ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಆಂದೋಲನ
Team Udayavani, Feb 28, 2022, 2:27 PM IST
ಕೋಲಾರ: ಮಹಿಳಾ ಸ್ವಸಹಾಯ ಸಂಘಗಳು ಸ್ವಾವಲಂಬಿ ಬದುಕಿಗಾಗಿ ಕೈಗೊಳ್ಳುವ ಉದ್ಯಮಗಳಿಗೆ ಡಿಸಿಸಿ ಬ್ಯಾಂಕ್ ಅಗತ್ಯ ಸಾಲ ಸೌಲಭ್ಯನೀಡಲು ಸಿದ್ಧವಿದೆ. ನೀವು ಉತ್ಪಾದಿಸುವರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಮಾರುಕಟ್ಟೆಒದಗಿಸುವ ಕಾರ್ಯವನ್ನು ಆಂದೋಲನವಾಗಿಸಿ ಎಂದುಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಭಾನುವಾರ”ಮನೆಗೊಬ್ಬ ಉದ್ಯಮಿ, ಊರಿಗೊಂದು ಉದ್ಯಮ’ಧ್ಯೇಯದಡಿ ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾಟ್ರಸ್ಟ್‌ನಿಂದ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನು ಬಿಡುಗಡೆ ಮಾಡಿ, ಸ್ವತಃ ಖರೀದಿಸುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದೇಶಿ ಕಂಪನಿಗಳಿಗೆ ಒಬ್ಬರೇ ಮಾಲಿಕರು. ಆದರೆ,ಮಹಿಳಾ ಸ್ವಸಹಾಯ ಸಂಘಗಳು ಸ್ಥಾಪಿಸುವ ಉದ್ಯಮಕ್ಕೆ ಬದುಕುಕಟ್ಟಿಕೊಳ್ಳುವ ಸಾವಿರಾರುಮಹಿಳೆಯರು ಮಾಲಿಕರು, ಇವರಿಗೆ ಅಗತ್ಯ ಮಾರುಕಟ್ಟೆ ಒದಗಿಸಿ ನಂಬಿಕೆ ಬಲಗೊಳಿಸುವ ಕಾರ್ಯವನ್ನು ಹೆಲ್ತ್ ಇಂಡಿಯಾ, ವೆಲ್ತ್ ಇಂಡಿಯಾಟ್ರಸ್ಟ್ ಮಾಡಿಕೊಡುವಂತೆ ಸೂಚಿಸಿದರು.
ನಬಾರ್ಡ್‌ನಿಂದ ತರಬೇತಿಗೆ ಕ್ರಮ: ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲಿಟ್ಟು, ಮಹಿಳಾ ಸಂಘಗಳು ಒಟ್ಟುಗೂಡಿ ಉದ್ಯಮ ಸ್ಥಾಪಿಸಲು ಮುಂದೆ ಬಂದರೆ20 ಲಕ್ಷ ರೂ. ಸಾಲ ಹಾಗೂ ವಿಮೆ ನೀಡಲು ಸಿದ್ಧ.ಜೊತೆಗೆ ನಬಾರ್ಡ್‌ನಿಂದ ಅಗತ್ಯ ತರಬೇತಿ ಕೊಡಿಸುವುದಾಗಿ ಭರವಸೆ ನೀಡಿದರು.
