ಮತ ಖರೀದಿ ಮಾಡುವವರನ್ನು ಬಹಿಷ್ಕರಿಸಿ; ನ್ಯಾ.ಗೋಪಾಲಗೌಡ
ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ.
Team Udayavani, Jul 7, 2022, 6:24 PM IST
ಕೋಲಾರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರನ್ನು ಹಣಕ್ಕೆ ಕೊಂಡುಕೊಳ್ಳುವವರನ್ನು ಚುನಾವಣೆ ವ್ಯವಸ್ಥೆಯಿಂದ ಬಹಿಷ್ಕರಿಸುವಂತ ಆಂದೋಲನವನ್ನು ಕೋಲಾರದಿಂದ ಆರಂಭಗೊಳಿಸಿ ದೇಶಾದ್ಯಂತ ಮಾಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ವಿ.ಗೋಪಾಲಗೌಡ ತಿಳಿಸಿದರು.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸ್ವಾಭಿಮಾನಿ ಕೋಲಾರ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣೆಯ ವ್ಯವಸ್ಥೆಯಲ್ಲಿ ಮತಗಳನ್ನು ಸರಕು ಮಾಡಿಕೊಂಡು ಜನರಿಗೆ ಹಣ ಹಂಚಿ ಖರೀದಿಸುತ್ತಿರುವ ರಾಜಕಾರಣಿಗಳು ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಪರ್ಸೆಂಟೇಜ್ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವರ್ಗಾವಣೆಯಲ್ಲಂತೂ ಕೋಟ್ಯಂತರ ರೂ. ಹರಿದಾಡುತ್ತಿದೆ. ಎಸಿಪಿ, ಎಸ್‌ಐ, ತಹಶೀಲ್ದಾರ್, ಉಪನೋಂದಣಾಧಿಕಾರಿ, ಜಿಲ್ಲಾಧಿಕಾರಿಗಳು ಶಾಸಕರಿಗೆ, ಮಂತ್ರಿಗಳಿಗೆ ಕೋಟ್ಯಂತರ ಹಣ ನೀಡಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಧಿ ಕಾರಿಗಳು ಜನರಿಂದ ಹಣ ಹೀರುತ್ತಾರೆ. ಇಡೀ ಸಮಾಜ ಲಂಚಮಯವಾಗಿದೆ. ಜೈಲಿನಲ್ಲಿರಬೇಕಾದವರು ಹೊರಗಿದ್ದಾರೆ. ಖುಲಾಸೆ ಆಗಬೇಕಾದವರು ಜೈಲಿನಲ್ಲಿದ್ದಾರೆ
ಇದು ನಮ್ಮ ಸಮಾಜದ ನಿಜವಾದ ವ್ಯವಸ್ಥೆ ಎಂದರು.
ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ. ಅವರು ಹೇದರ ಕೂಡದು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು ಎಂದರು. ಸಮಾನ ಮನಸ್ಕರ ಸಂಘಟನೆಯ ಮುಖಂಡರಾದ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸ್ವಾಭಿಮಾನಿ ಕೋಲಾರ ಆಂದೋಲನದ ಮೂಲಕ ಭ್ರಷ್ಟ ರಹಿತವಾದ ಚುನಾವಣಾ ವ್ಯವಸ್ಥೆ ಬೇಕೆಂಬ ಕೂಗು ಕೋಲಾರದಿಂದಲೇ ಆರಂಭವಾಗುತ್ತಿರುವುದಕ್ಕೆ ಕಾರಣ ಕೋಲಾರದ ಜನ ಮೂಲತಃ ಸ್ವಾಭಿಮಾನಿಗಳಾಗಿರುವುದೇ ಕಾರಣ ಎಂದರು.
ಮುಖಂಡ ಶ್ರೀಕೃಷ್ಣ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ಹಣ ಪಡೆದವರನ್ನು ಮತ್ತು ನೀಡಿದವರನ್ನು ಮತದಾರರ ಪಟ್ಟಿಯಿಂದಲೇ ವಜಾಗೊಳಿಸುವಂತ ಕಾನೂನು ಜಾರಿಯಾಗಬೇಕೆಂದರು.
ಮುಖಂಡ ಯಲವಾರ ಸೊಣ್ಣೇಗೌಡ, ಪತ್ರಕರ್ತ ಕೆ.ಎಸ್ ಗಣೇಶ್, ಜನವಾದಿ ವಿ.ಗೀತಾ ಮಾತನಾಡಿದರು. ಡಾ.ಉದಯಕುಮಾರ್, ಜೆಪಿ ವೇದಿಕೆ ದಯಾನಂದ್, ರೆಡ್‌ಕ್ರಾಸ್ ಛೇರ್ಮನ್ ಗೋಪಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್ ಬಾಬು, ಅಬ್ಬಣಿ ಶಿವಪ್ಪ, ಗಾಂ ಧಿನಗರ ನಾರಾಯಣಸ್ವಾಮಿ, ಟಿ.ವಿಜಿಕುಮಾರ್, ವಕೀಲ ಸತೀಶ್, ಮಂಜುನಾಥ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.