ಕಲಾವಿದರ ಪ್ರಯತ್ನದಿಂದ ಕಲೆ ಜೀವಂತ
Team Udayavani, Mar 28, 2021, 5:30 PM IST
ಕೋಲಾರ: ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾದ ಎನ್.ಆರ್.ಜ್ಞಾನಮೂರ್ತಿ, ಚೇತನ್‌ಪ್ರಸಾದ್, ಬಿ.ವಿ.ವಿ.ಗಿರಿ, ಬಿ.ಎನ್. ಅಣ್ಣಯ್ಯಪ್ಪ ಹಾಗೂ ನಾಟಕಕಾರ ಕಾ.ಹು. ಚಾನ್‌ಪಾಷಾರಿಗೆ ರಂಗಗೌರವ ನೀಡುವ ಮೂಲಕ ವಿಶ್ವರಂಗಭೂಮಿ ದಿನಾಚರಣೆಯನ್ನು ತಾಲೂಕಿನ ವೇಮಗಲ್ ಜೂನಿಯರ್ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕರ್ನಾಟಕ ನಾಟಕ ಅಕಾಡೆಮಿ, ರಂಗ ವಿಜಯಾ ಟ್ರಸ್ಟ್‌ಸಹಯೋಗದೊಂದಿಗೆ ನಡೆದ ವಿಶ್ವರಂಗಭೂಮಿ ದಿನಾಚರಣೆಯನ್ನು ಜಿಲ್ಲೆಯ ಹಿರಿಯ ಕಲಾವಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮದ್ದೇರಿ ಮುನಿರೆಡ್ಡಿ ಉದ್ಘಾಟಿಸಿ, ಕಲೆ ಮತ್ತು ಕಲಾವಿದರಿಗೆ ಅಳಿವಿಲ್ಲ. ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಲಕ್ಷಾಂತರ ಮಂದಿ ಕಲಾವಿದರಿದ್ದು, ಅಂತವರೆಲ್ಲರ ಪ್ರಯತ್ನದಿಂದಲೇ ಕಲೆ ಉಳಿದಿದೆ ಎಂದರು.
ಎಲ್ಲರ ಪಾತ್ರವೂ ಮಹತ್ವದ್ದು: ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಡಾ.ಟಿ.ಎಸ್ .ನರಸಿಂಹಪ್ರಸಾದ್ ಮಾತನಾಡಿ, ಗ್ರೀಕ್ ರಂಗಭೂಮಿಯಿಂದ ಆರಂಭವಾದ ರಂಗಭೂಮಿ ಇತಿಹಾಸವು ಜಗತ್ತಿನಾದ್ಯಂತ ಹರಡಿದ್ದು, ಅನೇಕ ಪ್ರಯೋಗಗಳಿಗೆ ಒಳಪಟ್ಟಿದೆ. ರಂಗಭೂಮಿ ಎಂದರೆ ಕೇವಲ ಕಲಾವಿದರು ಮಾತ್ರವಲ್ಲ. ರಂಗದ ಮೇಲೆ, ತೆರೆ ಮರೆಯಲ್ಲಿ ಕೆಲಸ ಮಾಡುವ ಎಲ್ಲರ ಪಾತ್ರವೂ ಮಹತ್ವದ್ದಾಗಿರುತ್ತದೆ ಎಂದರು.
ರಂಗ ವಿಜಯ ಟ್ರಸ್ಟ್‌ನ ಮಾಲೂರು ವಿಜಿ ಮಾತನಾಡಿ, ವಿಶ್ವರಂಗ ದಿನಾಚರಣೆಯ ಇತಿಹಾಸ ಕುರಿತು ವಿವರಿಸಿ, ಈ ವರ್ಷ ಹೆಲೆನ್ ಮಿರೆನ್ ಎಂಬ ರಂಗಕಲಾವಿದೆ ದಿನಾಚರಣೆಯ ಸಂದೇಶವನ್ನು ನೀಡುವ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್. ಕೃಷ್ಣಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ರಂಗವಿಜಯ ಟ್ರಸ್ಟ್‌ನ ಗೌರವ ಅಧ್ಯಕ್ಷ ಡಾ.ಗೋವಿಂದರಾಜು ಮಾತನಾಡಿದರು.
ಕಲಾವಿದೆ ಕೊಂಡರಾಜನಹಳ್ಳಿ ಮಂಜುಳ ದುರ್ಗಿ ಎಂಬ ಏಕ ವ್ಯಕ್ತಿ ನಾಟಕವನ್ನು ಪ್ರದರ್ಶಿಸಿ ಗಮನ ಸೆಳೆದರು. ಕಲಾವಿದ ಲಕ್ಷ್ಮೀನಾರಾಯಣ ಕಬೀರರ ದೋಹೆಯನ್ನು ಹಾಡಿ ರಂಜಿಸಿದರು.
ಕುಮಾರಿ ರಕ್ಷಿತಾ, ಗಮಕಿ ವೆಂಕಟರಮಣ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ನಟರಾಜ್ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಜೆ.ಜಿ.ನಾಗ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.