ಕಳೆದ ಬಾರಿಯ ನಿರಾಸೆ ಮರುಕಳಿಸದಿರಲಿ
Team Udayavani, Mar 7, 2021, 3:14 PM IST
ಕೋಲಾರ: ಹಿಂದಿನ ವರ್ಷ ಮಾ.5 ರಂದು ಕೋಲಾರ ಜಿಲ್ಲೆಯ ಹೆಸರನ್ನೇ ಪ್ರಸ್ತಾಪಿಸದೆ ಬಜೆಟ್ ಮಂಡಿಸಿ ನಿರಾಸೆ ಮೂಡಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ಮತ್ತೇ ಕೋಲಾರಕ್ಕೇನುಕೊಡುತ್ತಾರೆನ್ನುವ ಕುತೂಹಲ ನಿರೀಕ್ಷೆ ಜನರಲ್ಲಿದೆ. ಹಿಂದಿನ ಐದಾರು ಬಜೆಟ್‌ಗಳನ್ನು ಅವಲೋಕಿಸಿದಾಗ ಜಿಲ್ಲೆಗೆ ಪ್ರಮುಖ ಕೊಡುಗೆಗಳಾಗಿ ಸಿಕ್ಕಿದ್ದು ಸಿದ್ದರಾಮಯ್ಯ ಕಾಲದ ಜಿಲ್ಲಾಡಳಿತ ಭವನ, ಕೆ.ಸಿ.ವ್ಯಾಲಿ ಯೋಜನೆ, ಪ್ರತ್ಯೇಕ ತಾಲೂಕಾಗಿ ಕೆಜಿಎಫ್.
ಕಡೆಗಣನೆ: ಇವನ್ನು ಹೊರತುಪಡಿಸಿದರೆ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗಳಲ್ಲಿ ಕೋಲಾರಕ್ಕೆ ಒಂದಷ್ಟು ಯೋಜನೆಗಳನ್ನು ಪ್ರಸ್ತಾಪಿಲಾಗಿತ್ತು. ಆದರೆ ಅವು ಅನುಷ್ಠಾವಾಗಲೇ ಇಲ್ಲ. ಯಡಿ ಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಕೋಲಾರವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ದ್ದಕ್ಕೂ ಯಡಿಯೂರಪ್ಪ ಜಿಲ್ಲೆಯತ್ತ ಕಣ್ಣೆತ್ತಿ ನೋಡಿರಲಿಲ್ಲ.
ಹಿಂದಿನ ಬಜೆಟ್‌ಗಳಲ್ಲಿ ಪ್ರಸ್ತಾಪಿಸಿ ಮರೆತಿದ್ದೇನು?: 2016ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕೋಲಾರ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಕಟಿಸಿದ್ದರು. ಆದರೆ, ಇದುವರೆಗೂ ಕೈಗೂಡಲಿಲ್ಲ. 2017ರ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿದ್ದರು. ಇದ್ಯಾವುದು ಅನುಷ್ಠಾನವಾಗಿಲ್ಲ.
ಖಚಿತ ಮಾಹಿತಿ ಇಲ್ಲ: ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಡಿ ನೀರನ್ನು ಹರಿಸುವುದಾಗಿ ಹಿಂದಿನ ಅನೇಕ ಬಜೆಟ್‌ಗಳಲ್ಲಿ ಪ್ರಸ್ತಾಪಿಸ ಲಾಗಿದೆ. ಇಂತಿಷ್ಟು ವೇಳೆಗೆ ಯೋಜನೆ ಪೂರ್ಣಗೊಳಿಸುವ ವಾಕ್ಯ ಗಳನ್ನು ಬಜೆಟ್‌ಗಳಲ್ಲಿಯೇ ಮುದ್ರಿಸಿದೆ. ಆದರೆ, ಇದುವರೆಗೂ ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುವ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲವಾಗಿದೆ .
20 ಕೋಟಿ ರೂ. ಇಡಲಾಗಿತ್ತು: ಟೊಮೆಟೋ ಸಂಸ್ಕರಣಾ ಘಟಕ ಆರಂಭಿಸಲು 20 ಕೋಟಿ ರೂ.ಗಳನ್ನು ಇಡಲಾಗಿತ್ತು. ಕೋಲಾರ ಸೇರಿ ದಂತೆ ಹತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸ ಲಾಗುವುದು ಎಂದು ಘೋಷಿಸಲಾಗಿತ್ತು. ಇವು ರೈತರು ಮತ್ತು ಮಹಿಳೆಯರ ಸೇವೆಗೆ ದಕ್ಕಿಲ್ಲ.
