ಆವಣಿ ಜಾತ್ರೆಗೆ ಜಾನುವಾರುಗಳ ದಂಡು

ಕುಡಿವ ನೀರಿಗಾಗಿ ರೈತರ ಪರದಾಟ , ವಿದ್ಯುತ್‌ ದೀಪ ವ್ಯವಸ್ಥೆ ಕಲ್ಪಿಸದ ಆವಣಿ ಗ್ರಾಪಂ, ಪಿಡಿಒ

Team Udayavani, Mar 10, 2021, 4:34 PM IST

ಆವಣಿ ಜಾತ್ರೆಗೆ ಜಾನುವಾರುಗಳ ದಂಡು

ಮುಳಬಾಗಿಲು: ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಗ್ರಾಮೀಣ ಸಂಸ್ಕೃತಿಯು ತನ್ನ ನೆಲೆ ಕಳೆದು ಕೊಳ್ಳುತ್ತಿದ್ದು, ಪ್ರಸ್ತುತ ಕೃಷಿಗೆ ಬೆನ್ನೆಲುಬಾದ ಜಾನುವಾರು ಗಳ ಸಂಖ್ಯೆ ಕ್ಷೀಣಿಸುತ್ತಿರುವುದರ ನಡುವೆಯೂ ಆವಣಿ ಜಾನು ವಾರುಗಳ ಜಾತ್ರೆಯು ತನ್ನಮೆರುಗನ್ನೇ ಕಳೆದುಕೊಳ್ಳುತ್ತಿ ದ್ದರೂ ಹೆಚ್ಚಿನ ಜಾನುವಾರು ಗಳು ಆವಣಿ ಜಾತ್ರೆಯತ್ತ ಹರಿದು ಬರುತ್ತಿವೆ.

ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಶ್ರೀರಾಮಲಿಂಗೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ದ ಸ್ಥಳವಾಗಿದ್ದು, ರಾಮಾಯಣದ ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ, ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ ಎಂಬ ಐತಿಹ್ಯ ಇದೆ.

ಸಲ್ಲಾಪುರಮ್ಮ ದೇವರ ಮೆರವಣಿಗೆ: ಪ್ರತಿ ವರ್ಷಶಿವರಾತ್ರಿ ಹಬ್ಬದ ಮಾರನೆಯ ದಿವಸ ಅಂದರೆ ಈ ಬಾರಿ ಫೆ.13 ರಂದು ಸರ್ಕಾರದಿಂದ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ನಡೆಯಲಿದ್ದು, ರಥೋತ್ಸವದ ವೇಳೆ ಬ್ರಹ್ಮರಥದ ಮುಂಭಾಗದಲ್ಲಿಮಾತೆ ಕೀಲುಹೊಳಲಿ ಗ್ರಾಮದೇವತೆ ಸಲ್ಲಾಪುರಮ್ಮ ದೇವರ ಮೆರವಣಿಗೆ ಸಾಗುವುದರಿಂದ ರಥೋತ್ಸವಕ್ಕೆಮತ್ತಷ್ಟು ಮೆರಗು ಹೆಚ್ಚಾಗಿರುತ್ತದೆ. ಮತ್ತೂಂದೆಡೆ ಸದರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ 10-15 ದಿವಸಗಳ ಕಾಲ ಭಾರೀ ದನಗಳ ಜಾತ್ರೆಯು

ಸೇರಲಿದ್ದು, ಜಾತ್ರೆಯಲ್ಲಿ ಕರ್ನಾಟಕ, ಹಾವೇರಿ, ಗಂಗಾವತಿ, ಆಂಧ್ರ, ಬೆಜವಾಡಾ, ತಮಿಳುನಾಡು, ಒರಿಸ್ಸಾ ಹಾಗೂ ಗೋವಾ ರಾಜ್ಯಗಳಿಂದ ರಾಸುಗಳನ್ನು ಖರೀದಿಸಲು ವ್ಯಾಪಾರಿಗಳು ಆಗಮಿಸಿದ್ದಾರೆ.

