ಆತಂಕದ ಮಧ್ಯೆ ಚಿತ್ರಮಂದಿರ ಆರಂಭಕ್ಕೆ ಸಿದ್ಧತೆ

ಅನುಮತಿ ಇದ್ದರೂ ಮಾಲೀಕರ ಹಿಂದೇಟು ,ಏಳು ತಿಂಗಳ ವಿದ್ಯುತ್‌ ಬಿಲ್‌ ಮನ್ನಾಗೆ ಬೇಡಿಕೆ

Team Udayavani, Oct 13, 2020, 3:18 PM IST

ಆತಂಕದ ಮಧ್ಯೆ ಚಿತ್ರಮಂದಿರ ಆರಂಭಕ್ಕೆ ಸಿದ್ಧತೆ

ಜಿಲ್ಲಾ ಕೇಂದ್ರದ ಭವಾನಿ ಚಿತ್ರಮಂದಿರವನ್ನು ಆಯುಧ ಪೂಜೆ ನಂತರ ಆರಂಭಿಸಲು ಸಜ್ಜುಗೊಳಿಸಲಾಗುತ್ತಿದೆ.

ಕೋಲಾರ: ದೇಶಾದ್ಯಂತ ಚಲನ ಚಿತ್ರಮಂದಿರಗಳನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದರೂ, ಕೋಲಾರ ಜಿಲ್ಲೆಯ ಚಿತ್ರಮಂದಿರ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಕೋಲಾರ ಜಿಲ್ಲೆ ಗಡಿಯಲ್ಲಿದ್ದು, ಕನ್ನಡ ಸೇರಿದಂತೆ ತೆಲುಗು ಚಿತ್ರಗಳಿಗೆ ಭಾರೀ ಸಂಖ್ಯೆಯ ಚಿತ್ರಪ್ರೇಮಿಗಳಿದ್ದಾರೆ. ಕೋಲಾರದಂತ ನಗರದಲ್ಲಿ ಸಿನಿಮಾ ನೋಡುವುದೇ ಬಡವರು ಮತ್ತು ಮಧ್ಯಮ ವರ್ಗದವರ ಪ್ರಮುಖ ಮನರಂಜನೆಯಾಗಿದೆ. ಇಂತಿಪ್ಪ ಜಿಲ್ಲೆಯಲ್ಲಿಯೂ ಚಿತ್ರಮಂದಿರಗಳನ್ನು ಆರಂಭಿಸಲು ಮಾಲೀಕರು ಮೀನಾಮೇಷ ಎಣಿಸಲು ಸಾಕಷ್ಟುಕಾರಣಗಳೂ ಇವೆ.

ಕಾರಣಗಳೇನು?: ಚಿತ್ರಮಂದಿರಗಳನ್ನು ತಕ್ಷಣಕ್ಕೆ ಸಜ್ಜುಗೊಳಿಸಲು ಕನಿಷ್ಠವೆಂದರೂ ಮೂವತ್ತರಿಂದ ಐವತ್ತು ಸಾವಿರ ರೂ.ಅಗತ್ಯವಿದೆ. ಜೊತೆಗೆ ಕೆಲಸದಿಂದ ದೂರವಿರುವ ಕಾರ್ಮಿಕರನ್ನು ಮತ್ತೆ ಕರೆತರಬೇಕಾಗುತ್ತದೆ. ಇವರ ಸಂಬಳ, ಮುಂಗಡ ಇತ್ಯಾದಿ ವೆಚ್ಚವೂ ನೀಡಬೇಕಾಗುತ್ತದೆ. ಜೊತೆಗೆ ಲಾಕ್‌ಡೌನ್‌ ಅವಧಿಯ ಏಳು ತಿಂಗಳ ಮಿನಿಮಮ್‌ ವಿದ್ಯುತ್‌ ಬಿಲ್‌ ಹೊರೆಯಾಗಿ ಬೆಳೆದುಬಿಟ್ಟಿದೆ. ಇದು ಪಾವತಿಯಾಗದೆ ಚಿತ್ರ ಪ್ರದರ್ಶನ ಅಸಾಧ್ಯವೆನಿಸಿದೆ.

ಯುಎಫ್ಒ ಟ್ಯೂಬ್‌ಗ ನಿಗದಿತ ದರವನ್ನು ಪಾವತಿಸಬೇಕಾಗುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿ ಚಿತ್ರಮಂದಿರ ಸಜ್ಜುಗೊಳಿಸಿದರೂ ಚಿತ್ರಮಂದಿರಗಳಿಗೆ ಜನ ಬರುತ್ತಾರೆಂಬ ನಂಬಿಕೆ ಉಳಿದಿಲ್ಲ. ಜನರನ್ನು ಚಿತ್ರಮಂದಿರಗಳಿಗೆ ಆಕರ್ಷಿಸಲುಸರ್ಕಾರ ಚಿತ್ರಮಂದಿರ ಮಾಲೀಕರೊಂದಿಗೆ ನೆರವಾಗಲೇಬೇಕೆಂಬ ಬೇಡಿಕೆಕೇಳಿ ಬರುತ್ತಿದೆ.

