ಕ್ವಾರಂಟೈನ್‌ನಲ್ಲಿದ್ದವ ಆತ್ಮಹತ್ಯೆಗೆ ಯತ್ನ
ಹೋಂ ಕ್ವಾರಂಟೈನ್ ರಾಜಕೀಯ ಪ್ರೇರಿತ ಎಂದು ಶಂಕಿತನ ಆರೋಪ
Team Udayavani, Apr 23, 2020, 2:43 PM IST
ಮಾಲೂರು: ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಭಾವಚಿತ್ರಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹರಿಬಿಟ್ಟು, ತಮ್ಮನ್ನು ಮಾತ್ರ ಮನೆಯಲ್ಲಿ ಕೂಡಿ ಹಾಕಿ ತಾಲೂಕು ಆರೋಗ್ಯಾಧಿಕಾರಿಯ ಸೋದರನೂ ಆಗಿರುವ ಗ್ರಾಪಂ ಸದಸ್ಯನನ್ನು ಮನಸೋ ಇಚ್ಛೆ ತಿರುಗಲು ಬಿಟ್ಟಿರುವ ಆಶಾ ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಪಂ ಪಿಡಿಒ ಅವರ ಕ್ರಮವನ್ನು ಖಂಡಿಸಿದ ವ್ಯಕ್ತಿಯೊಬ್ಬ ಗ್ರಾಪಂ ಕಚೇರಿಯಲ್ಲಿ ಕುಟುಂಬ ಸಮೇತನಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಸಂತೇಹಳ್ಳಿಯಲ್ಲಿ ಸಂಭವಿಸಿದೆ.
ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಎಂಟು ಮಂದಿಯ ಗುಂಪೊಂದು, ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ಪಶುವೈದ್ಯನೊಬ್ಬನ ಜೊತೆಗೂಡಿ ಪಾರ್ಟಿ ನಡೆಸಿತ್ತು. ಇದರಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಸೇರಿ ತಾಲೂಕು ಆರೋಗ್ಯಾಧಿಕಾರಿಯ ಸೋದರ, ಗ್ರಾಪಂ ಸದಸ್ಯ ಕೂಡ ಭಾಗಿಯಾಗಿದ್ದ. ಆತನನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಗ್ರಾಮದ ಏಳು ಮಂದಿಯನ್ನು ಗೃಹ ಬಂಧನದಲ್ಲಿ ಇರಿಸಿರುವ ಸಂತೇಹಳ್ಳಿ ಗ್ರಾಪಂ ಪಿಡಿಒ ಹಾಗೂ ಅಶಾ ಕಾರ್ಯಕರ್ತರು ಗ್ರಾಪಂ ಸದಸ್ಯನನ್ನು ಮಾತ್ರ ಊರಿನಲ್ಲಿ ತಿರುಗಲು ಬಿಟ್ಟಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ದೂರಿದ್ದಾನೆ.
ತೇಜೋವಧೆಗೆ ಯತ್ನ: ಅಲ್ಲದೆ, ತನ್ನ ಚಿತ್ರವನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿ ಬಿಟ್ಟು ತಮ್ಮ ತೇಜೋವಧೆಗೆ ಮುಂದಾಗಿದ್ದು, ಇದರಿಂದ ಗ್ರಾಮದ ಅಕ್ಕಪಕ್ಕದ ಮನೆಯರು
ತಮ್ಮ ಕುಟುಂಬವನ್ನು ಹೀನ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಸಹಿಸದೆ ಕುಟುಂಬ ಸಹಿತವಾಗಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಸಿದ್ದಾನೆ. ಬೆಳಗ್ಗೆ 10 ಗಂಟೆಗೆ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಗ್ರಾಪಂ ಕಚೇರಿಗೆ ಮೂರು ಲೀಟರ್ ಪೆಟ್ರೋಲ್‌ನೊಂದಿಗೆ ಬಂದ ವ್ಯಕ್ತಿಯು, ತನ್ನ ಹಾಗೂ ತನ್ನ ಕುಟುಂಬದವರ ಮೇಲೆ ಪೆಟ್ರೋಲ್ ಸುರಿದು ಅತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದನು.
ಪ್ರಯತ್ನ ವಿಫಲ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅರೋಗ್ಯ ಸಿಬ್ಬಂದಿ ಆತ್ಮಹತ್ಯೆ ಯತ್ನವನ್ನು ತಡೆಯುವ ಪ್ರಯತ್ನ ನಡೆಸಿದರಾದರೂ ಸತತ ಐದು ಗಂಟೆಗಳ ನಡೆದ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಸ್ಥಳಕ್ಕೆ ದಾವಿಸಿದ ಶಾಸಕ ನಂಜೇಗೌಡ ನೀಡಿದ ಭರವಸೆಯಿಂದ ಆತ್ಮಹತ್ಯೆ ನಿರ್ಧಾರವನ್ನು ಕುಟುಂಬವು ಕೈಬಿಟ್ಟಿತು. ಇದೊಂದು ರಾಜಕೀಯ ಪ್ರೇರಿತವಾಗಿರುವ ನಾಟಕ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಧಿಕಾರಿಗಳಿಗೂ ಮಾತನಾಡುತ್ತಿದ್ದ ದೃಶ್ಯ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.