15 ವರ್ಷಗಳ ಬಿಜೆಪಿ ಆಡಳಿತ ಕೊನೆ
Team Udayavani, Nov 11, 2020, 5:41 PM IST
ಮಾಲೂರು: ಬಿಜೆಪಿಯ ನಿರಂತರ 15 ವರ್ಷಗಳ ಆಡಳಿತಕ್ಕೆ ತಿಲಾಂಜಲಿ ಕೊಟ್ಟ ಕಾಂಗ್ರೆಸ್ ಪಕ್ಷ, ಜೆಡಿಎಸ್‌ಮತ್ತುಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದೆ.
ಒಟ್ಟು 27 ಸದಸ್ಯ ಬಲದ ಮಾಲೂರು ಪುರಸಭೆಗೆ ನಡೆದಸಾರ್ವತ್ರಿಕ ಚುನಾವಣೆಯಲ್ಲಿಕಾಂಗ್ರೆಸ್‌ನ 11, ಬಿಜೆಪಿ 10, ಜೆಡಿಎಸ್ 1, ಪಕ್ಷೇತರರು 5 ಮಂದಿಗೆಲುವು ಸಾಧಿಸಿದ್ದರು. ಈ ಪೈಕಿ ಪಕ್ಷೇತರ ಸದಸ್ಯ ಎನ್.ವಿ.ಮುರಳೀಧರ ಆರಂಭದಲ್ಲಿಯೇ ಶಾಸಕ ನಂಜೇಗೌಡರ ಒಡನಾಡಿ ಯಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರು.
ವಾರ್ಡ್‌ಸಂಖ್ಯೆ 4ಮೀಸಲುಕ್ಷೇತ್ರದಿಂದ ಎರಡನೇ ಬಾರಿ ಅಯ್ಕೆಯಾಗಿದ್ದ ಎನ್.ವಿ. ಮುರಳೀಧರ ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ,ಕಾಂಗ್ರೆಸ್ ನ ಹಿಂದುಳಿದ ವರ್ಗದ ಸದಸ್ಯೆ ಭಾರತೀ ಶಂಕರಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಅನಿತಾ ನಾಗರಾಜು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ 19ರ ಸದಸ್ಯೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.
15 ಮಂದಿ ಹಕ್ಕು ಚಲಾವಣೆ: ಚುನಾವಣೆ ಪ್ರಕ್ರಿಯೆ ನಡೆದು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರಮತವೂ ಸೇರಿ 15 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಬಿಜೆಪಿ ಪರವಾಗಿ ಸಂಸದ ಎಸ್ ಮುನಿಸ್ವಾಮಿ ಮತ್ತು ಮೂರು ಮಂದಿ ಪಕ್ಷೇತರ ಸದಸ್ಯರ ಮತಗಳಿಂದ 13 ಮತಗಳು ದಾಖಲಾಗಿದ್ದವು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಂ. ಮಂಜುನಾಥ್, ಕಾಂಗ್ರೆಸ್‌ನ ಮುರಳೀಧರ ಹಾಗೂ ಭಾರತೀ ಶಂಕರಪ್ಪ ಅವರ ಆಯ್ಕೆ ಪ್ರಕಟಿಸಿದ್ದಾರೆ. ವಾರ್ಡ್ 8ರಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವುಸಾಧಿಸಿದ್ದ ವಿಜಯ ಲಕ್ಷ್ಮೀ ಕೃಷ್ಣಪ್ಪ ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು.
