![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 29, 2020, 1:44 PM IST
ಬೇತಮಂಗಲ: ಕೆಜಿಎಫ್ ಕ್ಷೇತ್ರದಲ್ಲಿ ಗ್ರಾಪಂನಿಂದ ವಿಧಾನಸಭೆವರೆಗೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಬೇಕೆಂದು ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಬಳಿಯ ಕ್ಯಾಸಂಬಳ್ಳಿ ಹೋಬಳಿ ಪೋತರಾಜನಹಳ್ಳಿ, ದೇವೇರ ಹಳ್ಳಿ, ಕಂಗಾಡ್ಲಹಳ್ಳಿ, ಮೋತಕಪಲ್ಲಿ, ಸೀತಂಪಲ್ಲಿ, ಬೂಡಿದಿಮಿಟ್ಟೆ ಸೇರಿ ಒಟ್ಟು 12 ಗ್ರಾಮಗಳಲ್ಲಿ ಸಂಸದರ ನಿಧಿಯಿಂದ ಮಂಜೂರಾಗಿದ್ದ ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟಿಸಿ ಮಾತನಾಡಿದರು. ತಾನು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದಾಗ ತನ್ನ ಮುಖವನ್ನೂ ನೋಡದೆ ಮತ ಚಲಾಯಿಸಿದ್ದೀರಿ. ನಿಮ್ಮ ಹಳ್ಳಿಗಳ ಅಭಿವೃದ್ಧಿಗಾಗಿ ತಾನು ಸದಾ ಸೇವಕನಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಈ ಭಾಗದ ಜಿಪಂ ಸದಸ್ಯ ಜಯ ಪ್ರಕಾಶ್ ನಾಯ್ಡು ಅವರ ಮನವಿಯಂತೆ ಈ ಭಾಗದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ, ಬಸ್ ತಂಗುದಾಣ ಮಂಜೂರು ಮಾಡಿದ್ದೇನೆ.ಕೆಜಿಎಫ್ ನಗರದಲ್ಲಿಯೂ ತನ್ನ ಅನುದಾನದಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿಪಡಿಸಿದ್ದೇನೆ ಎಂದರು.
ಕೆಜಿಎಫ್ಗೆ ಹೆಚ್ಚು ಅನುದಾನ: ಕೆಜಿಎಫ್, ಬಂಗಾರಪೇಟೆ, ನರಸಾಪುರ, ವೇಮಗಲ್ ಕೈಗಾರಿಕೆ ಪ್ರದೇಶಗಳಲ್ಲಿ ವಿಶೇಷವಾಗಿ ಕೆಜಿಎಫ್ಗೆ ಹೆಚ್ಚು ಅನುದಾನ ಬಿಡುಗಡೆಗೊಳಿಸಿದ್ದೇನೆಂದರು. ಬಿಜೆಪಿ ಕೇಂದ್ರ-ರಾಜ್ಯದಲ್ಲಿ ಬಡವರ, ಶ್ರಮಿಕರ, ರೈತರ ಪರವಿದೆ. ಮುಂಬರುವ ಗ್ರಾಪಂ, ತಾಪಂ, ಜಿಪಂ, ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ಶಾಸಕರನ್ನು ಗೆಲ್ಲಿಸಿ ನಮ್ಮ ಶಕ್ತಿ ಪ್ರದರ್ಶನ ಗೊಳಿಸಬೇಕೆಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ವಿದ್ಯಾವಂತರು ಸರ್ಕಾರದ ಸೌಲಭ್ಯ ಬಗ್ಗೆ ಮಾಹಿತಿ ಪಡೆದು ಸಬ್ಸಿಡಿ ಸಾಲಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಸೃಷ್ಟಿಸಿಕೊಳ್ಳಬೇಕು, ಈ ಬಗ್ಗೆ ಮಾಹಿತಿ ನೀಡಿದರೆ ಮಾತ್ರ ಪ್ರತಿಯೊಬ್ಬರೂ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಮತ್ತು ಜಿಪಂ ಸದಸ್ಯ ಜಯಪ್ರಕಾಶ್ ನಾಯ್ಡು, ನಗರಾಧ್ಯಕ್ಷ ಕಮಲನಾಥನ್, ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂ ನಾಯ್ಡು, ಬಿಜೆಪಿ ಮುಖಂಡ ನವೀಣ್ ರಾಮ್, ಮಹದೇವಪುರ ಜಿ.ಜಲಪತಿ, ಗ್ರಾಮಾತರ ಘಟಕ ಪ್ರ.ಕಾರ್ಯದರ್ಶಿ ಹೇಮಾರೆಡ್ಡಿ, ಆನಂದಗೌಡ, ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಸೀತಂಪಲ್ಲಿ ಬಾಬು, ಪೋತರಾಜನಹಳ್ಳಿಜಯರಾಂ, ಮೋತಕಪಲ್ಲಿ ವೆಂಕಟ ರಾಮ್, ಅನೇಕ ಮುಖಂಡರು ಇದ್ದರು.
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
You seem to have an Ad Blocker on.
To continue reading, please turn it off or whitelist Udayavani.