ಶುಲ್ಕ ವಸೂಲಿ ಮಾಡದಿರಲು ನಿರ್ಧಾರ: ಶುಕ್ರವಾರ ಮತ್ತು ಶನಿವಾರ ಅಮಾವಾಸ್ಯೆ ಇರುವುದರಿಂದ ರೈತರು ಎತ್ತುಗಳನ್ನು ಮಾರಲು ಎತ್ತಿನಗಾಡಿಗಳಲ್ಲಿ ಹುಲ್ಲನ್ನುತುಂಬಿಕೊಂಡು ಈ ದಿನವೇ ಬಂದು ಈಗಾಗಲೇಬಿಡಾರ ಹೂಡಿದ್ದಾರೆ. ಆಗಲೇ ಬಂದಿರುವ ವ್ಯಾಪಾರಸ್ಥರು ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದ್ದು,ಒಂದು ಜೊತೆ ಎತ್ತಿನ ಬೆಲೆ ಕನಿಷ್ಠ 1 ಲಕ್ಷದಿಂದ 2.75ಲಕ್ಷ ವರೆಗೆ ಮಾರಾಟವಾಗುತ್ತಿದೆ. ಅಲ್ಲದೇ ಜಾತ್ರೆಯಲ್ಲಿಎತ್ತು/ಗಾಡಿಗಳ ಶುಲ್ಕವನ್ನು ವಸೂಲಿ ಮಾಡದಿರಲುನಿರ್ಧರಿಸಲಾಗಿರುತ್ತದೆ. ಪ್ರತಿ ವರ್ಷ ರಥೋತ್ಸಹಾಗೂ ಜಾತ್ರೆ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಿದ್ದು, ರಥೋತ್ಸವವು ವೈಭವದಿಂದನಡೆದರೂ ಜನರು ಗೋಹತ್ಯೆ ಮಾಡುತ್ತಿರುವುದರಿಂದ ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ವಿವಿಧೆಡೆಯಿಂದ ಎತ್ತುಗಳು ಆಗಮನ: ಪ್ರಸ್ತುತ ಜನಗಳ ಜಾತ್ರೆಯಾಗಿ ಪರಿಣಮಿಸುತ್ತಿದ್ದು, ಅದರಲ್ಲೂಈ ಬಾರಿ ಕಾಲುಬಾಯಿ ಜ್ವರ ಕಡಿವಾಣಕ್ಕಾಗಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ತುಳಸಿರಾಮ್‌ ಮಾರ್ಗದರ್ಶನದಂತೆ ವೈದ್ಯರು ಹಲವಾರು ಕ್ರಮ ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ಹೊಸಕೋಟೆ ತಾಲೂಕು ಡಿ.ಶೆಟ್ಟಿಹಳ್ಳಿ, ಮಾಲೂರು ತಾಲೂಕು ಮಾಸ್ತಿ, ಕೋಲಾರ ತಾಲೂಕು ನರಸಾಪುರ,ತಂಬಿಹಳ್ಳಿ, ಆಂಧ್ರದ ವಿ.ಕೋಟೆ, ಬೈರಕೂರು, ಕುರುಡುಮಲೆ ಸೇರಿದಂತೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ನೂರಾರು ಜೊತೆಗಳ ಎತ್ತುಗಳು ಜಾತ್ರೆಗೆ ಆಗಮಿಸಿವೆ.

ನೀರು, ಮೇವಿನ ವ್ಯವಸ್ಥೆ ಕಲ್ಪಿಸಲಿ: ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ಸೌಕರ್ಯಒದಗಿಸಬೇಕೆಂದು ಮಾರಾಟ ಮಾಡಲು ಬಂದು ಬೀಡು ಬಿಟ್ಟಿರುವ ಮಾಸ್ತಿ ಕೃಷ್ಣಪ್ಪ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಒಂದು ವಾರ 60, ರಥೋತ್ಸವ ದಿನ 160 ರಿಂದ 170 ಬಸ್‌ :

