ಕೊರೊನಾ ನಿಯಮ ಪಾಲಿಸಿ, ವಹಿವಾಟು ನಡೆಸಿ


Team Udayavani, May 9, 2021, 6:31 PM IST

Corona rule policy

ಕೋಲಾರ: ಕೋವಿಡ್‌ ಮಾರ್ಗಸೂಚಿಯಡಿಎಪಿಎಂಸಿ ವಹಿವಾಟು ನಡೆಸುವಂತೆ ತಾಕೀತುಮಾಡಿದ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ,ಮಾರುಕಟ್ಟೆಗೆ ಕೆಲಸಕ್ಕೆ ಬರುವ ಹಮಾಲರಿಗೆ ಪಾಸು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಗೆಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರಅಧಿಕಾರಿಗಳು, ಎಪಿಎಂಸಿ ನಿರ್ದೇಶಕರು, ವ್ಯಾಪಾರಸ್ಥರು, ಹಮಾಲರ ಸಂಘದ ಪದಾಧಿಕಾರಿಗಳೊಂದಿಗೆಸಭೆ ನಡೆಸಿ ಮಾತನಾಡಿದರು.ಕೊರೊನಾ 2ನೇ ಅಲೆಯಿಂದಾಗಿ ಕರ್ಫ್ಯೂಜಾರಿಯಲ್ಲಿದ್ದು, ಬೆಳಗ್ಗೆ 10 ಗಂಟೆಯ ಬಳಿಕ ಓಡಾಟ ನಿಷೇಧಿಸಲಾಗಿದೆ.

ಇದರಿಂದ ಪೊಲೀಸರು ತಪಾಸಣೆನಡೆಸುತ್ತಿದ್ದಾರೆ. ಈ ವೇಳೆ ಮಾರುಕಟ್ಟೆಗೆ ಕೆಲಸಕ್ಕೆಬರುವ ಹಮಾಲರ ಓಡಾಟಕ್ಕೂ ತೊಂದರೆಯಾಗುತ್ತಿದೆ.ಇದು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮಬೀರುವುದರಿಂದ ಹಮಾಲರಿಗೆ ಕೂಡಲೇ ಪಾಸುವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ವರ್ತಕರಸಂಘದಿಂದ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್‌ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಕೆಲಸಕ್ಕೆ ಬರಲು ಹಿಂದೇಟು: ಹಮಾಲರಿಗೆ ರಸ್ತೆಗಳಲ್ಲಿತೊಂದರೆ ಆಗುತ್ತಿರುವುದರಿಂದ ಅನೇಕರು ಕೆಲಸಕ್ಕೆಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಅವರು ಬಾರದಿದ್ದರೆ ಲೋಡಿಂಗ್‌, ಅನ್‌ಲೋಡಿಂಗ್‌ ನಡೆಯುವುದಿಲ್ಲ. ಈಗಾಗಲೇ ಸಂಚಾರಕ್ಕೆ ಅಡಚಣೆಯಾಗುತ್ತಿರುವಹಿನ್ನೆಲೆಯಲ್ಲಿ ಅನೇಕರು 15-20 ದಿನ ರಜೆ ಪಡೆದುಮನೆಯಲ್ಲಿರುವುದಾಗಿಯೂ ಹೇಳಿದ್ದರು.

ಜಿಲ್ಲಾಧಿಕಾರಿ ಸ್ಪಂದನೆ: ಕೊರೊನಾ ಹಿನ್ನೆಲೆಯಲ್ಲಿಮಂಡಿಗಳಿಗೆ ಬರುವುದಕ್ಕೆ ನಮಗೂ ಸಾಕಷ್ಟು ಭಯಕಾಡುತ್ತಿದೆ. ಆದರೂ, ರೈತರ ಹಿತದೃಷ್ಟಿಯಿಂದಬರುತ್ತಿದ್ದೇವೆ. ಈಗಾಗಲೇ 2500ಕ್ಕೂ ಹೆಚ್ಚು ಮಂದಿಹಮಾಲರು ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೊಮೆಟೋ ಸುಗ್ಗಿ ಆರಂಭಗೊಂಡಿದ್ದು, ರಂಜಾನ್‌ ಬಳಿಕ ಮತ್ತಷ್ಟು ಅವಕ ಹೆಚ್ಚಳವಾಗುವಸಾಧ್ಯತೆಯಿರುವುದರಿಂದಾಗಿ ಹಮಾಲರ ಸಂಖ್ಯೆಯೂಹೆಚ್ಚಳವಾಗುತ್ತದೆ. ಆದ್ದರಿಂದ ಹಮಾಲರ ಓಡಾಟಕ್ಕೆತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದುವರ್ತಕರು, ವ್ಯಾಪಾರಸ್ಥರ ಸಂಘದಿಂದ ಮಾಡಿದಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದರು.

