ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಜಾಗೃತಿ
Team Udayavani, May 7, 2021, 4:29 PM IST
ಕೋಲಾರ: ಮಾರುಕಟ್ಟೆ ಪ್ರಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರೈತರು, ದಲ್ಲಾಳರು, ವ್ಯಾಪಾರಸ್ಥರು, ಹಮಾಲರಿಗೆ ಜಾಗೃತಿ ಮೂಡಿಸಲು ಕೋಲಾರ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಮಂಜುನಾಥ ಸಮಿತಿಸದಸ್ಯರಿಗೆ ತಿಳಿಸಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಬಗ್ಗೆ ಸಮಿತಿ ತುರ್ತು ಸಭೆಯಲ್ಲಿ ಚರ್ಚಿಸಲಾಯಿತು.
ಬೆಳಗ್ಗೆ ಹೊತ್ತು ಸೊಪ್ಪು, ತರಕಾರಿ ವ್ಯಾಪಾರಕ್ಕಾಗಿ ಬರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನುಪರಿಶೀಲಿಸಲಾಯಿತು.
ಸ್ಥಳಾಂತರಕ್ಕೆ ಚಿಂತನೆ: ಮಾರುಕಟ್ಟೆ ಪ್ರಾಂಗಣದವಿಸ್ತೀರ್ಣ ಕೇವಲ 18 ಎಕರೆ ಮಾತ್ರ ಇದ್ದು, ಈಗಟೊಮೊಟೋ ಸುಗ್ಗಿ ಪ್ರಾರಂಭವಾಗಿರುವುದರಿಂದಸಾಮಾ ಜಿಕ ಅಂತರಗೆ ಸಮಸ್ಯೆ ಉಂಟಾಗುವುದನ್ನುಪರಿಶೀಲಿಸಿ ಮಾರುಕಟ್ಟೆಯನ್ನು ಬೇರೆ ಕಡೆಗೆಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು.
ತಾತ್ಕಾಲಿಕ ವ್ಯವಸ್ಥೆಗೆ ಚಿಂತನೆ: ನರಸಾಪುರ ಬಳಿಇರುವ ಕೈಗಾರಿಕಾ ಪ್ರದೇಶದಲ್ಲಿ ಖಾಲಿ ಜಾಗ ಲಭ್ಯವಿದ್ದು, 30 ಎಕರೆ ಜಮೀನನ್ನು ತಾತ್ಕಾಲಿಕ ವ್ಯವಸ್ಥೆಗಾಗಿಅನುಮೋದನೆ ಕೊಡಿಸುವಂತೆ ನಿರ್ದೇಶಕರನ್ನುಕೋರಲು ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳುಹೊಳಲಿ ಬಳಿ 50 ಎಕರೆ ಜಮೀನಿದ್ದು, ಅಲ್ಲಿಗೆಟೊಮೆಟೋ ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಬಗ್ಗೆ ಮೌಖೀಕವಾಗಿ ತಿಳಿಸಿರುವುದನ್ನುಚರ್ಚಿಸಲಾಯಿತು.
ಅಭಿಪ್ರಾಯ ಸಂಗ್ರಹ: ಟೊಮೆಟೋ ವಹಿವಾಟನ್ನುಎರಡು ಕಡೆ ನಡೆಸಿದಲ್ಲಿ ಧಾರಣೆಯಲ್ಲಿ ವ್ಯತ್ಯಾಸವಾಗುವುದರಿಂದ ಪ್ರಾಂಗಣದಲ್ಲಿ ಸ್ಥಳಾವಕಾಶ ಸಾಕಾಗದೆ,ಕೆಲವರು ಪ್ರಾಂಗಣದ ಹೊರಗಡೆಯೂ ಟೊಮೆಟೋಇಳಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದಟೊಮೆಟೋ ದಲ್ಲಾಳರ ಸಂಘದ ಅಭಿಪ್ರಾಯಪಡೆದು ಕ್ರಮಕೈಗೊಳ್ಳಲು ಒಪ್ಪಲಾಯಿತು.
