ನಗರಸಭೆಯಿಂದ ಅನಧಿಕೃತ ಹೂವಿನ ಅಂಗಡಿಗಳ ತೆರವು
Team Udayavani, Feb 20, 2021, 1:03 PM IST
ಕೋಲಾರ: ಅನಧಿಕೃತವಾಗಿ ನಗರಸಭೆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಹೂವಿನ ಟೆಂಟ್‌ಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೂ ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಹೂ ವ್ಯಾಪಾರ ಮಾಡುವ ಅವಕಾಶ ನಗರಸಭೆ ವತಿಯಿಂದಕಲ್ಪಿಸುವುದಾಗಿ ನಗರಸಭೆ ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಭರವಸೆ ನೀಡಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಅಧ್ಯಕ್ಷರು ಅನಧಿಕೃತವಾಗಿ ನಗರಸಭೆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಹೂವಿನ ವ್ಯಾಪಾರ ನಡೆಸುತ್ತಿದ್ದ ಟೆಂಟ್‌ಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿ ಮಾತನಾ ಡಿದರು. ಜನರ ವಿಶ್ರಾಂತಿಗಾಗಿ ನಿರ್ಮಿಸಿದ ತಂಗುದಾಣ ಒತ್ತುವರಿ ಮಾಡಿ ಕೊಂಡು ಸಿಮೆಂಟ್ ಹಾಗೂ ಕಬ್ಬಿಣದಿಂದ ನಿರ್ಮಿಸಿ ಕೊಂಡಿದ್ದ ಪೆಟ್ಟಿಗೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ತಂಗುದಾಣ ಸುಸಜ್ಜಿತಗೊಳಿಸುವುದಾಗಿ ತಿಳಿಸಿದರು.
ತೆರವು ಕಾರ್ಯಚರಣೆ ಸಂದರ್ಭದಲ್ಲಿ ಟೆಂಟ್ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಹೂ ವ್ಯಾಪಾರಿಗಳು ತಮ್ಮ ಟೆಂಟ್‌ಗಳನ್ನು ತಾವೇ ತೆರವುಗೊಳಿಸುತ್ತೇವೆ. ನಮಗೆ ಕಾಲಾವಕಾಶನೀಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಸಂಜೆವರೆಗೂ ಕಾಲಾವಕಾಶ ನೀಡಿ ತೆರವುಗೊಳಿಸದಿದ್ದಲ್ಲಿ ನಾಳೆ ಮತ್ತೆ ತೆರವುಕಾರ್ಯಚರಣೆ ಪ್ರಾರಂಭಿಸುದಾಗಿ ತಿಳಿಸಿದರು.
ಹೂ ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಹೂ ವ್ಯಾಪಾರ ಮಾಡುವ ಅವಕಾಶ ನಗರಸಭೆ ವತಿಯಿಂದ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎನ್. ಎಸ್.ಪ್ರವೀಣ್‌ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ನಗರಸಭೆ ಪೌರಾಯುಕ್ತಶ್ರೀಕಾಂತ್, ಸದಸ್ಯರಾದ ನಾರಾಯಣಮ್ಮ, ಮಂಜುನಾಥ್, ಸುರೇಶ್ ಮುಖಂಡರಾದ ಶಬರೀಶ್ ಯಾದವ್, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.