ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ
Team Udayavani, Feb 24, 2020, 3:00 AM IST
ಕೋಲಾರ: ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನದ ಅರಿವು ಮೂಡಿಸುವುದರ ಜೊತೆಯಲ್ಲೇ ಮಾನವೀಯ ಮೌಲ್ಯ ಬೆಳೆಸುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಮಾಡಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ತಾಲೂಕಿನ ವೇಮಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಜ್ಞಾನದೀಪ್ತಿ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ನಮಗೇನು ನೀಡಿದೆ ಎಂದು ಪ್ರಶ್ನಿಸುವುದನ್ನು ಬಿಟ್ಟು, ನಮ್ಮಿಂದ ಸಮಾಜಕ್ಕೇನು ಕೊಡುಗೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು, ಪೋಷಕರು ಅತಿ ವಿಶ್ವಾಸ, ನಂಬಿಕೆಯಿಂದ ನಿಮ್ಮನ್ನು ಕಾಲೇಜಿಗೆ ಕಳುಹಿಸಿದ್ದಾರೆ. ಅವರ ಆಶಯ ಈಡೇರಿಸುವ ಹೊಣೆ ನಿಮ್ಮದು ಎಂದರು.
ವೇಳಾಪಟ್ಟಿ ಮಾಡಿಕೊಳ್ಳಿ: ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಅತ್ಯವಶ್ಯಕ, ವ್ಯಾಸಂಗ ಮಾಡುವಾಗ ಇಡೀ ದಿನದ ವೇಳಾಪಟ್ಟಿ, ನೀವು ಸಿದ್ಧಪಡಿಸಿಕೊಂಡು ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಶಿಸ್ತಿನಿಂದ ಮಾಡಿದರೆ ನಿಮ್ಮ ಸಾಧನೆಯ ಹಾದಿ ಸುಲಭ ಎಂದು ಕಿವಿಮಾತು ಹೇಳಿದರು.
ಅಂಕ ಗಳಿಕೆ ಗುರಿಯಾಗದಿರಲಿ: ವಿದ್ಯಾರ್ಥಿ ಜೀವನ ನೀವು ಮರೆಯಲಾಗದಂತಹ ಅನುಭವ ನೀಡುತ್ತದೆ, ಈ ಅವ ಯಲ್ಲಿ ನೀವು ಸಾಗುವ ಹಾದಿ ಉತ್ತಮವಾಗಿದ್ದರೆ ಇಡೀ ನಿಮ್ಮ ಜೀವನ ಸರಿಯಾಗಿರುತ್ತದೆ, ಈಗ ತಪ್ಪು ಹಾದಿ ತುಳಿದರೆ ಇಡೀ ನಿಮ್ಮ ಜೀವನ ಅಧಃಪತನದತ್ತ ಸಾಗುತ್ತದೆ ಎಂದು ಎಚ್ಚರಿಸಿದರು. ಅಂಕ ಗಳಿಕೆ ಮಾತ್ರವೇ ಶಿಕ್ಷಣದ ಗುರಿಯಾಗಬಾರದು, ಬದುಕು ರೂಪಿಸಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೆ ಬೆರೆದು ಜೀವನ ನಡೆಸುವ ಮನಸ್ಥಿತಿ ತುಂಬಿ ಮಾನವನನ್ನಾಗಿ ಮಾಡುವುದೇ ನಿಜವಾದ ಶಿಕ್ಷಣ ಎಂದರು.
ಸಮರ್ಪಕ ಬಳಕೆ ಅಗತ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಶ್ರದ್ಧೆ, ಆಸಕ್ತಿ, ಆತ್ಮವಿಶ್ವಾಸ, ಛಲ, ಇದ್ದಾಗ ಅಂದುಕೊಂಡದ್ದನ್ನು ಸಾಧಿ ಸಬಹುದು. ವಿದ್ಯಾರ್ಥಿಗಳ ಗುರಿ ಈಡೇರಲು ಗುರುವಿನ ಬಲದ ಅವಶ್ಯಕತೆ ಇದೆ. ನಿಮ್ಮ ಓದಿಗೆ ಪೂರಕವಾಗಿರುವ ಗಣಕಯಂತ್ರಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ದುಶ್ಚಟದಿಂದ ದೂರವಿರಿ: ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಅತಿ ಉತ್ತಮ ಕಾರ್ಯಕ್ರಮವಾಗಿದ್ದು, ಇದನ್ನು ನೀವು ನಿಮ್ಮ ಶೈಕ್ಷಣಿಕ ಉನ್ನತಿಗೆ ಸದುಪಯೋಗಪಡಿಸಿಕೊಳ್ಳಿ,. ಕಲಿಕೆ ವೇಳೆ ದುಶ್ಚಟಗಳಿಂದ ದೂರವಿರಿ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗೇಶ್, ಸದಸ್ಯ ರಮೇಶ್, ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ಶಿಕ್ಷಕ ವೇಮಗಲ್ ಮುನಿರಾಜು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.