ಕೋವಿಡ್ 19: ಕೆಜಿಎಫ್ನಲ್ಲಿ ಮತ್ತೊಂದು ಬಲಿ
Team Udayavani, Jul 7, 2020, 6:59 AM IST
ಕೋಲಾರ: ಜಿಲ್ಲೆಯಲ್ಲಿ ಕೋವಿಡ್ 19 ಆತಂಕ ಮುಂದುವರಿದಿದ್ದು, ಸೋಮವಾರ ಕೆಜಿಎಫ್ ನಲ್ಲಿ ಒಬ್ಬರು ಮೃತಪಟ್ಟಿದ್ದು, ಈವರೆಗೆ ಮೂವರು ಸಾವನಪ್ಪಿ, 10 ಮಂದಿಯಲ್ಲಿ ಪಾಸಿ ಟೀವ್ ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 184ಕ್ಕೇರಿದ್ದು, 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಾಲೂಕಿನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತೆಯರು, ಮುಳಬಾಗಿಲಿನ 5 ಜನರಲ್ಲಿ, ಕೆಜಿಎಫ್‌ನ ಇಬ್ಬರು ಹಾಗೂ ಬಂಗಾರಪೇಟೆಯ ಒಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಕೋಲಾರ ತಾಲೂಕಿನಲ್ಲಿ 27 ವರ್ಷದ ಆರೋಗ್ಯ ಕಾರ್ಯಕರ್ತೆ, 40 ವರ್ಷದ ಮಹಿಳೆ, ಕೆಜಿಎಫ್‌ನಲ್ಲಿ ಪಿ.18096 ಸಂಪರ್ಕ ದಿಂದ 45 ವರ್ಷದ ಮಹಿಳೆ ಮತ್ತು 33 ವರ್ಷದ ಪುರುಷ, ಬಂಗಾರಪೇಟೆ ತಾಲೂಕಿನ ಪಿ.12007 ಸಂಪರ್ಕದಿಂದ 30 ವರ್ಷದ ಪುರುಷ,
ಮುಳಬಾಗಿಲು ತಾಲೂಕಿನಲ್ಲಿ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿರುವ 46 ವರ್ಷದ ಇಬ್ಬರು ಪುರುಷರು, ಪಿ.18095 ಸಂಪರ್ಕದಿಂದ 22 ಮತ್ತು 26 ವರ್ಷದ ಮಹಿಳೆಯರು, ಇದೇ ಸಂಪರ್ಕದಿಂದ 26 ವರ್ಷದ ಪುರುಷ ಸೋಂಕಿತರಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಸೋಮವಾರ 10 ಮಂದಿ ಸೇರಿದಂತೆ ಈವರೆಗೂ ಒಟ್ಟು 82 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 100 ಆಗಿದೆ. ತುರ್ತು ನಿಗಾ ಘಟಕದಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆ z ಯುತ್ತಿದ್ದಾರೆ. ಸೋಮವಾರ ಒಬ್ಬ ಸೇರಿ ಈವರೆಗೆ ಮೂವರು ಸಾವನ್ನಪ್ಪಿದ್ದಾರೆ. ಕೋಲಾರ ನಗರಸಭೆಯ ಸಕ್ಕಿಂಗ್ ವಾಹನದ ಚಾಲಕನಿಗೂ ಕೋವಿಡ್ 19 ಸೋಂಕು ತಗುಲಿದ್ದು, ನಗರಸಭೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Mahalingpur: ಹೊಸ ಬಸ್ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.