ಶ್ರೀನಿವಾಸಪುರದಲ್ಲಿ ಆಕ್ಸಿಜನ್ ಘಟಕ, ಕೋವಿಡ್ ಕೇಂದ್ರ
Team Udayavani, May 29, 2021, 6:55 PM IST
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲೂ ಕೊರೊನಾ ಸೋಂಕು ಹರಡಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸೋಂಕಿತರಸಂಖ್ಯೆ ಹೆಚ್ಚಿದೆ. ಚಿಲೇಪಲ್ಲಿ ಗ್ರಾಮದಲ್ಲಿ ಒಂದೇ ದಿನ 28 ಮಂದಿಗೆ ಸೋಂಕು ದೃಢಪಟ್ಟಿದೆ. ಕೆಲವು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕ್ಷೇತ್ರದಶಾಸಕ, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಾರದಿಂದ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಗನಿಬಂಡೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಚಾಲನೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಆಕ್ಸಿಜನ್ ಘಟಕ ನಿರ್ಮಾಣಕ್ಕೂ ಮುಂದಾಗಿದ್ದು, ಇವೆಲ್ಲದರ ಕುರಿತುಉದಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆಏನು ಮಾಡುತ್ತಿದ್ದೀರಿ?
ಶ್ರೀನಿವಾಸಪುರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂಕೋವಿಡ್ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಾಲಯವನ್ನು ಇನ್ನು 15ದಿನದೊಳಗೆ ನಿರ್ಮಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಜಿಲ್ಲೆಯಲ್ಲಿ ಮೂರು ಕಡೆ ಮಾತ್ರ ಪ್ರಯೋಗಾಲಯ ಮಾಡಲುಅವಕಾಶಗಳಿದ್ದು, ಇದರಲ್ಲಿ ಶ್ರೀನಿವಾಸಪುರವೂ ಒಂದಾಗಿದೆ.ಪ್ರಯೋಗಾಲಯಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು,ಪರಿಕರಗಳನ್ನು ಮೂರು ನಾಲ್ಕು ದಿನದಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಇನ್ನೊಂದು ವಾರದಲ್ಲಿ ತಾಲೂಕಿನ ಸರ್ಕಾರಿಆಸ್ಪತ್ರೆಯ ಅವರಣದಲ್ಲಿ ಟೆಸ್ಟಿಂಗ್‌ಲ್ಯಾಬ್ ಸ್ಥಾಪಿಸಲಾಗುವುದುಎಂದರು.
ಆಮ್ಲಜನಕ ಕೊರತೆಯನ್ನು ಹೇಗೆ ನೀಗುತ್ತೀರಿ?
ಆಕ್ಸಿಜನ್ ಪ್ಲಾಂಟ್ ನಿರ್ಮಿಸುವ ಮೂಲಕ ಸರ್ಕಾರಿಆಸ್ಪತ್ರೆಯನ್ನು 60 ಬೆಡ್‌ಗಳ ಸ್ವಾವಲಂಬಿ ಆಸ್ಪತ್ರೆಯಾಗಲಿದೆ. ಇದಕ್ಕೆಅಗತ್ಯವಾದ ಎಲ್ಲಾ ಕ್ರಮ ಕೈಗೊಂಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆಸಲ್ಲಿಸುತ್ತೇನೆ. 30 ಜನಕ್ಕೆ ಆಕ್ಸಿಜನ್ ಸೇರಿದಂತೆ ಇತರೆ ಎಲ್ಲಾಸೌಲಭ್ಯಗಳಿಗೆ ಸರ್ಕಾರದ ವ್ಯವಸ್ಥೆಗಳ ಜತೆಗೆ ನಾವು ಕೈಜೋಡಿಸಲುಲ್ಯಾಬ್, ಆಕ್ಸಿಜನ್ ಪ್ಲಾಂಟ್‌ಗೆ 75 ಲಕ್ಷ ರೂ. ವೆಚ್ಚವನ್ನುಭರಿಸಬೇಕಾಗಿದೆ. ಸಂಸದರು 15 ಲಕ್ಷ ರೂ. ಶಾಸಕರನಿಧಿಯಿಂದ 10 ಲಕ್ಷ ರೂ., ವಿಧಾನ ಪರಿಷತ್ ಸದಸ್ಯನಸೀರ್ ಆಹಮದ್ ಹಾಗೂ ಕೋಚಿಮುಲ್ ಅಧ್ಯಕ್ಷನಂಜೇಗೌಡ, ಮಾಜಿ ಶಾಸಕ ಕೊತ್ತೂರುಮಂಜುನಾಥ್ ಸೇರಿದಂತೆ ಇನ್ನು ಅನೇಕರ ನೆರವುಪಡೆಯಲಾಗುತ್ತಿದೆ.
