ಲಸಿಕೆ ಅಭಿಯಾನ ಯಶಸ್ಸಿಗೆ ಸಹಕರಿಸಿ: ಡೀಸಿ

Team Udayavani, Jun 1, 2021, 1:32 PM IST

ಲಸಿಕೆ ಅಭಿಯಾನ ಯಶಸ್ಸಿಗೆ ಸಹಕರಿಸಿ: ಡೀಸಿ

ಕೋಲಾರ: ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲಾಗಲು ಶಿಕ್ಷಕರ ಸಹಕಾರ ‌ ಅಗತ್ಯ, ಗ್ರಾಮಗಳಲ್ಲಿ ಅಭಿಯಾನ ‌ ನಡೆಸಿ, ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕರಿಸಿ ಎಂದು ವಿವಿಧಶಿಕ್ಷಕ, ನೌಕರರ ಸಂಘಟನೆಗಳ ಮುಖಂಡರಿಗೆ ವಿಧಾನ ಪರಿಷತ್‌ ಸದಸ್ಯ ಡಾ. ವೈ.ಎ. ನಾರಾಯಣ ಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಮನವಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ವಿವಿಧ ಶಿಕ್ಷಕ, ನೌಕರರ ಸಂಘಟನೆಗಳ ಸಭೆಯಲ್ಲಿ ಮಾತನಾಡಿ, ಕೋವಿಡ್‌ ತಡೆಗೆ ಲಸಿಕೆಯೊಂದೇ ಅಸ್ತ್ರವಾಗಿದೆ. ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದ್ದು, 18 ವರ್ಷ ಮೇಲ್ಪಟ್ಟವರು10 ರಿಂದ12 ಲಕ್ಷ ಇದ್ದಾರೆ. ಇವರೆಲ್ಲರಿಗೂ ಲಸಿಕೆ ನೀಡುವ ಮೂಲಕ ಕೋವಿಡ್‌ ತಡೆಯಬಹುದಾಗಿದೆ ಎಂದು ವಿತ‌ರಿಸಿದರು.

ಅಮೆರಿಕಾ, ಇಸ್ರೇಲ್‌ ದೇಶಗಳಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಮಾಸ್ಕ್ ಅಗತ್ಯವಿಲ್ಲ ಎಂಬಘೋಷಣೆ ಕುರಿತು ಪ್ರಸ್ತಾಪಿಸಿದ ಅವರು, ಲಸಿಕೆ ಹಾಕಿಸಿಕೊಂಡರೆ ಜೀವ ಹಾನಿ ಇಲ್ಲ ಎಂಬುದನ್ನುಮನಗಂಡು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಶಿಕ್ಷಕರು ಸಹಕಾರ ನೀಡಿ ಎಂದು ಹೇಳಿದರು.

ಮುಳಬಾಗಿಲು, ಶ್ರೀನಿವಾಸಪುರ ‌ ಲಸಿಕೆ ಹಾಕಿಸಿಕೊಂಡಿರುವುದರಲ್ಲಿ ಮೊದಲ ಸ್ಥಾನಗಳಲ್ಲಿದ್ದು, ಕೋಲಾರ, ಬಂಗಾರಪೇಟೆ, ಕೆಜಿಎಫ್‌ಗಳಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನೆಡೆಯಾಗಿದೆ. ಶಿಕ್ಷಕರು ತಮ್ಮಗ್ರಾಮಗಳಲ್ಲಿ ಕನಿಷ್ಠ 50 ಮಂದಿಯ ಪಟ್ಟಿ ಮಾಡಿ ಲಸಿಕೆ ಹಾಕಿಸಲು ಮುಂದೆ ಬಂದರೆ, ಅಲ್ಲಿಯೇ ಬಂದು ಶಿಬಿರ ನಡೆಸಿ ಲಸಿಕೆ ಹಾಕಿಸಲುಸೂಚಿಸುವುದಾಗಿ ಭರವಸೆ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತುಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದರು.

ಬಿಇಒಗಳ ಮೂಲಕ ಲಸಿಕೆ ಅಭಿಯಾನ: ವಿಧಾನ ಪರಿಷತ್‌ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಬಿಇಒಗಳ ಸಭೆ ಕರೆದು ಎಲ್ಲೆಲ್ಲಿ ಲಸಿಕೆಶಿಬಿರ ನಡೆಸಲು ಸಾಧ್ಯ ಎಂಬುದನ್ನು ಪಟ್ಟಿ ಮಾಡಿಶಿಕ್ಷಕರ ಮೂಲಕ ಈ ಕಾರ್ಯ ಯಶಸ್ವಿಗೊಳಿಸಿ, ಲಸಿಕೆಅಭಿಯಾನದಲ್ಲಿ ಕೋಲಾರ ಪ್ರಥಮವಾಗಲು ಶ್ರಮಿಸಿ ಎಂದರು.

