ಗಡಿಯಲ್ಲಿ ದಾಳಿ: ಚೀನಾ ವಿರುದ್ಧ ಆಕ್ರೋಶ
Team Udayavani, Jun 18, 2020, 7:02 AM IST
ಕೋಲಾರ: ವಿನಾಕಾರಣ ಗಡಿಯಲ್ಲಿ ಕಾಲು ಕೆರೆದು ಜಗಳ ತೆಗೆಯುತ್ತಿರುವ ಚೀನಾ ವರ್ತನೆಯನ್ನು ಖಂಡಿಸಿ ಭಜರಂಗದಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ವೀರಮರಣವಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ, ಚೀನಾ ಧ್ವಜ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಚೀನಾ ದಾಳಿಯಿಂದ ವೀರಮರಣವಪ್ಪಿದ ಯೋಧರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ಎರಡು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭಾರತ ಶಾಂತಿ ಬಯಸುತ್ತದೆ. ಆದರೆ, ತನ್ನ ಸಾರ್ವಭೌಮತೆಗೆ ಧಕ್ಕೆ ಬಂದರೆ ಸಹಿಸಿಕೊಂಡು ಸುಮ್ಮನಿರಲ್ಲ ಎಂಬುದನ್ನು ನಮ್ಮ ಯೋಧರು ಚೀನಾ ಯೋಧರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಚೀನಾ ಸದಾ ಕುತಂತ್ರ ಬುದ್ಧಿಯನ್ನು ತೋರುತ್ತಲೇ ಇದೆ, ಬೆನ್ನಿಗೆ ಚೂರಿ ಹಾಕುವ ಇಂತಹ ದೇಶಗಳಿಗೆ ನಮ್ಮ ಸೇನೆ ತಕ್ಕ ಪಾಠ ಕಲಿಸಲು ಶಕ್ತವಾಗಿದೆ, ಇದಕ್ಕೆ, ಪ್ರಧಾನಿ ಮೋದಿಯವರು ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಚೀನಾ ವಸ್ತುಗಳ ನಿಷೇಧಕ್ಕೆ ಆಗ್ರಹ: ದೇಶದಲ್ಲಿ ತಾನು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಹೊಂದಿರುವ ಚೀನಾ ಭಾರತಕ್ಕೆ ದ್ರೋಹ ಬಗೆಯುತ್ತಿದೆ, ಇಂತಹ ರಾಷ್ಟ್ರದ ಉತ್ಪನ್ನಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಭಾರತೀಯರು ಚೀನಾ ಉತ್ಪನ್ನ ಗಳನ್ನು ಖರೀದಿಸದೇ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದ ಅವರು, ದೇಶದ ಜನತೆ ಚೀನಾ ವಸ್ತುಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ಧ್ವಜವನ್ನು ದಹಿಸಿ ಭಜರಂಗದಳ ಕಾರ್ಯಕರ್ತರು ಚೀನಾ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಬಾಬು, ವಿಜಯಕುಮಾರ್, ಡಿ.ಆರ್.ನಾಗರಾಜ್, ಅಪ್ಪಿ, ಸಾಯಿ ಕುಮಾರ್, ಸಾಯಿಸುಮನ್, ಸಾಯಿಮೌಳಿ, ಎಬಿವಿಪಿ ಹರೀಶ್, ವಿನಯ್, ಭವಾನಿ, ಪ್ರವೀಣ್, ಆನಂದ್, ಸುಧಾ ಕರ್, ಕುಮಿ, ದಮ್ಮಿ,ದೇವರಾಜ್, ಸುನಿ, ರಾಜೇಶ್, ಅಭಿ, ಮನು, ಅಮ್ಸ್, ಸಂದೇಶ್, ಮಂಜು, ಯಶವಂತ್, ಮಾದೇಶ್, ಶ್ರೀಧರ್, ನಂದೀಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.