![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 6, 2021, 5:03 PM IST
ಕೋಲಾರ: ಕೊರೊನಾ 2ನೇ ಅಲೆ ತಡೆಗಟ್ಟಲು ಪಂಚಾಯ್ತಿ ಮಟ್ಟದಲ್ಲಿ ಪ್ರಥಮ ಆದ್ಯತೆ ನೀಡಬೇಕೆಂದು ಪಿಡಿಒಗಳಿಗೆ ಶಾಸಕ ಕೆ.ಶ್ರೀನಿವಾಸಗೌಡ ಸೂಚಿಸಿದರು.ನಗರದ ನಗರಸಭೆ ಕಾರ್ಯಾಲಯದಲ್ಲಿತಾಲೂಕಿನ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ರಸ್ತೆ,ಚರಂಡಿ ಕಾಮಗಾರಿ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳುವಂತೆ ಎಂದು ಹೇಳಿದರು.
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆಜಾಗೃತಿ ಮೂಡಿಸಬೇಕು, ಕೊರೊನಾ ಮುಕ್ತಜಿಲ್ಲೆಯಾಗಿಸಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಆದ್ಯತೆಮೇಲೆ ಕೆಲಸ ಮಾಡಬೇಕು. ಈ ಸೋಂಕು ಪಟ್ಟಣಕ್ಕೆಮಾತ್ರ ಸೀಮಿತವಾಗದೇ ಹಳ್ಳಿಗಳಿಗೂ ವೇಗವಾಗಿವ್ಯಾಪಿಸುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆಎಂದು ಹೇಳಿದರು.
ಮನವೊಲಿಕೆ ಮಾಡಿ: ಕೊರೊನಾ ನಿಯಂತ್ರಣಕ್ಕೆಪ್ರತಿಯೊಬ್ಬರ ಸಹಕಾರ ಮುಖ್ಯ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು. ಸರ್ಕಾರದನೀತಿನಿಯಮ ಕಡ್ಡಾಯವಾಗಿ ಪಾಲಿಸಬೇಕು. ಅಗತ್ಯಬಿದ್ದರೆ ಅಷ್ಟೇ ಹೊರಗಡೆ ಹೋಗಬೇಕು, ಇಲ್ಲಮನೆಯಲ್ಲಿ ಇರಬೇಕು, ಕೊರೊನಾ ಲಸಿಕೆ ಬಗ್ಗೆಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಜೊತೆಗೆಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕೆಂದುಎಂದು ಮನವಿ ಮಾಡಿದರು.
ಕೊರೊನಾ ಪ್ರಕರಣ ಹೆಚ್ಚಾಗಿರುವ ಹಳ್ಳಿಗಳಲ್ಲಿಹೊರಗಡೆ ಎಲ್ಲೂ ಓಡಾಟದ ರೀತಿಯಲ್ಲಿಸಾರ್ವಜನಿಕರನ್ನು ನಿಬಂìಧಿಸಬೇಕು, ಲಾಕ್‌ಡೌನ್‌ಮತ್ತು ಸಿಲ್ ಡೌನ್ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನರೀತಿಯಲ್ಲಿ ನಿಗಾವಹಿಸಬೇಕು ಎಂದು ಸೂಚಿಸಿದರು.ತಾಪಂ ಇಒ ಬಾಬು ಮಾತನಾಡಿ, ತಾಪಂವ್ಯಾಪ್ತಿಯ 36 ಗ್ರಾಪಂನಲ್ಲಿ ಕೊರೊನಾ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚನೆ ಮಾಡಿ ಪ್ರತಿ ಹಳ್ಳಿಗಳಲ್ಲಿಕೊರೊನಾ ತಡೆಗಟ್ಟಲು ಜಾಗೃತಿ ಮೂಡಿಸುವ ಜೊತೆಗೆತುರ್ತು ಕ್ರಮ ಕೈಗೊಳ್ಳಲಾಗಿದೆ.
ಹಳ್ಳಿಗಳಲ್ಲಿ ಔಷಧಸಿಂಪಡಿಸುವುದು ಸೋಂಕಿತರು ಮೃತಪಟ್ಟರೆಅಂತ್ಯಕ್ರಿಯೆ ಮಾಡಲು ಪಂಚಾಯ್ತಿಯಿಂದ ವಿಶೇಷವ್ಯವಸ್ಥೆ ಒದಗಿಸಲಾಗಿದೆ ಎಂದು ವಿವರಿಸಿದರು.ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ,ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಎನ್.ಎಸ್.ಪ್ರವೀಣ್, ನಗರಸಭೆ ಆಯುಕ್ತ ಶ್ರೀಕಾಂತ್, ಪಿಎಸ್‌ಐಅಣ್ಣಯ್ಯ ಭಾಗವಹಿಸಿದ್ದರು.
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.