ವಿದ್ಯುತ್‌ ಬಿಲ್‌ಹೊರೆ!: ಕೋವಿಡ್ ದಿಂದಾಗಿ ಚಿತ್ರ ಮಂದಿರ ಗಳನ್ನು ಏಳು ತಿಂಗಳಿನಿಂದಲೂ ಮುಚ್ಚಲಾಗಿದೆ. ಆದರೂ, ಚಿತ್ರಮಂದಿರಗಳಿಗೆ ಬೆಸ್ಕಾಂ ಕನಿಷ್ಠ ದರದ ಬಿಲ್‌ ಜನರೇಟ್‌ ಮಾಡುತ್ತಲೇ ಇರುವುದಿಂದ ಪ್ರತಿ ಚಿತ್ರಮಂದಿರವೂ ಕನಿಷ್ಠ 40 ರಿಂದ60 ಸಾವಿರ ರೂ.ಬಿಲ್‌ ಬಾಕಿ ಉಳಿಸಿಕೊಂಡಿವೆ. ಇದೀಗ ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಬೆಸ್ಕಾಂ ಬಾಕಿ ಬಿಲ್‌ ಪಾವತಿ ನೆಪದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರೆಸಮಸ್ಯೆ ಎದುರಾಗಬಹುದು ಎಂಬ ಆತಂಕವೂ ಮಾಲೀಕರಲ್ಲಿದೆ. ಕೆಲವೇ ಚಿತ್ರಮಂದಿರಗಳ ಮಾಲೀಕರು ಮಾತ್ರವೇ ಕನಿಷ್ಠ ಬಿಲ್‌ ಪಾವತಿಸಿದ್ದು, ಬಹುತೇಕ ಚಿತ್ರಮಂದಿರಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಇದೆ. ಈ ಬಾಕಿ ಬಿಲ್‌ ಅನ್ನು ಸರ್ಕಾರ ಮನ್ನಾಮಾಡಿದರೆ ಚಿತ್ರ ಪ್ರದರ್ಶನ ಸುಲಭವಾಗುತ್ತದೆ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕರು.

ಯುಎಫ್ಒ ಟ್ಯೂಬ್‌ ಬಾಡಿಗೆ: ಚಿತ್ರಮಂದಿರಗಳು ಈಗ ಪ್ರೊಜೆಕ್ಟರ್‌ ಬದಲಿಗೆ ಯುಎಫ್ಒ ಟ್ಯೂಬ್‌ ಮೂಲಕ ಚಿತ್ರಗಳನ್ನು ಪ್ರದರ್ಶಿಸುತ್ತಿವೆ. ಹೊಸ ಚಿತ್ರಗಳಿಗೆ 9 ರಿಂದ 12ಸಾವಿರ ರೂ. ಹಾಗೂ ಹಳೆಯ ಚಿತ್ರಗಳಿಗಾದರೆ 3 ರಿಂದ 4ಸಾವಿರ ರೂ.ಯುಎಫ್ಒ ಟ್ಯೂಬ್‌ದರವಾಗಿ ನೀಡಬೇಕಾಗುತ್ತದೆ. ಹೊಸ ಚಿತ್ರಗಳಿಗಾದರೆ ನಿರ್ಮಾಪಕರೇ ಈ ದರವನ್ನು ಭರಿಸುತ್ತಾರೆ. ಈಗ ಚಿತ್ರಗಳನ್ನು ಹಳೆಯ ಚಿತ್ರಗಳ ಮೂಲಕವೇ ಪುನರಾರಂಭಿಸ ಬೇಕಾಗಿರುವುದರಿಂದ ನಿರ್ಮಾಪಕರು ಕಡಿಮೆ ದರದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದರೂಯುಎಫ್ಒ ಬಾಡಿಗೆ ನೀಡಲೇಬೇಕಾಗುತ್ತದೆ. ಸರ್ಕಾರ ಕನಿಷ್ಠ ಒಂದು ತಿಂಗಳಾದರೂ ಯುಎಫ್ಒ ಟ್ಯೂಬ್‌ ಬಾಡಿಕೆಯನ್ನು ಪ್ರೋತ್ಸಾಹದಾಯಕವಾಗಿ ಉಚಿತವಾಗಿ ನೀಡಬೇಕಾಗುತ್ತದೆ.

ಕಾರ್ಮಿಕರ ಸೇವೆ: ಏಳು ತಿಂಗಳ ಅವಧಿಯಲ್ಲಿ ಪ್ರತಿ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಐದರಿಂದ ಹತ್ತು ಮಂದಿ ಸಿಬ್ಬಂದಿ ಬೇರೆ ಕೆಲಸಗಳನ್ನೇ ನೋಡಿಕೊಂಡಿದ್ದಾರೆ. ಕೆಲವು ಚಿತ್ರಮಂದಿರ ಮಾಲೀಕರು ಇವರನ್ನು ಹಿಡಿದಿಟ್ಟುಕೊಳ್ಳಲು ಅರ್ಧ ಸಂಬಳ ನೀಡಿದ್ದಾರೆ. ಹೀಗೆ ಬೇರೆ ಕೆಲಸಗಳಲ್ಲಿ ನಿರತವಾಗಿರುವ ಚಿತ್ರಪ್ರದರ್ಶನ ಕೌಶಲ್ಯಹೊಂದಿರುವ ಕಾರ್ಮಿಕರನ್ನು ಸಂಘಟಿಸುವ ಜವಾಬ್ದಾರಿಯೂ ಚಿತ್ರ ಪ್ರದರ್ಶಕರ ಮೇಲೆ ಬೀಳುವಂತಾಗಿದೆ.