ಶಿಕ್ಷಕರು ಸಮುದಾಯಕ್ಕೆ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸುವುದು ಪುಣ್ಯದ ‌ಕೆಲಸ,ಓರ್ವಶಿಕ್ಷಕ ದಿನಕ್ಕೆ ಕನಿಷ್ಠ 10 ಮಂದಿಗೆ ಲಸಿಕೆ ಹಾಕಿಸಿದರೆ, 15ದಿನಕ್ಕೆ ನಮ್ಮ ಗುರಿ ತಲುಪುವುದು ಸಾಧ್ಯ ಎಂದ ಅವರು, ಬುದ್ಧಿ, ಸಮಯ ಬಳಸಿ ಜೀವದಾನದ ಈಮಹತ್ಕಾರ್ಯದಲ್ಲಿ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

ಬಿಇಒ ಕಚೇರಿ ಬಳಿ ಲಸಿಕಾ ಶಿಬಿರ: ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ, ಸರ್ಕಾರಿ, ಖಾಸಗಿ, ಅನುದಾನಿತ ‌ ಶಿಕ್ಷಕರು, ಅವರ ಕುಟುಂಬದವರಿಗೆ ಲಸಿಕೆ ಅಭಿಯಾನ ನಡೆಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಬಿಇಒ ನಾಗರಾಜಗೌಡರಿಗೆ ಅವರು ಸೂಚಿಸಿದರು.

ನೌಕರರರ ‌ ಕುಟುಂಬಕ್ಕೆ ಕೋವಿಡ್‌ ಕೇರ್‌ ಕೇಂದ್ರ: ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ ಬಾಬು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ಆದ್ಯತೆಯ ಮೇರೆಗೆ ಸರ್ಕಾರಿನೌಕರರಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲು ಮನವಿ ಮಾಡಿದ ಅವರು, ಜನರ ಸೇವೆ ಮಾಡುತ್ತಿರುವ ‌ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಸೋಂಕಿಗೆ ತುತ್ತಾದರೆಅವರ ಸೂಕ್ತ ಚಿಕಿತ್ಸೆಗಾಗಿ ಪ್ರತ್ಯೇಕ ಕೇರ್‌ ಸೆಂಟರ್‌ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಶಾಲಾ ಕಾಲೇಜು ವತಿಯಿಂದ ‌ ಸಭೆಯಲ್ಲಿ ಸಹ್ಯಾದ್ರಿ ಉದಯಕುಮಾರ್‌, ಎಸ್‌.ಬಿ. ಮುನಿವೆಂಕಟಪ್ಪ, ಮುನಿಯಪ್ಪ, ಶ್ರೀಕೃಷ್ಣ, ರಾಜೇಶ್‌ ಸಿಂಗ್‌ ಮತ್ತಿತರರು ಭಾಗವಹಿಸಿದ್ದು, ಲಸಿಕೆ ಅಭಿಯಾನಕ್ಕೆ  ಸ‌ಹಕಾರದ ಭರವಸೆ ನೀಡಿದರು. ನೌಕರರ ‌ ಸಂಘದ ಅಧ್ಯಕ್ಷ ಜಿ.ಸುರೇಶ್‌ ಬಾಬು,ಖಜಾಂಚಿ ವಿಜಯ್‌, ರಾಜ್ಯ ಪರಿಷತ್‌ ಸದಸ್ಯ ಗೌತಮ್‌, ಕೆಜಿಎಫ್‌ ಅಧ್ಯಕ್ಷ ‌ ರವಿರೆಡ್ಡಿ, ಪ್ರಾಥಮಿಕ

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್‌, ನೌಕರರ ಸಂಘ, ವೃಂದ ‌ ಸಂಘಗಲ ‌ ಮುಖಂಡರಾದ ಎಸ್‌.ಚೌಡಪ್ಪ, ಟಿ.ಕೆ.ನಟರಾಜ್‌, ರತ್ನಪ್ಪ, ಅಶ್ವತ್ಥನಾರಾಯಣ, ಸುಬ್ರಮಣಿ, ಶ್ರೀನಿವಾಸರೆಡ್ಡಿ, ಪುರುಷೋತ್ತಮ್‌ ,ಅಜಯ್‌, ರವಿ, ಮುರಳಿ ಮೋಹನ್‌, ನಾಗಾನಂದ್‌ ಕೆಂಪರಾಜ್‌, ಚಂದ್ರಪ್ಪ, ಗೋಪಿಕೃಷ್ಣನ್‌, ಮುನಿರಾಮಯ್ಯ, ಕಾಂತರಾಜ್‌, ರಾಜಪ್ಪ, ಅರುಣ್‌ ಕುಮಾರ್‌, ಶಿವಕುಮಾರ್‌, ಮುಕುಂದ, ಶ್ರೀಧರಬಾಬು ಮತ್ತಿತರರಿದ್ದರು.

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.