ತಾಯಿ, ಮಗುವಿಗೆ ಕೋವಿಡ್ 19 ಸೋಂಕು
Team Udayavani, May 26, 2020, 7:11 AM IST
ಬಂಗಾರಪೇಟೆ: ಕೋವಿಡ್ 19 ಮತ್ತೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೋಮವಾರ ಮತ್ತೆ ವಿಜಯ ನಗರ, ಇಂದಿರಾಶ್ರಯ ವಾರ್ಡ್‌ನ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಎರಡೂ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಚೆನ್ನೈಗೆ ಹಲವು ಬಾರಿ ಓಡಾಟ ನಡೆಸಿದ್ದ ಲಾರಿ ಚಾಲಕನಲ್ಲಿ ಮೂರು ದಿನಗಳ ಹಿಂದೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.
32 ವರ್ಷದ ಈ ಸೋಂಕಿತ ವ್ಯಕ್ತಿ ಚೆನ್ನೈನಿಂದ ನೇರವಾಗಿ ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಚಿಂಚಾಂಡ್ಲಹಳ್ಳಿ ಗ್ರಾಮದ ತನ್ನ ಪತ್ನಿ ತವರು ಮನೆಗೆ ಹೋಗಿದ್ದ. ಅಲ್ಲಿಂದ ಮೂರು ದಿನಗಳ ಹಿಂದೆ ಬಂಗಾರಪೇಟೆಯ ಇಂದಿರಾ ಶ್ರಯದಲ್ಲಿ ವಾಸವಾಗಿದ್ದ. ಈತನಲ್ಲಿ ಕೋವಿಡ್ 19 ದೃಢ ಪಟ್ಟಿದ್ದ ಬೆನ್ನಲ್ಲೆ, 27 ವರ್ಷದ ಈತನ ಪತ್ನಿ ಹಾಗೂ 6 ವರ್ಷದ ಹೆಣ್ಣು ಮಗಳಿಗೂ ಕೋವಿಡ್ 19 ಅಂಟಿಕೊಂಡಿದೆ.
ಪಟ್ಟಣದಲ್ಲಿ ಒಟ್ಟು ಆರು ಕೋವಿಡ್ 19 ಪ್ರಕರಣಗಳು ಇರುವುದರಿಂದ ತಾಲೂಕು ಆಡಳಿತ, ಪುರಸಭೆ, ಅರೋಗ್ಯ ಇಲಾಖೆಯು ಸೋಂಕಿತರು ವಾಸವಿದ್ದಪ್ರದೇಶಗಳನ್ನು ಸೀಲ್‌ಡೌನ್ ಮಾಡಿ, ನಿಷೇಧಾಜ್ಞೆ ಜಾರಿ ಮಾಡಿದೆ. ಜನರು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಕಾರಣ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಅಗತ್ಯ ಸೌಲಭ್ಯಗಳನ್ನು ಮನೆಗಳಿಗೆ ಒದಗಿಸು ತ್ತಿದ್ದಾರೆ.
ಈ ಎರಡು ಸೀಲ್‌ಡೌನ್ ಪ್ರದೇಶಗಳಿಗೆ ತಹ ಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್, ತಾಲೂಕು ಆರೋ ಗ್ಯಾಧಿಕಾರಿ ಡಾ.ವಿಜಯಕುಮಾರಿ, ಸಬ್ ಇನ್ಸ್ ಪೆಕ್ಟರ್ ಆರ್.ಜಗದೀಶರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವಿ. ಶ್ರೀಧರ್, ಆರೋಗ್ಯಾಧಿಕಾರಿ ಗೋವಿಂದರಾಜ್, ಸಿ ಎಒ ವೆಂಕಟೇಶ್, ಕಂದಾಯ ನಿರೀಕ್ಷಕ ಕಾಂತರಾಜ್, ಸಿಬ್ಬಂದಿಯಾದ ಸೋಮಣ್ಣ, ಸಂತೋಷ್, ಬಾಬು, ಹರೀಶ್, ಮಂಜುನಾಥ್ ಮುಂತಾದವರು ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.