ಹಬ್ಬದಂದೇ ಕಾಂಗ್ರೆಸ್ ಸಭೆ: ಗದ್ದಲ
Team Udayavani, Jan 3, 2022, 1:12 PM IST
ಬಂಗಾರಪೇಟೆ: ಊರ ಹಬ್ಬದ ದಿನವೇ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದಕ್ಕೆಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾತಿನಚಕಮಕಿ ನಡೆದು ಕೆಲ ಕಾಲ ಬಿಗುವಿನ ವಾತಾವರಣನಿರ್ಮಾಣವಾದ ಘಟನೆ ಹುಲಿಬೆಲೆ ಗ್ರಾಮದಲ್ಲಿ ನಡೆಯಿತು.
ಹಲವು ದಶಕಗಳ ನಂತರ ಗ್ರಾಮದ ಕೆರೆ ತುಂಬಿರುವುದರಿಂದ ಗ್ರಾಮಸ್ಥರೆಲ್ಲರೂ ಒಂದಾಗಿ ಪಕ್ಷಭೇದವಿಲ್ಲದೆ ಊರ ಹಬ್ಬ ಆಚರಣೆ ಮಾಡಿ, ಬಾಗಿನ ಅರ್ಪಿಸಲು ಮುಂದಾಗಿದ್ದರು. ಅದರಂತೆ ಭಾನುವಾರ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಗ್ರಾಮಸ್ಥರೆಲ್ಲರೂ ಹಬ್ಬಆಚರಣೆ ಮಾಡುವ ಸಿದ್ಧತೆಯಲ್ಲಿದ್ದರೆ, ಕಾಂಗ್ರೆಸ್ ಮುಖಂಡರು ಗ್ರಾಮದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದು ಎಲ್ಲರ ಕಣ್ಣು ಕೆಂಪಾಗುವಂತೆಮಾಡಿತು.
ಕಾಂಗ್ರೆಸ್ ಸಭೆ ಆರಂಭವಾಗುತ್ತಿದ್ದಂತೆ ಗುಂಪೊಂದು ಗ್ರಾಮದಲ್ಲಿ ಎಲ್ಲರೂ ಒಂದಾಗಿ ಹಬ್ಬ ಮಾಡಲು ಹೇಳಿ, ಈಗ ಕಾಂಗ್ರೆಸ್ ಸಭೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿತು. ಸಭೆಯನ್ನು ರದ್ದು ಮಾಡಿ ಇಲ್ಲವೇ ಹಬ್ಬವನ್ನು ನಿಲ್ಲಿಸಿ ಎಂದು ಪಟ್ಟು ಹಿಡಿದು ಗಲಾಟೆಆರಂಭಿಸಿದರು. ಇದರಿಂದ ಕೆರಳಿದ ಕಾಂಗ್ರೆಸ್ ಮುಖಂಡರು ಮಾತಿನ ಚಕಮಕಿ ನಡೆಸಿದರು.
ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಮಾಧಾನಪಡಿಸಲುಯತ್ನಿಸಿದರೂ ಫಲ ಸಿಗಲಿಲ್ಲ.ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಸಭೆ ತರಾತುರಿಯಲ್ಲಿ ಮುಗಿಸಿ ಮುಖಂಡರು ಹೊರನಡೆದರು. ಸಭೆ ಮುಗಿಯುತ್ತಿದ್ದಂತೆ ಮತ್ತೆ ಎರಡು ಗುಂಪುಗಳ ನಡುವೆ ಮಾತಿನ ವಾಗ್ಧಾಳಿ ಮುಂದುವರಿಯಿತು. ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ರಸ್ತೆ ಕಾಮಗಾರಿಯನ್ನೂ ಇಂದೇ ಮಾಡಲುಮುಂದಾಗಿದ್ದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ಊರ ಹಬ್ಬ ಆಚರಿಸಬಾರದೆಂದು ಒಂದು ಗುಂಪು, ಮಾಡಬೇಕೆಂದು ಮತ್ತೂಂದು ಗುಂಪು ಹಠಕ್ಕೆಬಿದ್ದವರಂತೆ ಗಲಾಟೆ ಮಾಡುತ್ತಿದ್ದರೂ ಅಲ್ಲಿದ್ದವರು ಮೂಕ ಪ್ರೇಕ್ಷಕರಂತೆ ಗಮನಿಸುತ್ತಿದ್ದರೇ ವಿನಃ, ಗಲಾಟೆ ಶಮನ ಮಾಡಲು ಮುಂದಾಗಿಲಿಲ್ಲ. ಈ ವೇಳೆ ಗ್ರಾಮದ ಮುಖಂಡರು ಸ್ಥಳದಿಂದ ನಿರ್ಗಮಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್‌ಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್. ಕೆ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷಬಿ.ನಾರಾಯಣಗೌಡ, ನಿರ್ದೇಶಕರಾದವೆಂಕಟಾಚಲಪತಿ, ಗ್ರಾಪಂ ಅಧ್ಯಕ್ಷ ಆರ್.ವಿ.ಸುರೇಶ್,ಮಾಜಿ ಅಧ್ಯಕ್ಷ ಜಾಫರ್, ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟೇಶ್, ಎಪಿಎಂಸಿ ನಿರ್ದೇಶಕ ಡೋಲುನಾರಾಯಣಸ್ವಾಮಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನೈಸ್ ರಘುನಾಥ್, ಮುಖಂಡರಾದ ದೇಶಿಹಳ್ಳಿ ವೆಂಕಟರಾಮ್, ಬಸವರಾಜ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.