ಕ್ವಾರಂಟೈನ್‌ನಲ್ಲಿದ್ದವರ ಸಂಖ್ಯೆ ಇಳಿಕೆ: ನಿರಾಳ
Team Udayavani, Apr 12, 2020, 3:31 PM IST
ಮುಳಬಾಗಿಲು: ಜಿಲ್ಲೆಯಲ್ಲಿ ಕ್ವಾರೆಂಟೆನ್‌ನಲ್ಲಿ ಇದ್ದ 366 ಮಂದಿಯಲ್ಲಿ 117ಕ್ಕೆ ಇಳಿದು ಕೊರೊನಾ ಸೋಂಕು ರಹಿತ ಜಿಲ್ಲೆಯಾಗಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕೋಲಾರ ಸೇಪ್ ಆಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್ಸಿಲೊರ್ ಆಫ್ ಫೌಂಡೇಷನ್ (ಇಎಸ್‌ಎಸ್‌ಐ-ಎಲ್‌ಒಆರ್) ವತಿಯಿಂದ ಸಿಬ್ಬಂದಿಗೆ ನೀಡಲಾದ ಕೊರೊನಾ ತಡೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಕೆಲವು ಕಡೆ ಸೀಲ್‌ಡೌನ್‌ಗೆ ಮುಂದಾಗಿರುವಾಗ ನಮ್ಮ ಜಿಲ್ಲೆಗೆ ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಕುರಿತು ನಿರ್ಲಕ್ಷ್ಯ ಮಾಡದೆ ಸರ್ಕಾರದ ಆಜ್ಞೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದರು.
ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜನ ಸಾಮಾನ್ಯರು ಸಹ ಈ ಕುರಿತು ಎಚ್ಚರಗೊಳ್ಳಬೇಕಿದೆ. ಸುಖ ಸುಮ್ಮನೆ ಮನೆ ಬಿಟ್ಟು ಹೊರಬಂದು ಕೋವಿಡ್-19 ಸ್ವಾಗತಕ್ಕೆ ಕಾರಣರಾಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಎಸ್ಸಿಲೊರ್ ಫೌಂಡೇಷನ್ ಮುಖ್ಯಸ್ಥ ಕೆ.ವಿ.ಮಹೇಶ್, ವಿಜಯಕುಮಾರ್, ಮಹಂತೇಶ್, ಜಿಪಂ ಮಾಜಿ ಸದಸ್ಯ ಬಿ. ಕೆ.ವೆಂಕಟನಾರಾಯಣ್, ಜಿಲ್ಲಾ ಆರೋ
ಗ್ಯಾಧಿಕಾರಿ ಡಾ.ವಿಜಯ ಕುಮಾರ್, ತಹಶೀಲ್ದಾರ್ ಕೆ.ಎನ್‌ರಾಜಶೇಖರ್, ಇಒ ಎಂ.ಬಾಬು, ಪೌರಾಯುಕ್ತ ಜಿ.ಶ್ರೀನಿ ವಾಸಮೂರ್ತಿ, ತಾಲೂಕು ಆರೋಗ್ಯಾಧಿ
ಕಾರಿ ಡಾ.ವರ್ಣಶ್ರೀ, ಆಡಳಿತ ವೈದ್ಯಾಧಿಕಾರಿ ಡಾ.ವೇಣುಗೋಪಾಲ್, ಆರೋಗ್ಯ ಸಮಿತಿ ಸದಸ್ಯ ನೇತಾಜಿನಗರ ಅಮರ್, ನಗರಸಭೆ, ಆಸ್ಪತ್ರೆ ಸಿಬ್ಬಂದಿ ಇದ್ದರು. ಆರೋಗ್ಯ ಸಿಬ್ಬಂದಿಗೆ ವೈದ್ಯಕೀಯ ಕಿಟ್ ವಿತರಿಸಿದ ಸಚಿವ ನಾಗೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.