ಉಸ್ತುವಾರಿ ಮಂತ್ರಿ ಖೋತಾ: ಜಿಲ್ಲೆಯ ಬಜೆಟ್ ನಿರೀಕ್ಷೆ ಗಳನ್ನು ಉಸ್ತುವಾರಿ ಸಚಿವರಾಗಿದ್ದವರು ಸರ್ಕಾರದ ಗಮನಕ್ಕೆ ತರುವ
ಪ್ರಯತ್ನ ಮಾಡುತ್ತಿದ್ದರು. ಈ ಹಿಂದೆ ಸಚಿವ ನಾಗೇಶ್, ಸ್ಪೀಕರ್ ರಮೇಶ್‌ಕುಮಾರ್ ಇತರರು ನೀಡಿದ್ದ ಬಜೆಟ್ ಬೇಡಿಕೆಗಳನ್ನು ಸರ್ಕಾರ ತಿರಸ್ಕರಿಸಿತ್ತು. ಇದೀಗ ಸರ್ಕಾರದಲ್ಲಿ ಪ್ರತಿನಿಧಿಯೇ ಇಲ್ಲದ ಜಿಲ್ಲೆಗೆ ಏನೆಲ್ಲವನ್ನು ಬಜೆಟ್‌ನಲ್ಲಿ ನೀಡಬಹುದು ಎಂಬ ಸಣ್ಣ ಕುತೂಹಲವಷ್ಟೇ ಉಳಿದಿದೆ.
ಈಗಿನ ಬೇಡಿಕೆಗಳೇನು?
ಕೋಲಾರ ಜಿಲ್ಲೆ ವಿಧಾನಸೌಧಕ್ಕೆ ಹತ್ತಿರವಾಗಿದೆ. ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸಬೇಕು. ಕೆ.ಸಿ.ವ್ಯಾಲಿಯಲ್ಲಿ ಪೂರ್ಣ 400 ಎಂಎಲ್‌ಡಿ ನೀರು ಜಿಲ್ಲೆಗೆ ಹರಿಸಬೇಕು. ಎರಡನೇ ಹಂತದ ಕೆ.ಸಿ.ವ್ಯಾಲಿ ಯೋಜನೆ ಶೀಘ್ರ ಅನುಷ್ಠಾನ ವಾಗಬೇಕು. ಎತ್ತಿನಹೊಳೆ ಯೋಜನೆ ಕಾಲಮಿತಿ ಯೊಳಗೆ ಪೂರ್ಣಗೊಂಡು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕು. ಬರಪೀಡಿತ ಜಿಲ್ಲೆಯ ರೈತರ ಉತ್ಪನ್ನ ಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಹೈನೋ ದ್ಯಮಕ್ಕೆ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಬೇಕು.
ಸುಸಜ್ಜಿತ ಮಾರುಕಟ್ಟೆ
ಕೋಲಾರ ಜಿಲ್ಲೆಗೆ ಸುಸಜ್ಜಿತ, ಅತ್ಯಾಧುನಿಕ ಟೊಮೆ ಟೋ ಹಾಗೂ ಮಾವು ಸಂಸ್ಕರಣ ಘಟಕಗಳನ್ನು ಆರಂಭಿಸ ಬೇಕು. ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಾದ ಜಮೀನು ನೀಡಬೇಕು.
ರೈಲು ಮಾರ್ಗ
ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಘೋಷಣೆಯಾಗಿ ರುವ ರೈಲ್ವೆ ವರ್ಕ್‌ಶಾಪ್ ಸೇರಿದಂತೆ ಇನ್ನಿತರ ಹೊಸ ರೈಲು ಮಾರ್ಗಗಳ ಅಳವಡಿಕೆಗೆ ಅಗತ್ಯ ಭೂಮಿ ನೀಡಿ ಬಾಕಿ ಕಾಮಗಾರಿಗಳ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಬೇಕು.
ರಿಂಗ್ ರಸ್ತೆ
ಕಾಡಾನೆಗಳ ಉಪಟಳ ತಡೆಯಲು ಕಾರ್ಯಕ್ರಮ ಘೋಷಿಸಬೇಕು. ಸ್ಥಳೀಯ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸ ಸಿಗುವಂತೆ ಉದ್ಯೋಗ ನೀತಿ ಘೋಷಿಸಬೇಕು. ಹಳ್ಳಿಯೂ ಅಲ್ಲದೆ ನಗರವೂ ಅಲ್ಲದಂ ತಿರುವ ಕೋಲಾರ ಜಿಲ್ಲಾ ಕೇಂದ್ರಕ್ಕೆ ರಿಂಗ್ ರಸ್ತೆಯನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸಬೇಕು.
ಪ್ರವಾಸಿ ತಾಣ ಅಭಿವೃದ್ಧಿ
ಕೋಲಾರ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣ ಗಳನ್ನು ಅಭಿವೃದ್ಧಿಪಡಿಸಬೇಕು. ಕ್ರೀಡಾಂಗಣ ಗಳನ್ನು ಉನ್ನತೀಕರಿಸಬೇಕು. ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆ ಟಿಕ್ ಟ್ರ್ಯಾಕ್ ಅಳವಡಿಸಿ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು. ಹೀಗೆ ಪಟ್ಟಿ ದೊಡ್ಡದಾದಷ್ಟು ರಾಜ್ಯ ಸರ್ಕಾರಗಳು ಕೋಲಾರವನ್ನು ಕಡೆಗಣಿಸಿರುವ ಹಿನ್ನೆಲೆ ಯನ್ನು ಈ ಬಾರಿಯಾದರೂ ಕೊನೆಗಾಣಿಸಬೇಕು.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.