ಪೊಲೀಸ್ ಬಂದೋಬಸ್ತ್: ಕೋಲಾರ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಮತ್ತು ಕ್ಷೇತ್ರದ ಶಾಸಕ ಕೆ. ವೈ.ನಂಜೇಗೌಡ ಅವರು ಒಂದೇ ಹೋಬಳಿಗೆ ಸೇರಿದವರಾದ ಕಾರಣ ಇಬ್ಬರ ನಡುವೆ ಪರಸ್ಪರ ರಾಜಕೀಯ ಚಟುವಟಿಕೆಗಳು ಜಿದ್ದಾಜಿದ್ದಿಗೆ ಕಾರಣವಾಗಿ ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾರಣ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ಮಹತ್ವ ಪಡೆದುಕೊಂಡಿತ್ತು. ಪಟ್ಟಣದಾದ್ಯಂತ 144ರ ಕಲಂನ ಅನ್ವಯ ನಿಷೇಧಾಜ್ಞೆ ಹೊರಡಿಸಿ ಪೊಲೀಸ್ ಬಂದೋಬಸ್ತು ಒದಗಿಸಿದ್ದರು. ಎಸ್ಪಿ ಜಾಹ್ನವಿ ಸ್ಥಳದಲ್ಲಿ ಮೊಕ್ಕಂ ಹೂಡಿ ಭದ್ರತೆ ಉಸ್ತುವಾರಿ ವಹಿಸಿದ್ದರು.
15 ವರ್ಷಗಳ ಸುದೀರ್ಘ ಆಡಳಿತಕ್ಕೆ ಇತಿಶ್ರೀ : ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ಎಸ್.ಎಸ್.ಕೃಷ್ಣಯ್ಯಶೆಟ್ಟಿಯವರ ಕಾಲದಲ್ಲಿ ಬಿಜೆಪಿಗೆ ಬದ್ರಭುನಾದಿ ಕಲ್ಪಿಸಿ ಇಲ್ಲಿನ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿಯು ಎರಡನೇ ಅವಧಿಯಲ್ಲಿ ಎಲ್ಲಾ23 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ 5 ವರ್ಷಗಳಕಾಲ ಪ್ರತಿಪಕ್ಷವಿಲ್ಲದೇ ಆಡಳಿತನೀಡಿತ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಪ್ರಬಲ ಸ್ಪರ್ಧೆ ನೀಡಿದ್ದಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಮತ್ತೆ5 ವರ್ಷಗಳಕಾಲ ಆಡಳಿತ ನೀಡಿತ್ತು. ಇದರಿಂದ ನಿರಂತರವಾಗಿ 15 ವರ್ಷಗಳ ಸುದೀರ್ಘಆಡಳಿತವನ್ನು ಪ್ರಸ್ತುತ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷಕೊನೆಗಾಣಿಸಿದೆ.
22 ದಿನಗಳ ರೆರ್ಸಾಟ್ ವಾಸಕ್ಕೆ ಮುಕ್ತಿ : ಕಳೆದ 22 ದಿನಗಳ ಹಿಂದೆ ಮಾಲೂರು ಪಟ್ಟಣಕ್ಕೆ ಆಗಮಿಸಿದ್ದ ಸಂಸದ ಎಸ್.ಮುನಿಸ್ವಾಮಿ ಅವರು ತಮ್ಮ ಮಾತಿನ ವೇಳೆಯಲ್ಲಿ ಮಾಲೂರು ಪುರಸಭೆಯ ಆಡಳಿತವನ್ನು ಬಿಜೆಪಿ ಹಿಡಿಯಲಿದ್ದು,ಕಾಂಗ್ರೆಸ್‌ನ ಮೂರ್ನಾಲ್ಕು ಸದಸ್ಯರು ತಮ್ಮ ಸಂಪರ್ಕದಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದರಿಂದ ಎಚ್ಚರವ ಹಿಸಿದ್ದ ಶಾಸಕ ಕೆ.ವೈ.ನಂಜೇಗೌಡರು ಮರುದಿನವೇ ಪಕ್ಷದ11ಸದಸ್ಯರು, ಓರ್ವ ಜೆಡಿಎಸ್ ಸದಸ್ಯ ಮತ್ತು ಇಬ್ಬರು ಪಕ್ಷೇತರ ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರವಾಸಕ್ಕೆಕಳುಹಿಸುವ ಮೂಲಕ ಆಡಳಿತ ಚುಕ್ಕಾಣಿಗೆ ಅಗತ್ಯವಾಗಿರುವ ಸದಸ್ಯರ ಬಲವನ್ನು ಹೊಂದಲು ಯಶಸ್ವಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲನ್ಯಾಸ
Video: ಇನ್ನು 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.