ಹಮಾಲರ ಓಡಾಟಕ್ಕೆ ಪಾಸ್‌: ಜಿಲ್ಲಾಧಿಕಾರಿಡಾ.ಆರ್‌.ಸೆಲ್ವಮಣಿ ಪೊಲೀಸ್‌ ಇಲಾಖೆಯವರಿಗೂಸೂಚಿಸಿ, ಅಲ್ಲಿನ ಸಮಸ್ಯೆ ಬಗೆಹರಿಸುವಂತೆತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ವೃತ್ತ ನಿರೀಕ್ಷಕರಂಗಶಾಮಯ್ಯ, ಪಿಎಸ್‌ಐ ಅಣ್ಣಯ್ಯ ಕೆಲಕಾಲ ಸಭೆನಡೆಸಿ ಹಲವು ಸಲಹೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿಗಳು ಆಗಮಿಸಿ ಸಭೆ ನಡೆಸಿ, ರೈತರುಉತ್ತಮವಾಗಿ ಬೆಳೆ ಬೆಳೆದಿದ್ದು, ಮಾರುಕಟ್ಟೆ ವ್ಯವಸ್ಥೆಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ.

ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ದರೂ ಅದನ್ನುಬಗೆಹರಿಸಿಕೊಳ್ಳೋಣ. ಮೊದಲಿಗೆ ಹಮಾಲರಓಡಾಟಕ್ಕೆ ಪಾಸ್‌ ನೀಡುವ ಕೆಲಸ ಎಪಿಎಂಸಿಯವರುಮಾಡಬೇಕು ಎಂದು ಹೇಳಿದರು.

ದುರ್ಬಳಕೆ ಮಾಡಿಕೊಳ್ಳಬೇಡಿ: ಆದರೆ, ಪಾಸ್‌ಗಳುಇದೆ ಎಂದು ಎಪಿಎಂಸಿ-ಮನೆಗೆ ಮಾತ್ರ ಓಡಾಡದೆಬೇರೆ ಕಡೆಗಳಿಗೆ ಓಡಾಟ ಮಾಡಿ ಪೊಲೀಸರಿಗೆ ಸಿಕ್ಕಿತೊಂದರೆಗೆ ಒಳಗಾಗುವುದು ಬೇಡ. ಪಾಸ್‌ಗಳನ್ನುದುರ್ಬಳಕೆ ಮಾಡಿಕೊಳ್ಳದೆ ಮಾರುಕಟ್ಟೆ ಕೆಲಸಕ್ಕೆ ಮಾತ್ರಬಳಸಿಕೊಳ್ಳಬೇಕೆಂದು ಸೂಚಿಸಿದರು.ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶಪ್ಪ, ಎಪಿಎಂಸಿವರ್ತಕ ಪ್ರತಿನಿಧಿ ಸದಸ್ಯ ಎಎನ್‌ಆರ್‌ ದೇವರಾಜ್‌,ಎಪಿಎಂಸಿ ಕಾರ್ಯದರ್ಶಿ ಟಿ.ಎಸ್‌.ರವಿಕುಮಾರ್‌,ವ್ಯಾಪಾರಸ್ಥರ ಸಂಘದ ಕೆ.ಬಿ.ಮಾಜೀದ್‌, ಹಮಾಲಿಯೂನಿಯನ್‌ ಅಧ್ಯಕ್ಷ ಬಾಬು, ಮಂಡಿ ಮಾಲಿಕರಾದಸಿಎಂಆರ್‌ ಶ್ರೀನಾಥ್‌, ಕೆಎನ್‌ಎನ್‌ ಪ್ರಕಾಶ್‌ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.