20 ವರ್ಷದಿಂದ ಮುಚ್ಚಿದ್ದ ಬಿಜಿಎಂಎಲ್‌ಗೆ ಮರುಜೀವ
Team Udayavani, May 20, 2021, 5:26 PM IST
ಕೆಜಿಎಫ್: ನೂರು ವರ್ಷಗಳ ಹಿಂದೆಯೇ ದೇಶದ ಅತ್ಯಂತ ಸುಸಜ್ಜಿತ ಆಸ್ಪತ್ರೆ ಎಂದೇ ಖ್ಯಾತಿಯಾಗಿ, ನಂತರ 20 ವರ್ಷಗಳಿಂದ ಮುಚ್ಚಿದ ಬಿಜಿಎಂಎಲ್ ಆಸ್ಪತ್ರೆಗೆ ಮರುಜೀವ ನೀಡಲಾಗಿದೆ.ಕೇಂದ್ರ ಗಣಿ ಖಾತೆಯ ಸಚಿವ ಪ್ರಹ್ಲಾದ ಜೋಷಿವರ್ಚುವಲ್ ಮೀಟ್ ಮೂಲಕ ಆಸ್ಪತ್ರೆಗೆ ಬುಧವಾರಮಧ್ಯಾಹ್ನ ಚಾಲನೆ ನೀಡಿದರು. ಜತೆಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಆರೋಗ್ಯಸಚಿವ ಸುಧಾಕರ್‌ಕೂಡ ಇದ್ದರು.
300 ಹಾಸಿಗೆಯಾಗಿ ಪರಿವರ್ತನೆ: 1880ರಲ್ಲಿ ಓಡೇನಿಯಲ್ ಪ್ರಥಮ ಸ್ಥಾನಿಕ ವೈದ್ಯಾಧಿಕಾರಿಯಾಗಿ10 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲಾಯಿತು. ಆಗಚಿನ್ನದ ಗಣಿಯಲ್ಲಿದ್ದ ಬ್ರಿಟಿಷರ ಆರೋಗ್ಯ ಸುಧಾರಣೆಗೆ ಬೇಕಾದ ಎಲ್ಲಾ ಏರ್ಪಾಟುಗಳನ್ನು ಆಸ್ಪತ್ರೆಯಲ್ಲಿಮಾಡಲಾಗಿತ್ತು. ಬ್ರಿಟನ್‌ನಿಂದ ಹಲವಾರು ವೈದ್ಯಕೀಯ ಉಪಕರಣ ಆಮದಾಗಿದ್ದವು. ನಂತರ ಆಸ್ಪತ್ರೆ300 ಹಾಸಿಗೆಯಾಗಿ ಪರಿವರ್ತನೆಯಾಯಿತು.
1914ರಲ್ಲಿ ಬ್ರಿಟನ್‌ನಿಂದ ದೇಶದ ಮೊದಲ ಕ್ಷಕಿರಣ ಯಂತ್ರಕೂಡ ಇಲ್ಲಿ ಸ್ಥಾಪಿತವಾಯಿತು. ಆಗ, ಶಿವನಸಮುದ್ರದಿಂದ ನೇರವಾಗಿ ವಿದ್ಯುತ್ ಸರಬರಾಜು ಆಗುತ್ತಿದ್ದರಿಂದ ಎಂದಿಗೂ ವಿದ್ಯುತ್‌ಕೊರತೆ ಇರಲಿಲ್ಲ.ಬೇರೆ ರಾಜ್ಯದಿಂದವರಿಗೂ ಚಿಕಿತ್ಸೆ: ಚಿನ್ನದ ಗಣಿಕಾರ್ಮಿಕರ ಜತೆಗೆ ಬೇರೆ ರಾಜ್ಯಗಳಿಂದಲೂ ಜನ ಚಿಕಿತ್ಸೆಗಾಗಿ ಬರುತ್ತಿ ದ್ದರು. 1956 ರವರೆಗೂ ಬ್ರಿಟಿಷ್‌ಅಧಿ ಕಾರಿಗಳೇ ಉಸ್ತುವಾರಿ ಹೊಣೆ ಹೊತ್ತಿದ್ದರು.ನಂತರ ಭಾರತೀಯ ವೈದ್ಯರು ವಹಿಸಿಕೊಂಡರು.
ಗಟ್ಟಿಮುಟ್ಟಾಗಿದೆ: ಆಸ್ಪತ್ರೆ ಸುಮಾರು 5 ಎಕರೆವಿಸ್ತೀರ್ಣವಿದೆ. ಸುತ್ತಮುತ್ತಲಿನ ಜಾಗದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆಸ್ಪತ್ರೆಯೂ ವಿಶಾಲವಾಗಿದ್ದು,ವಾರ್ಡ್‌ಗಳ ಮಧ್ಯೆ ಮರಗಿಡಗಳನ್ನು ಬೆಳೆಸಿ, ಸ್ವತ್ಛವಾದ ಪರಿಸರ ನಿರ್ಮಾಣ ಮಾಡಲಾಗಿತ್ತು. ಒಂದುಶತಮಾನ ಕಳೆದರೂ, ಆಸ್ಪತ್ರೆ ಇಂದಿಗೂ ಗಟ್ಟಿಮುಟ್ಟಾಗಿದೆ. ಹಲವಾರು ಭೂ ಕಂಪನಗಳನ್ನು ಯಶಸ್ವಿಯಾಗಿತಡೆದಿದೆ.
ಬಿಜಿಎಂಎಲ್ ಆಸ್ಪತ್ರೆ ಕಟ್ಟಡಉತ್ತಮವಾಗಿದೆ ಎಂದು ಬಿಜೆಪಿ ಕಾರ್ಯ ಕರ್ತರುಹೇಳುತ್ತಿದ್ದರು. ಮುಖಂಡರಾದ ಕಮಲನಾ ಥನ್,ಸೀನಿ, ಗಾಂಧಿ, ಪಾಂಡ್ಯನ್, ಆರ್‌ಎಸ್‌ಎಸ್ ತಂಡಮತ್ತಿತರರು ಆಸ್ಪತ್ರೆ ಆರಂಭಕ್ಕೆನಿಸ್ವಾರ್ಥದಿಂದ ಕೆಲಸ ಮಾಡಿದ್ದಾರೆಂದು ಸಂಸದಎಸ್.ಮುನಿಸ್ವಾಮಿ ತಿಳಿಸಿದರು.
ಬಿ.ಆರ್.ಗೋಪಿನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.