ಕೋವಿಡ್-19: ಟೊಮೆಟೋಗಿಲ್ಲ ಬೆಲೆ
ಹೊಲದಲ್ಲೇ ಉಳಿದ ಟೊಮೆಟೋ ಬೆಳೆ; ರೈತರಿಗೆ ಆರ್ಥಿಕ ಸಂಕಷ್ಟ
Team Udayavani, Apr 12, 2020, 3:12 PM IST
ಶ್ರೀನಿವಾಸಪುರ: ಕೋವಿಡ್-19 ಪ್ರಭಾವದಿಂದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಟೊಮೆಟೋಗೆ ಸೂಕ್ತ ಬೆಲೆ ಸಿಗದೆ ತಾಲೂಕಿನ ರೈತರು ಆರ್ಥಿಕ ನಷ್ಟ
ಅನುಭವಿಸಿದ್ದಾರೆ. 3 ರಿಂದ 4ಸಾವಿರ ಬಾಕ್ಸ್ ಟೊಮೆಟೋ ಗಿಡಗಳಲ್ಲಿಯೇ ಬಿಡಲಾಗಿದೆ. ತಾಲೂಕಿನಲ್ಲಿ 10 ರಿಂದ 20 ಸಾವಿರ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗಿದೆ. ಮಳೆ ಇಲ್ಲ, ನದಿನಾಲೆಗಳೂ ಇಲ್ಲ. ಕೊಳವೆ ಬಾವಿಯಲ್ಲಿ ಬರುವ ಅಲ್ಪ ನೀರಿನಲ್ಲಿ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಗೆ ಬರುವ ವೇಳೆಗೆ ಕೂಲಿಯಾಳುಗಳಿಗೆ ಹಂಚಲು ಕೂಲಿ ಹಣ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೋ ಬಾಕ್ಸ್ ಒಂದಕ್ಕೆ 20 ರಿಂದ 40 ರೂ.ಗೆ ಖರೀದಿಯಾಗುತ್ತಿದೆ. ಕೋವಿಡ್-19 ಪ್ರಭಾವದಿಂದ ಖರೀದಿ ಮಾಡುವವರು ಸಹ ಇಲ್ಲದಂತಾಗಿದೆ. ಮತ್ತೂಂದೆಡೆ ಕೂಲಿಯವರು ಸಿಗದೇ, ಕೈಗೆ ಕಾಸು ಬಾರದೇ ಕೈ ಸುಟ್ಟುಕೊಳ್ಳವಂತಾಗಿದೆ. ಬೆಳೆಗಳಿಗೆ ಮಾಡಿದ ಸಾಲ ತೀರಿಸುವುದು ಹೇಗೆಂಬ ಚಿಂತೆಯಾಗಿದೆ. ಮಾರುಕಟ್ಟೆಗೆ ಹಿಂದೆ 20ರಿಂದ 30 ಸಾವಿರ ಬಾಕ್ಸ್ ಟೊಮೆಟೋ ಬರುತ್ತಿತ್ತು. ಈಗ 5 ರಿಂದ 10 ಸಾವಿರ ಬಾಕ್ಸ್ ಟೊಮೆಟೋ ಬರುತ್ತಿದೆ. ತಾಲೂಕಿನಲ್ಲಿ 2 ರಿಂದ 3 ಸಾವಿರ ಮಂದಿ ರೈತರು ಈ ಟೊಮೆಟೋ ಬೆಳೆ ಇಟ್ಟಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಖರೀದಿ ಮಾಡುವವರು ಬರುತ್ತಿಲ್ಲವೆಂಬುದು ಶೆಟ್ಟಿಹಳ್ಳಿಯ ಟೊಮೆಟೋ ಬೆಳೆಗಾರ ಮಂಜುನಾಥರೆಡ್ಡಿ ಅವರ ಅಭಿಪ್ರಾಯವಾಗಿದೆ. ಅದೇ ರೀತಿ ಮಧುರೆ, ಚೆನ್ನೈ, ಸೇಲಂ, ಈರೋಡು ಭಾಗಗಳಿಂದ ಖರೀದಿ ಮಾಡುವ ಗಿರಾಕಿಗಳು ಲಾಕ್ ಡೌನ್ ಪ್ರಭಾವದಿಂದ ಬರುತ್ತಿಲ್ಲ. ಜೊತೆಗೆ ತಮಿಳು ನಾಡಿನಲ್ಲಿ ಈಗ ಸರಿಯಾದ ಬೆಲೆಗೆ ಖರೀದಿ ಮಾಡುತ್ತಿಲ್ಲವೆಂದು ಖರೀದಿದಾರರು ಹೇಳು ತ್ತಾರೆ ಎಂದು ಹಣ್ಣು ತರಕಾರಿ ಹಾಗೂ ಟೊಮೆಟೋ ವರ್ತಕರ ಸಂಘದ ಅಧ್ಯಕ್ಷ ಎಚ್.ರವೀಂದ್ರರೆಡ್ಡಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.