕಿಂದ ಅಮರನಾರಾಯಣರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಇದರಿಂದ ಬೇಸರಗೊಂಡ ವೈ.ಸಂಪಂಗಿ ಹಾಗೂ ಜಿಪಂ ಸದಸ್ಯ ಜಯಪ್ರಕಾಶ ನಾಯ್ಡು ಸಂಸದ ಎಸ್. ಮುನಿಸ್ವಾಮಿ ಶಿಫಾರಸು ಮೂಲಕ ಬಂಗಾರಪೇಟೆಗೆ ನೀಡಿದ್ದ ಎರಡು ನಾಮನಿರ್ದೇಶಿತ ಸದಸ್ಯರನ್ನು ರದ್ದು ಮಾಡಿಸಿ, ರಾಮಸಾಗರ ಹೇಮಾರೆಡ್ಡಿ ಹಾಗೂ ತೊಂಗಲಕುಪ್ಪ ಮಂಗಮ್ಮರನ್ನು ನೇಮಿಸಲಾಗಿತ್ತು. ಇದರ ವಿರುದ ಬಂಡೆದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕೆಲವು ರಾಜ್ಯ ಬಿಜೆಪಿ ಮುಖಂಡರ ಸಹಕಾರದೊಂದಿಗೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ನೇರವಾಗಿ ಭೇಟಿಯಾಗಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರನ್ನು ಕಡೆಗಣಿಸಲಾಗಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು.
ಬಂಗಾರಪೇಟೆ ಎಪಿಎಂಸಿ ಸುಲಭವಾಗಿ ಬಿಜೆಪಿ ಪಾಲಾಗುತ್ತಿರುವುದನ್ನು ತಪ್ಪಿಸಲು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ನಾಮನಿರ್ದೇಶಿತ ಸ್ಥಾನಗಳ ಬದಲಾವಣೆ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ. ಕಳೆದ 10 ವರ್ಷಗಳಲ್ಲಿ ಎರಡು ಬಾರಿ ಬಿಜೆಪಿಗೆ ಅಧಿಕಾರವನ್ನು ತಪ್ಪಿಸುವ ದುರುದ್ದೇಶದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ಶಾಮೀಲಾಗಿದ್ದರಿಂದ ಒಂದು ಬಾರಿ ಅಧ್ಯಕ್ಷ ಸ್ಥಾನ ಹಾಗೂ ಒಂದು ಬಾರಿ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿರುವ ವಿಚಾರಗಳನ್ನೂ ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಜೂ.6ರಂದು ಆದೇಶದಂತೆ ನೇಮಿಸಿದ್ದ ರಾಮಸಾಗರ ಹೇಮಾರೆಡ್ಡಿ ಹಾಗೂ ತೊಂಗಲಕುಪ್ಪ ಮಂಗಮ್ಮ ಅವರ ನೇಮಕವನ್ನು ರಾಜ್ಯ ಸರ್ಕಾರ ರದ್ದು ಮಾಡಿ, ಮೊದಲ ಆದೇಶ ಪ್ರಕಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.