ಸುಸಜ್ಜಿತ ತಂಗುದಾಣ ನಿರ್ಮಿಸಿ
ರಾಷ್ಟ್ರೀಯ ಹೆದ್ದಾರಿ 75ರ ಗೇಟ್‌ಗಳಲ್ಲಿ ಹೆದ್ದಾರಿ ದಾಟಲು ಫ್ಲೇಓವರ್, ಅಂಡರ್‌ಪಾಸ್ ಮಾಡಿ
Team Udayavani, Aug 11, 2019, 3:11 PM IST
ಮುಳಬಾಗಿಲಿನ ರಾ.ಹೆ. 75ರ ಅಲಾಲಸಂದ್ರ ಗೇಟ್ಲ್ಲಿ ಜೆಎಸ್‌ಆರ್ ಕಂಪನಿ ನಿರ್ಮಿಸಿರುವ ಅವೈಜ್ಞಾನಿಕ ತಂಗುದಾಣ.
ಮುಳಬಾಗಿಲು:ನಗರದಂಚಿನಿಂದ ಕರ್ನಾ ಟಕ ಗಡಿ ಭಾಗದವರೆಗೆ ಜೆಎಸ್‌ಆರ್ ಟೋಲ್ವೇಸ್ ಕಂಪನಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಕಡೆ ರಸ್ತೆ ವಿಭಜಕ ಗಳನ್ನು ಕಿತ್ತುಹಾಕಿ ಸ್ಥಳೀಯ ಜನರು, ವಾಹನ ಸವಾರರು ಅಡ್ಡಾದಿಡ್ಡಿಯಾಗಿ ನುಗ್ಗುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಗೇಟ್‌ಗಳಲ್ಲಿ ಸುಸಜ್ಜಿತ ತಂಗುದಾಣ ನಿರ್ಮಿಸಿದೇ ಜನ ಪರದಾಡುವಂತಾಗಿದೆ.
ಜೆಎಸ್‌ಆರ್ ಟೋಲ್ವೇಸ್ ಕಂಪನಿಯು 2015ರಲ್ಲಿ ಮುಳಬಾಗಿಲು ನಗರದಂಚಿನಿಂದ 15 ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 75 ಅನ್ನು ನಿರ್ಮಿಸಿದೆ. ಚೆನ್ನೈ, ತಿರುಪತಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಹೆದ್ದಾರಿಯು ಸಂಪರ್ಕ ಕಲ್ಪಿಸುವುದರಿಂದ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ, ಸ್ಥಳೀಯರ ಅನುಕೂಲತೆಗೆ ಯಾವುದೇ ಕ್ರಮಕೈಗೊಂಡಿಲ್ಲ.
ಈ ಮಾರ್ಗದಲ್ಲಿ ಹಲವು ಗ್ರಾಮಗಳಿದ್ದು, ಗೇಟ್‌ಗಳ ಬಳಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಈಗಾಗಲೇ ಸೊನ್ನವಾಡಿ ಬೈಪಾಸ್ ಸಮೀಪ, ನರಸಿಂಥತೀರ್ಥ, ಸೀಗೇನಹಳ್ಳಿ, ಅಲಾಲಸಂದ್ರ ಗೇಟ್, ಕಪ್ಪಲಮಡಗು, ಶ್ರೀರಂಗಪುರ, ವೆಂಕಟಾಪುರ, ಎನ್.ವಡ್ಡಹಳ್ಳಿ, ಪದ್ಮಘಟ್ಟ, ತಾತಿಕಲ್, ಹಳೆಕುಪ್ಪ, ನಂಗಲಿ, ಮುದಿಗೆರೆ, ಗಡ್ಡೂರು ಗೇಟ್‌ಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ, ಬಸ್ ನಿಲುಗಡೆ ಒಂದು ಕಡೆಯಾದರೆ, ಶೆಲ್ಟರ್ ನಿರ್ಮಿಸಿರುವುದು ಮತ್ತೂಂದು ಕಡೆಯಾಗಿರುವುದರಿಂದ ಈ ಶೆಲ್ಟರ್‌ಗಳು ಜನರ ಉಪಯೋಗಕ್ಕೆ ಬರದಂತಾಗಿವೆ.
ಸೂಕ್ತ ತಂಗುದಾಣ ನಿರ್ಮಿಸಿ: ಮಳೆ, ಬಿರು ಗಾಳಿಯಿಂದ ತಪ್ಪಿಸಿಕೊಳ್ಳಲು ಒಂದು ವೇಳೆ ಈ ಬಸ್ ಗೇಟ್‌ಗಳಲ್ಲಿ ನಿರ್ಮಿಸಿರುವ ತಂಗುದಾಣಗಳಲ್ಲಿ ಆಶ್ರಯಿಸಿದರೆ ಮತ್ತಷ್ಟು ಸಮಸ್ಯೆಗೆ ಸಿಲುಕುವುದು ಗ್ಯಾರಂಟಿ. ಏಕೆಂದರೆ ಈ ತಂಗುದಾಣಗಳು ವೈಜ್ಞಾನಿಕವಾಗಿದ್ದು, ಜನರಿಗೆ ಸೂಕ್ತ ರಕ್ಷಣೆ ಒದಗಿಸುವುದೇ ಇಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಪ್ರತಿಯೊಂದು ಗೇಟ್‌ನ ಎರಡೂ ಕಡೆಗಳಲ್ಲಿ ಸುರಕ್ಷತೆಯುಳ್ಳ ತಂಗುದಾಣ ನಿರ್ಮಾಣ ಮಾಡಲು ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿ ನಿರ್ಮಿಸಿದ ಕಂಪನಿಗೆ ತಿಳಿಸಬೇಕಿದೆ.
ವಾರದಲ್ಲಿ ಎರಡು ಮೂರು ಅಪಘಾತ: ಪ್ರಮುಖವಾಗಿ ಈ ಹೆದ್ದಾರಿಯಲ್ಲಿ ಕೆ.ಜಿ.ಎಫ್, ತಾಯಲೂರು ಬೈಪಾಸ್, ಕೆ.ಬೈಯಪಲ್ಲಿ ರಸ್ತೆ, ನರಸಿಂಥತೀರ್ಥ, ಎನ್.ವಡ್ಡಹಳ್ಳಿ, ನಂಗಲಿ ಗ್ರಾಮಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಯಾವುದೇ ಫ್ಲೈಓವರ್ ಆಥವಾ ಅಂಡರ್‌ಪಾಸ್ ನಿರ್ಮಿಸದ ಕಾರಣ, ಜನರೇ ಡಿವೈಡರ್ ಹೊಡೆದು ನಿರ್ಮಿಸಿಕೊಂಡಿರುವ ಜಾಗದಲ್ಲಿ ಹೆದ್ದಾರಿ ದಾಟಲು ಹೋಗಿ ವಾರದಲ್ಲಿ ಎರಡು ಮೂರು ಅಪಘಾತಗಳು ಸಂಭವಿಸುತ್ತಲೇ ಇವೆ.
ಅತೀ ವೇಗವಾಗಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳಲು ಹೋಗಿ ಜನ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಹಲವು ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ತೆರಿಗೆ ಹಣದಲ್ಲಿ ರಸ್ತೆ ನಿರ್ಮಿಸಿ ಈಗ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡಿದರೂ ಜನರ ಪ್ರಾಣಕ್ಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸ.
● ಎಂ.ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.