ಬಹಿರಂಗ ಚರ್ಚೆಗೆ ಶಾಸಕರು ಸಿದ್ಧವೇ?

Team Udayavani, Feb 23, 2023, 3:29 PM IST

tdy-17

ಬೇತಮಂಗಲ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ಆಶಯದಂತೆ ಮತದಾರರಿಗೆ ಚುನಾವಣೆ ವೇಳೆಯಲ್ಲಿ ಹಣವನ್ನು ನೀಡದೆ ಗೆಲ್ಲಲಿ ಎಂದು ಕೆಲವು ದಲಿತ ಮುಖಂಡರು ಇತ್ತೀಚಿಗೆ ಶಾಸಕಿ ಎಂ. ರೂಪಕಲಾ ಮತ್ತು ಮೋಹನ್‌ ಕೃಷ್ಣ ಅವರಿಗೆ ಸವಾಲು ಹಾಕಿದ್ದು, ಈ ಸವಾಲಿಗೆ ತಾವು ಸಿದ್ಧರಿದ್ದು ಶಾಸಕರು ಹಾಗೂ ಇತರೆ ಆಕಾಂಕ್ಷಿಗಳು ಬಹಿರಂಗ ಚರ್ಚೆ ಬರಲಿ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ ವಿ.ಮೋಹನ್‌ ಕೃಷ್ಣ ಸವಾಲು ಹಾಕಿದರು.

ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕೆಲವು ದಲಿತ ನಾಯಕರು ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಅಪಪ್ರಚಾರ ನಡೆಸುವಂತೆ ಮತದಾರರಿಗೆ ಅಮೀಷಗಳನ್ನು ಒಡ್ಡಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದು ಅಂಬೇಡ್ಕರ್‌ ರವರ ಆಶಯದಂತೆ ಪ್ರಚಾರ ನಡೆಸಲು ನಾನು ರೆಡಿ ಇದ್ದೇನೆಂದು ಮೋಹನ್‌ಕೃಷ್ಣ ಸ್ಪಷ್ಟಪಡಿಸಿದರು. ಪಟ್ಟಣದ ಬಳಿಯ ಮಹದೇವಪುರ ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮೋಹನ್‌ಕೃಷ್ಣ, ನಾನು ಒಬ್ಬ ಬಡ ರೈತನ ಮಗನಾಗಿ ಹುಟ್ಟಿ ಆರ್ಥಿಕವಾಗಿ ಸದೃಢನಾಗಿದ್ದು ನನ್ನಂತೆ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿನ ಪ್ರತಿಯೊಬ್ಬ ತಾಯಂದಿರುವ ಶಕ್ತಿವಂತರಾಗಬೇಕು ಎಂಬ ಉದ್ದೇಶದಿಂದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಹಸ್ತವನ್ನು ಚಾಚುತ್ತಿದ್ದೇನೆ ಎಂದರು.

ನನಗೆ ಯಾವುದೆ ಅಧಿಕಾರವಿಲ್ಲ ಆದರು ನನ್ನ ದುಡಿಮೆಯಲ್ಲಿ ಬಂದಂತಹ ಹಣವನ್ನು ಬಡವರಿಗೆ ನೀಡುತ್ತಿದ್ದೇನೆ. ಆದರೆ, ಕಳೆದ 27 ವರ್ಷಗಳಿಂದ ರಾಜ್ಯಭಾರ ನಡೆಸಿದ ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಇದೀಗ ಶಾಸಕಿಯಾಗಿರುವ ಪುತ್ರಿ ರೂಪಕಲಾ ಡಿಸಿಸಿ ಬ್ಯಾಂಕ್‌ ಮೂಲಕ ಬಡವರನ್ನು ಸಾಲದ ಕೂಪದಲ್ಲಿ ತಳ್ಳಿದ್ದಾರೆ. ಶಾಸಕಿಯಾಗಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸದೆ ಕೇವಲ ಹಣ ಹಂಚಿಕೆ ಮಾಡುವುದನ್ನು ಅಭ್ಯಾಸಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಮತದಾರರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಆರೋಪಿಸಿದರು.

ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್‌ ನಾಯ್ಡು, ಗ್ರಾಪಂ ಮಾಜಿ ಅಧ್ಯಕ್ಷ ನವೀಣ್‌ ರಾಮ್‌, ಗ್ರಾಪಂ ಸದಸ್ಯ ಕಣ್ಣೂರು ಚಲಪತಿ, ಮುಖಂಡ ಕೃಷ್ಣಪ್ಪ, ಗಂಗಿರೆಡ್ಡಿ ಇತರರಿದ್ದರು.

ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಬರಲು ರೆಡಿ : ದಲಿತ ಮುಖಂಡರ ಮಾತುಗಳನ್ನು ನಾನು ಒಪ್ಪುತ್ತೇನೆ. ಆದರೆ, ಶಾಸಕಿ ರೂಪಕಲಾ ರವರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ವೇದಿಕೆಗಳಲ್ಲಿ ಚರ್ಚೆ ನಡೆಸಲು ಸಿದ್ಧರಾಗಿದ್ದಾರಾ? ನಾನು ಮಾತ್ರ ರೆಡಿಯಾಗಿದ್ದೇನೆ ಎಲ್ಲಿ ಯಾವ ವೇದಿಕೆಗೆ ಕರೆದರು ಬರಲು ಸಿದ್ಧನಿದ್ದೇನೆ ಎಂದು ಬಹಿರಂಗವಾಗಿ ಸವಾಲ್‌ ಹಾಕಿದರು. ಚುನಾವಣೆಗಾಗಿ ಹಣದ ದಬ್ಟಾಳಿಕೆ ಮಾಡಿದವರು ಶಾಸಕರು ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಈಗಲೂ ಕೆಜಿಎಫ್ ಜನತೆಯನ್ನು ಸಾಲಕ್ಕೆ ಸಿಲುಕಿಸಿದ್ದಾರೆ. ದಲಿತ ಮುಖಂಡರು ಹೇಳಿದಂತೆ ಅಂಬೇಡ್ಕರ್‌ ಆಶಯದಂತೆ ಚುನಾವಣೆ ಎದುರಿಸಲು ಮೊದಲು ಶಾಸಕರು ಸವಾಲನ್ನು ಸ್ವೀಕರಿಸಲಿ ಎಂದು ಹೇಳಿದರು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Sriramulu

BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.