ಫೆ.13 ರಂದು ನಡೆಯಲಿರುವ ಜಿಲ್ಲೆಯಲ್ಲಿಯೇ ಅತೀದೊಡ್ಡದಾದ 62 ಅಡಿಗಳ ಎತ್ತರದ ಶೃಂಗಾರ ಭರಿತಬ್ರಹ್ಮರಥೋತ್ಸವಕ್ಕೆ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ಅನುವು ಮಾಡಿಕೊಟ್ಟಿದೆ. ಜಾತ್ರೆಯಲ್ಲಿಯೇ ಘಟಕ ಸ್ಥಾಪಿಸಿ ಮುಳಬಾಗಿಲು,ಕೋಲಾರ, ಕೆ.ಜಿ.ಎಫ್, ಶ್ರೀನಿವಾಸಪುರ, ಮಾಲೂರುಡಿಪೋಗಳಿಂದ ಒಂದು ವಾರ ಕಾಲ ವಿಶೇಷವಾಗಿ ಪ್ರತಿನಿತ್ಯ ಎಲ್ಲಾ ಮಾರ್ಗಗಳಲ್ಲಿ 60 ಬಸ್‌ಗಳನ್ನು ಮತ್ತುರಥೋತ್ಸವದಂದು 160-170 ಬಸ್‌ಗಳನ್ನು ಆವಣಿಗೆಜಾತ್ರೆಗೆ ಹಾಕಿರುತ್ತಾರೆ. ಅಲ್ಲದೇ ಕೆ.ಎಸ್‌.ಆರ್‌ಟಿ.ಸಿಅಧಿಕಾರಿಗಳು ಜಾತ್ರೆಯಲ್ಲಿ ಹಾಜರಿದ್ದು, ಎಲ್ಲಾಮಾರ್ಗಗಳಲ್ಲಿ ಸಾಕಷ್ಟು ಬಸ್‌ಗಳನ್ನು ಓಡಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.

ಜಾನುವಾರುಗಳಿಗೆ ನೀರು ಕುಡಿಸಲು ರಾಮಾಪುರ ಕೆರೆಗೆ ಹೋಗುವ ಸ್ಥಿತಿ :

ಸದರೀ ಜಾತ್ರೆಯಲ್ಲಿ ನೀರಿನ ಸೌಕರ್ಯ ಕಲ್ಪಿಸಲು ಒಪ್ಪಿಕೊಂಡಿರುವ ಆವಣಿ ಗ್ರಾಪಂ ಪಿಡಿಒ ಇದುವರೆಗೂ ಜಾತ್ರೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಿಗೆನೀರು ತುಂಬಿಸದೇ ಇರುವುದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮನೆಗಳ ಆವರಣಗಳಲ್ಲಿರುವ ತೊಟ್ಟಿಗಳಿಂದಲೇ ಕಾಡಿ ಬೇಡಿ ತೆಗೆದುಕೊಂಡು ಹೋಗುವುದು ಕಂಡುಬಂತು. ಕೆಲವು ರೈತರು ಜಾನುವಾ ರುಗಳನ್ನು ದೂರದ ರಾಮಾಪುರ ಕೆರೆಗೆ ಹೊಡೆದುಕೊಂಡು ನೀರು ಕುಡಿಸಿಕೊಂಡು ಬರುತ್ತಿದ್ದ ಪರಿಸ್ಥಿತಿನಿರ್ಮಾಣವಾಗಿತ್ತು. ಪಿಡಿಒ, ಜಾನುವಾರುಗಳಜಾತ್ರೆಯಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕಾಗಿದ್ದರೂ ಇತ್ತ ಸುಳಿಯದೇ ಇರುವುದರಿಂದಜಾನುವಾರುಗಳನ್ನು ಮಾರಲು ಬಂದಿರುವ ರೈತರು ಕತ್ತಲಲ್ಲಿಯೇ ಇರುವಂತಾಗಿದೆ.

ಸುಳಿಯದ ಅಧಿಕಾರಿಗಳು :

ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ನೀರಿನ ಸೌಕರ್ಯಕಲ್ಪಿಸಲೆಂದು ಪೂರ್ವಬಾವಿ ಸಭೆಯಲ್ಲಿಒಪ್ಪಿಕೊಂಡಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಸುಳಿಯಲಿಲ್ಲವೆಂದು ಜನರು ಆರೋಪಿಸಿದರು.

ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳಿಗೆಪೂರ್ವಭಾವಿ ಸಭೆಯಲ್ಲಿ ಸೂಚಿಸಲಾಗಿರುತ್ತದೆ. ದಿನವೇ (ಮಂಗಳವಾರ) ನೀರು ಸರಬರಾಜುಮಾಡಬೇಕಾಗಿದ್ದರೂ ಮಾಡಿರಲಿಲ್ಲ. ಬುಧವಾರದಿಂದ ಕ್ರಮ ಕೈಗೊಳ್ಳಲಿದ್ದಾರೆ. ಸುಬ್ರಹ್ಮಣ್ಯಂ, ಆವಣಿ ರಾಜಸ್ವ ನಿರೀಕ್ಷಕ

 

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.