ಭೀತಿಗೊಳ್ಳದೆ ಕೋವಿಡ್ 19 ಯುದ್ಧ ಗೆಲ್ಲಬೇಕು: ಸಚಿವ
Team Udayavani, Jun 29, 2020, 7:42 AM IST
ಕೋಲಾರ: ಕೆಲವು ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿರುವುದರಿಂದ ಆತಂಕಗೊಳ್ಳದೇ ಸೈನಿಕರಂತೆ ಕೋವಿಡ್ 19 ಯುದ್ಧವನ್ನು ಗೆಲ್ಲಬೇಕಿದೆ ಎಂದು ಅಬಕಾರಿ ಹಾಗೂ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಲಹೆ ನೀಡಿದರು.
ನಗರದ ಶಾಶ್ವತ ನೀರಾವರಿ ಹೋರಾಟದ ವೇದಿಕೆಯಲ್ಲಿ ಕರ್ನಾಟಕ ಜನಸೇನಾ ವತಿಯಿಂದ ನಡೆದ ನೀರಾವರಿ ಹೋರಾಟಗಾರರಿಗೆ ಅಭಿನಂದನೆ ಹಾಗೂ ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವೈದ್ಯರ ತಂಡಕ್ಕೆ ಇದೊಂದು ಸವಾಲು, ಯುದ್ಧಕಾಲದಲ್ಲಿ ಸೈನಿಕರು ಹೋರಾಡುವ ರೀತಿ ನೀವು ಕೋವಿಡ್ 19 ವೈರಸ್ ವಿರುದ್ಧ ಹೋರಾಡಿ ಜನರ ಆರೋಗ್ಯವನ್ನು ಕಾಪಾಡಿ.
ನಿಮಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಸರ್ಕಾರದಿಂದ ಮಾಡಿಕೊಡುತ್ತೇವೆ ಎಂದು ನುಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಹೋರಾಟ ಮೂಲಕವೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಸ್ವಾರ್ಥ, ರಾಜಿ ಹಾಗೂ ರಾಜಕೀಯ ರಹಿತವಾಗಿ ಹೋರಾಟ ನಡೆಸುವ ಮೂಲಕ ಗುರಿ ತಲುಪಬಹುದು ಎಂದರು.
ಕುಡಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ. ಮಂಜುನಾಥ್, ನಗರಸಭಾ ಸದಸ್ಯ ಪ್ರವೀಣ್ ಗೌಡ, ಕೂಡಾ ನಿರ್ದೇಶಕ ಅಪ್ಪಿ ನಾರಾಯಣಸ್ವಾಮಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿ.ಕೃಷ್ಣ, ಕುರುಬರಪೇಟೆ ವೆಂಕಟೇಶ್, ದಲಿತ ನಾರಾಯಣಸ್ವಾಮಿ, ಚೇತನ್‌ಬಾಬು, ಪ್ರಕಾಶ್, ಪೆಟ್ರೋಲ್ ಬಂಕ್ ಸತೀಶ್, ಸುಬ್ಬು, ಮಂಜುನಾಥ್, ಯುವರಾಜ್, ಸುಧೀರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.