ಗ್ರಾಮ ಪ್ರಗತಿಯಾದ್ರೆ ದೇಶಾಭಿವೃದ್ಧಿ
Team Udayavani, Oct 18, 2019, 3:47 PM IST
ಕೋಲಾರ: ಗ್ರಾಮ ಪ್ರಗತಿ ಕಂಡರೆ ದೇಶ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಹಲವು ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ತಂಬಿಹಳ್ಳಿ ಗ್ರಾಮದ ಶ್ರೀಸತ್ಯಮ್ಮ ದೇವಾಲಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಗುರುವಾರ ನಡೆದ ಸಾಮೂಹಿಕ ಶ್ರೀಗಣಹೋಮ ಮತ್ತು ನವಗ್ರಹ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯ ಜಂಜಾಟಗಳಲ್ಲಿ ಮನುಷ್ಯರು ಭಕ್ತಿ ಭಾವನೆ ಮರೆಯುತ್ತಿದ್ದಾರೆ. ಹಿಂದಿನ ಕಾಲದ ಧಾರ್ಮಿಕ ಚಟುವಟಿಕೆಗಳು ಈಗ ನಡೆಯುತ್ತಿಲ್ಲ. ಪೂಜೆ ಪುನಸ್ಕಾರಗಳು ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಕಾಣಬಹುದು. ಧರ್ಮಸ್ಥಳದ ಸಂಸ್ಥೆಯು ಗ್ರಾಮಗಳಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ಮಾಡಿಸಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಜೊತೆಗೆ ದೇವರ ಪೂಜೆ ನಡೆಸುವ ಮುಖಾಂತರ ಧಾರ್ಮಿಕ ಶಕ್ತಿ ಹೆಚ್ಚಿಸಿದೆ ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆಯ ನಿರ್ದೇಶಕ ಜೆ.ಚಂದ್ರಶೇಖರ್ ಮಾತನಾಡಿ, ದೇವರನ್ನು ನಾವು ಮಾಡುವ ಪ್ರಾಮಾಣಿಕ ಕಾಯಕದಲ್ಲಿ ಕಾಣಬೇಕು. ಯಾವ ಜಾತಿ ಧರ್ಮ ಮುಖ್ಯವಲ್ಲ, ಮಾನವೀಯತೆಯೇ ಮುಖ್ಯ. ತಂದೆ ತಾಯಿ, ಬಡವ ನಿರ್ಗತಿಕರನ್ನು ಪ್ರೀತಿಸುವುದೇ ಧರ್ಮ ಎಂದು ಹೇಳಿದರು. ಮುಖಂಡ ಮುನಿವೆಂಕಟಪ್ಪ ಮಾತನಾಡಿ, ಪರಂಪರೆ, ಪದ್ಧತಿ ಮರೆಯುತ್ತಿರುವ ಇಂದಿನ ಪೀಳಿಗೆಗೆ ಈ ರೀತಿಯ ಧಾರ್ಮಿಕ ಕಾರ್ಯಗಳು ಅವಶ್ಯಕ ಎಂದರು. ಸೀಸಂದ್ರ ತಾಪಂ ಸದಸ್ಯ ರಮೇಶ್, ಹುತ್ತೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಶಿಕ್ಷಕರಾದ ಮುನಿರಾಜು, ನಾಗರಾಜ್ , ಸಂಸ್ಥೆ ಯೋಜನಾಧಿಕಾರಿ ಚಂದ್ರಶೇಖರ್, ಮೇಲ್ವಿಚಾರಕ ಗುರುರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.