ಎಂಎಲ್‌ಎ ಮಾಡ್ತೇನೆಂದು ಕೆಎಚ್‌ಎಂ ಆಣೆ ಮಾಡಿದ್ದಾರೆ
Team Udayavani, Feb 8, 2022, 1:36 PM IST
ಕೋಲಾರ: ನಿಮ್ಮನ್ನು ಕೋಲಾರ ಶಾಸಕರನ್ನಾಗಿ ಮಾಡುತ್ತೇನೆ ಎಂದು ಕೆ.ಎಚ್.ಮುನಿಯಪ್ಪಅವರು ಪರಮಾತ್ಮನ ಮೇಲೆ ಆಣೆ ಮಾಡಿದ್ದು, ಯಾವುದೇ ಕಾರಣಕ್ಕೂ ಅವರು ನನಗೆ ಅಡೆತಡೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅರಿಕೆರೆ ಮಂಜುನಾಥಗೌಡ ವಿಶ್ವಾಸ ವ್ಯಕ್ತಪಡಿಸಿದರು.
ದೊಡ್ಡವಲ್ಲಬಿ ಗ್ರಾಮಕ್ಕೆ ಭೇಟಿ ನೀಡಿದಚೆನ್ನಕೇಶವಸ್ವಾಮಿ ದೇವಾಲಯ ನಿರ್ಮಾಣಕ್ಕೆ 5ಲಕ್ಷ ರೂ. ದೇಣಿಗೆ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆ.ಎಚ್.ಮುನಿಯಪ್ಪ ಅವರೇ ನನ್ನನ್ನು ಕೋಲಾರ ಕ್ಷೇತ್ರಕ್ಕೆ ಕರೆದುಕೊಂಡುಬಂದಿದ್ದು, ಅವರು ನನಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ ಎಂದು ಹೇಳಿದರು.
ಮುನಿಯಪ್ಪ ಅವರನ್ನು ಭೇಟಿ ಮಾಡಿದಸಂದರ್ಭದಲ್ಲಿ ನಿಮ್ಮ ಮುಖದಲ್ಲಿ ತೇಜಸ್ಸಿದ್ದು,ಜನರೊಂದಿಗೆ ಬೆರೆಯುವ ಹಾಗೂ ಎಲ್ಲ ಜಾತಿಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡುಹೋಗುವ ಶಕ್ತಿ ನಿಮ್ಮಲ್ಲಿದೆ. ಜತೆಗೆ ನಿಮಗೆ ಅವಕಾಶಮಾಡಿಕೊಟ್ಟರೆ ಪಕ್ಷ ಸಂಘಟನೆ ಮಾಡುತ್ತೀರಾ ಎಂದು ವಿಜಯೀಭವ ಎಂದು ಅವರೇ ಆಶೀರ್ವಾದ ಮಾಡಿದ್ದರು ಎಂದು ಸ್ಮರಿಸಿದರು.
ಸಂಪೂರ್ಣ ಬೆಂಬಲ ಇದೆ: ಪರಮಾತ್ಮನ ಮೇಲೆ ಆಣೆ ಮಾಡಿ ನಿಮ್ಮನ್ನು ಶಾಸಕರನ್ನಾಗಿ ಮಾಡುತ್ತೇನೆಎಂದು ಮುನಿಯಪ್ಪ ಅವರೇ ಹೇಳಿದ್ದು, ಅವರಸಂಪೂರ್ಣವಾದ ಬೆಂಬಲ ನನಗಿದೆ. ಹೀಗಾಗಿ ಪಕ್ಷ ಸಂಘಟನೆ ಮಾಡಬೇಡಿ ಎಂದು ಹೇಳುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ವಿಶ್ವಾಸಕ್ಕೆ ತೆಗೆದುಕೊಳ್ತೇನೆ: ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರನ್ನು ಈಗಾಗಲೇ ಭೇಟಿ ನೀಡಿದ್ದು, ಪಕ್ಷ ಸಂಘಟನೆಯ ಕುರಿತು ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೋಲಾರಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಮಹತ್ವ ನೀಡಿ,ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆತೆಗೆದುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ : ಪಕ್ಷವರಿಷ್ಠರು ನನಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಹೇಳಿದ್ದು, ಕಾರ್ಯಕರ್ತರನ್ನುಹಾಗೂ ಮುಖಂಡರನ್ನು ಭೇಟಿ ಮಾಡದಂತೆನನ್ನನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ.ಸಮಾಜ ವ್ಯವಸ್ಥೆಯಲ್ಲಿ ಯಾರು ಯಾವ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದಾಗಿದ್ದು, ಯಾರುಎಲ್ಲಿ ಬೇಕಾದರೂ ಓಡಾಡಬಹುದಾಗಿದ್ದು, ನನಗೆಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಜಾಗದಲ್ಲಿ ನಾನಿರುವುದಿಲ್ಲ ಎಂದು ಮಂಜುನಾಥಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!