ಬೇಕಾದಷ್ಟೇ ತರಿಸಿಕೊಳ್ಳಿ: ಅಲ್ಲಿವರೆಗೂ ತಕ್ಷಣಕ್ಕೆ ಇಷ್ಟುದೊಡ್ಡ ಮಟ್ಟದ ವ್ಯಾಪಾರ ವಹಿವಾಟನ್ನು ತಾತ್ಕಾಲಿಕವಾಗಿ ಬೇರೆಕಡೆಗೆ ಸ್ಥಳಾಂತರಿಸಿ ವ್ಯವಸ್ಥೆಗೊಳಿಸುವುದುಸಾಧ್ಯವಾಗುವುದಿಲ್ಲವೆಂದು ಮಳೆಗಾಲ ಇರುವುದರಿಂದ ಟ್ರಕ್ಕುಗಳ ಓಡಾಟಕ್ಕೆ ತೊಂದರೆ ಆಗುತ್ತದೆ. ಆದಕಾರಣ ಮಾರುಕಟ್ಟೆ ಪ್ರಾಂಗಣದ ಒಳಗೆ ವ್ಯವಹರಿಸುವದಲ್ಲಾಳಿ ಮಂಡಿಯವರು ಅವರಿಗೆ ಇರುವ ಸ್ಥಳಾವಕಾಶದಲ್ಲಿ ಮಾತ್ರ ರೈತರಿಂದ ಟೊಮೆಟೋ ತರಿಸಿಕೊಳ್ಳಬೇಕು, ಹೆಚ್ಚುವರಿ ಟೊಮೆಟೋ ಬರುವ ನಿರೀಕ್ಷೆಇದ್ದಲ್ಲಿ ಅದಕ್ಕೆ ಸೂಕ್ತ ಸ್ಥಳಾವಕಾಶ ವ್ಯವಸ್ಥೆಯನ್ನುಮಂಡಿ ಯವರೇ ಮಾಡಿಕೊಳ್ಳಬೇಕೆಂದು ಸೂಚಿಸಲಾಯಿತು.
ಹೊರ ರಾಜ್ಯದಿಂದ ಬರುವ ವ್ಯಾಪಾರಸ್ಥರು,ಹಮಾ ಲರು ಕಡ್ಡಾಯವಾಗಿ ಕೋವಿಡ್ ಟೆಸ್ಟ್, ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು. ಇದನ್ನು ದಲ್ಲಾಳಿಮಂಡಿ ಯ ವರು ಖಾತರಿಪಡಿಸಿಕೊಳ್ಳಲುಸೂಚಿಸಲಾಯಿತು.ಸಮಿತಿ ಉಪಾಧ್ಯಕ್ಷ ಎಲ್.ವೆಂಕಟೇಶಪ್ಪ, ಮಾಜಿಅಧ್ಯಕ್ಷ ಟಮಕ ಬಿ.ವೆಂಕಟೇಶಪ್ಪ, ಸದಸ್ಯರಾದ ಸಿ.ಎಂ.ಮಂಜುನಾಥ, ಸಿ.ಎನ್.ರವಿಕುಮಾರ್, ಎ.ಎನ್.ಆರ್.ದೇವರಾಜ್, ನಾರಾಯಣಸ್ವಾಮಿ, ಕೆ.ರವಿಶಂಕರ್, ಭಾಗ್ಯಮ್ಮ, ಆರ್.ಚಂದ್ರೇಗೌಡ, ಎಸ್.ವಿ.ವೆಂಕಟಾಚಲಪತಿ, ಸಹಾಯಕ ನಿರ್ದೇಶಕರು, ಸಮಿತಿಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಉಪಸ್ಥಿತರಿದ್ದರು.
ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.