ದೊಡ್ಡ ಕಂಪನಿಗಳ ಬ್ರಾಂಡ್‌ಗೆ ಬೆಲೆ ಅಷ್ಟೆ, ಗುಣಮಟ್ಟದಲ್ಲಿ ನೀವೇ ಮುಂದಿರುತ್ತೀರಿ, ನಗರ,ಹೋಬಳಿ ಕೇಂದ್ರಗಳಲ್ಲಿ ಮನೆ ಮನೆಗೂ ನಿಮ್ಮ ಉತ್ಪನ್ನತಲುಪಿಸಿ, ಈ ಕಾರ್ಯವನ್ನು ಟ್ರಸ್ಟ್ ಜತೆಗೂಡಿಆಂದೋಲನವಾಗಿಸಿದರೆ ಇದೊಂದು ಮಹಿಳೆಯರಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿಕ್ರಾಂತಿಕಾರಿ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮನೆ ಮನೆಗೆ ತಲುಪಿಸಿ: ನಾಗರಿಕರಲ್ಲಿಯೂಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಮುಕ್ತಆಹಾರೋತ್ಪನ್ನಗಳ ಕುರಿತು ಬೇಡಿಕೆ ಕಂಡು ಬರುತ್ತಿದೆ.ಇದನ್ನು ಅರಿತು ಸ್ವದೇಶಿ ಬ್ರಾಂಡ್‌ನಡಿ ಎಲ್ಲಾ ಮಹಿಳಾಸಂಘಗಳು ಒಟ್ಟಾರೆ “ಶ್ರೀಧನ್ಯ’ ಹೆಸರು ಹಾಗೂ ಡಿಸಿಸಿ ಬ್ಯಾಂಕಿನ ಆರ್ಥಿಕ ಸಹಾಯದ ಮಾಹಿತಿಯೊಂದಿಗೆ ನಿಮ್ಮ ಉತ್ಪನ್ನಗಳು ಮನೆ ಮನೆ ತಲುಪುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಂದಿನಿ ಹಾಲನ್ನೇ ಬಳಸುವಮೂಲಕ ಜಿಲ್ಲೆಯ ರೈತರ ಬದುಕಿಗೆ ನೆರವಾಗಿ,ಎಲ್ಲೇ ಹೋದರೂ ನಂದಿನಿ ಹಾಲನ್ನೇ ಕೊಡಲು ಪ್ರೇರೇಪಿಸಿ ಎಂದು ವಿವರಿಸಿದರು.
ಒಂದೇ ಹೆಸರು, ಒಂದೇ ಟೇಸ್ಟ್: ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ ಟ್ರಸ್ಟ್‌ನ ಕಾರ್ಯದರ್ಶಿ ಮನೋಜ್‌ಮಾತನಾಡಿ, “ಒಂದೇ ಹೆಸರು ಒಂದೇ ಟೇಸ್ಟ್’ ಘೋಷಣೆಯಡಿ, “ಶ್ರೀಧನ್ಯ’ ಬ್ರಾಂಡ್‌ನಡಿ ನಗರದಎಲ್ಲಾ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವಉತ್ಪನ್ನಗಳನ್ನು ಆಧುನಿಕ ರೀತಿಯ ಪ್ಯಾಕಿಂಗ್‌ನೊಂದಿಗೆ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಒದಗಿಸುತ್ತಿರುವುದಾಗಿ ತಿಳಿಸಿದರು.
10 ಉತ್ಪನ್ನಗಳಿಗೆ ಮಾರುಕಟ್ಟೆ: ವಿದೇಶಿ ಕಂಪನಿಗಳ ಆರ್ಭಟ ಕಡಿಮೆ ಮಾಡಿ, ಮನೆಗೊಂದು ಉದ್ಯಮಿ, ಊರಿಗೊಂದು ಉದ್ಯಮ ಧ್ಯೇಯದೊಂದಿಗೆ ಸರ್ವರಿಗೂ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ತಿಳಿಸಿ, ರಾಗಿ ಮಾಲ್ಟ್, ಸಾಂಬಾರು ಪುಡಿ, ಚಟ್ನಿಪುಡಿ, ಧನಿಯಾಪುಡಿ, ಚಕ್ಕಿ ಸೇರಿ 10 ಉತ್ಪನ್ನಗಳಿಗೆ ನಾವೇಅಗತ್ಯ ಮಾರು ಕಟ್ಟೆಯೂ ಒದಗಿಸುವುದಾಗಿ ಹೇಳಿದರು.
ಟ್ರಸ್ಟ್‌ನ ಸದಸ್ಯರಾದ ಅನಂತಕೀರ್ತಿ, ಜಿಲ್ಲಾದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿ ಮೋಹನ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದಕೃಷ್ಣೇಗೌಡ, ಶಶಿಧರ್, ಜಯಂತ್, ಶ್ರೀಧನ್ಯ ತಂಡದಲಲಿತಮ್ಮ, ಕಾರ್ಯದರ್ಶಿ ರುಕ್ಮಿಣಿಯಮ್ಮ, ಚನ್ನರಾಯಸ್ವಾಮಿ ಮಹಿಳಾ ಸ್ವಸಹಾಯ ಸಂಘದ ಸಾವಿತ್ರಮ್ಮ,ಮಂಜುಳಾ, ಪ್ರಮೀಳಮ್ಮ, ಲಕ್ಷ್ಮೀ, ನಾಗಲಕ್ಷ್ಮೀ, ಕೋಮಲಾ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.