ಬೆಡ್ ಕೊರತೆ ಹೇಗೆ ಬಗೆ ಹರಿಸಿದ್ದೀರಿ?
ಈಗಾಗಲೇ ಕ್ಷೇತ್ರದ ಖಾಸಗಿ ಕಲ್ಯಾಣ ಮಂದಿರದಲ್ಲಿ 30 ಬೆಡ್‌ಹಾಗೂ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ 30 ಬೆಡ್‌ಅಳವಡಿಸಿ ಚಿಕಿತ್ಸೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇವು ಶೀಘ್ರವೇ ಕೊರೊನಾ ಚಿಕಿತ್ಸೆಗೆ ಸಜ್ಜಾಗಲಿವೆ. ಕೋವಿಡ್ ಕೇರ್ ಕೇಂದ್ರಗಳನ್ನುಅಗತ್ಯವಿರುವೆಡೆ ಆರಂಭಿಸಲಾಗಿದೆ. ಪ್ರಸ್ತುತ ಶ್ರೀನಿವಾಪುರ ಪಟ್ಟಣದಸರ್ಕಾರಿ ಆಸ್ಪತ್ರೆಯಲ್ಲಿನ 30 ಬೆಡ್ ಭರ್ತಿಯಾಗಿವೆ. ಎಲ್ಲರಿಗೂಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾಲ್ಕು ವೆಂಟಿಲೇಟರ್‌ಗಳು ಕೆಲಸನಿರ್ವಹಿಸುತ್ತಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣ ವಿಚಾರ ಜನತೆಗೆ ಏನು ಸಲಹೆ ನೀಡುತ್ತೀರಿ?
ಶ್ರೀನಿವಾಸಪುರ ಕ್ಷೇತ್ರ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾಗುತ್ತಿಲ್ಲ. ಸೋಂಕಿನ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿಕೊಳ್ಳುವುದು ಸೂಕ್ತ. ಒಂದುದಿನಕ್ಕೆ 2 ಸಾವಿರ ಮಂದಿ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ. ಕೋವಿಡ್ ಟೆಸ್ಟ್ ಮಾಡಿದ ನಂತರ 3 ದಿನಕ್ಕೆ ಫಲಿತಾಂಶನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ 24 ತಾಸುಗಳಲ್ಲಿ ನೀಡಲುಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕೇತ್ರದ ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳೇನು?
ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಎಲ್ಲಾ ಪಂಚಾಯ್ತಿಗಳಲ್ಲಿಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಚಿಕಿತ್ಸೆ ನೀಡುವ ಮೂಲಕ ಕೊರೊನಾದಿಂದ ಮುಕ್ತಗೊಳಿಸಿ ಆರೋಗ್ಯ ಕರ್ನಾಟಕವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.ಕೋವಿಡ್ ಸೆಂಟರ್ ಮಾಡುವ ಮೂಲಕ ಓರ್ವ ವೈದ್ಯ ಹಾಗೂಸಿಬ್ಬಂದಿ ನೇಮಿಸಲಾಗುವುದು, ರೋಗಿಗಳಿಗೆ ಉತ್ತಮಗುಣಮಟ್ಟದ ಆಹಾರ ಪೂರೈಕೆಗೆ ಅವಶ್ಯಕವಾದ ಹಣ್ಣು, ತರಕಾರಿ,ಮೊಟ್ಟೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಾಗುವುದು.
ಔಷಧಗಳನ್ನುಬೆಂಗಳೂರಿನ ಮೆಡಿಕಲ್ ಕಾಲೇಜಿನಿಂದ ಉಚಿತವಾಗಿ ಪೂರೈಸುವಭರವಸೆ ದೊರೆಕಿದೆ. ಸೋಂಕಿತರಿಗೆ ಟೆಲಿಕಾಸ್ಟ್ ಮೂಲಕಸಲಹೆಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿ ಆತಂಕವನ್ನು ದೂರಮಾಡಲಾಗುವುದು. ಖಾಸಗಿ ಕಲ್ಯಾಣ ಮಂಟಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನುಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಜಾತಿಧರ್ಮ ಭೇದಭಾವಗಳಿಲ್ಲ. ನಾವು ಇದನ್ನು ಯಾವುದೇ ರೀತಿರಾಜಕೀಯಕ್ಕಾಗಿ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿ ನನ್ನಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ.
ನಾಗರಾಜು ಕೆ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.