ಜೆಎನ್‌ಯು ಘಟನೆಗೆ ತೀವ್ರ ಖಂಡನೆ
Team Udayavani, Jan 10, 2020, 2:43 PM IST
ಮುಳಬಾಗಿಲು: ಎಬಿವಿಪಿ ಕಾರ್ಯಕರ್ತರು ಎನ್ನಲಾದ ಮುಸುಕುದಾರಿಗಳು ನವ ದೆಹಲಿ ಜೆಎನ್‌ಯು ವಿದ್ಯಾರ್ಥಿ ಗಳು ಮತ್ತು ಪ್ರೊಫೆಸರ್‌ಗಳ ನಡೆಸಿದ ದಾಳಿ ಖಂಡಿಸಿ ಎಸ್‌ಎಫ್ಐ ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಜಯರಾಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್‌ಎಫ್ಐ ಜಿಲ್ಲಾ ಕಾರ್ಯದರ್ಶಿ ಅಂಬ್ಲಿಕಲ್ ಶಿವಪ್ಪ, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಯಿಶಿ ಘೋಷ್ ಮತ್ತು ಸೂರಿ ಅವರನ್ನು ಸಮಾಜ ವಿರೋಧಿಗಳು ಥಳಿಸಿದ್ದಾರೆ ಎಂದು ದೂರಿದರು. ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ನಿರಂತರ ಹಲ್ಲೆಗಳು ನಡೆಯುತ್ತಿರು ವುದನ್ನು ನೋಡಿದರೆ ವಿದ್ಯಾರ್ಥಿಗಳ ಶಕ್ತಿಯನ್ನು ಎಲ್ಲಾ ರೀತಿಯಲ್ಲೂ ಧಮನ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಭಾನುವಾರ ರಾತ್ರಿ 8 ಗಂಟೆಗೆ ನೆಹರು ವಿಶ್ವವಿದ್ಯಾಲಯದ ಬಾಗಿಲಿಗೆ ತಲುಪುವ ಬಾಬಾ ಗಂಧರ್ವ ರಸ್ತೆಯಲ್ಲಿನ ಕರೆಂಟ್ ಕೂಡ ತೆಗೆದು, ಎಬಿವಿಪಿ ಕಾರ್ಯಕರ್ತರು ಎನ್ನಲಾದ ಮುಸುಕುದಾರಿಗಳು ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಎಸ್‌ಎಫ್ಐ ತಾಲೂಕು ಅಧ್ಯಕ್ಷ ಸುರೇಶ್‌ಬಾಬು, ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷರಾದ ಶಶಿಕುಮಾರ್, ಅಂಕಿತಾ, ಸಹ ಕಾರ್ಯದರ್ಶಿ ಶಂಕರ್, ಅಭಿಷೇಕ್, ತಾಲೂಕು ಸದಸ್ಯರಾದ ಭಾರ್ಗವಿ, ಪ್ರವೀಣ್, ತಾಲೂಕು ಮುಖಂಡರಾದ ಅನುಪ್ರಿಯಾ ಮತ್ತು ಸುಶ್ಮಿತ ಪಾಲ್ಗೊಂಡಿದ್ದರು.0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.