ಆದಾಯ ಕಡಿತ: ಕೋಲಾರ ಜಿಲ್ಲೆಯಲ್ಲಿ ಚಿತ್ರಮಂದಿರಗಳಿಂದ ವ್ಯಾಟ್‌ ತೆರಿಗೆ ಪದ್ಧತಿಯಲ್ಲಿ ಕನ್ನಡೇತರ ಚಿತ್ರಗಳಿಂದ ವಾರ್ಷಿಕ 25 ರಿಂದ30 ಲಕ್ಷ ರೂ.ತೆರಿಗೆ ಬೊಕ್ಕಸಕ್ಕೆ ಆದಾಯವಾಗುತ್ತಿತ್ತು. ಪ್ರತಿ ಟಿಕೆಟ್‌ ದರದ ಶೇ.30 ಸರ್ಕಾರದ ಬೊಕ್ಕಸ ಸೇರುತ್ತಿತ್ತು. ಆದರೆ, ಜಿಎಸ್‌ಟಿ ತೆರಿಗೆ ಪದ್ಧತಿ ಬಂದ ನಂತರ 100 ರೂ. ಒಳಗಿನ ಟಿಕೆಟ್‌ ದರದ ಶೇ.10 ಮಾತ್ರ ತೆರಿಗೆಯಾಗಿ ಚಿತ್ರ ಪ್ರದರ್ಶಕರು ಪಾವತಿಸುತ್ತಿದ್ದು, 100 ರೂ.ಗಿಂತಲೂ ಹೆಚ್ಚಿನ ಮೌಲ್ಯದ ಟಿಕೆಟ್‌ಗೆ ಶೇ.20 ರಷ್ಟು ತೆರಿಗೆಪಾವತಿಸಬೇಕಾಗಿದೆ. ಇದರಿಂದ ಸಹಜವಾಗಿಯೇ ಮನರಂಜನಾ ತೆರಿಗೆ ಜಿಎಸ್‌ಟಿ ಅವಧಿಯಲ್ಲಿ ಕಡಿತಗೊಂಡಂತಾಗಿದೆ.

ಜಿಲ್ಲೆಯಲ್ಲಿ 15 ಚಿತ್ರಮಂದಿರ : ಕೋಲಾರ ಜಿಲ್ಲೆಯಲ್ಲಿ ಒಟ್ಟು15 ಚಿತ್ರಮಂದಿರಗಳಿವೆ. ಮಲ್ಟಿಫ್ಲೆಕ್ಸ್‌ ಮತ್ತು ಮಾಲ್‌ಗ‌ಳು ಇಲ್ಲ. ಕೋಲಾರದಲ್ಲಿ5, ಮುಳಬಾಗಿಲಿನಲ್ಲಿ4, ಮಾಲೂರಿನಲ್ಲಿ 1, ಶ್ರೀನಿವಾಸಪುರದಲ್ಲಿ1, ಬಂಗಾರಪೇಟೆಯಲ್ಲಿ 2 ಹಾಗೂ ಕೆಜಿಎಫ್ನಲ್ಲಿ2 ಚಿತ್ರಮಂದಿರಗಳಿವೆ. ಸಿನಿಮಾ ಟಿಕೆಟ್‌ ದರಹೆಚ್ಚಳ, ಪೈರಸಿ ಹಾವಳಿ, ಮೊಬೈಲ್‌ನಲ್ಲಿಯೇ ಸಿನಿಮಾನೋಡುವ ಯುವ ಜನಾಂಗ,ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಭೇಟಿ ನೀಡುವ ವಾತಾ ವರಣ ಇಲ್ಲದೇ ಇರುವುದರಿಂದ ಜಿಲ್ಲೆಯ ಹದಿನೈದು ಚಿತ್ರಮಂದಿರಗಳು ತುಂಬಿದ ಗೃಹಗಳ ಸಿನಿಮಾ ಪ್ರದ ರ್ಶನ ಅಪರೂಪವೇ ಆಗಿಬಿಟ್ಟಿದೆ. ಇದೀಗ ಕೋವಿಡ್ ಹಿನ್ನೆಲೆ ಏಳು ತಿಂಗಳ ದೀರ್ಘ‌ ಕಾಲದ ರಜೆಯ ನಂತರ ಬಹುತೇಕ ಸಿನಿ ಪ್ರಿಯರು ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಚಿತ್ರ ವೀಕ್ಷಣೆಯನ್ನು ಅಭ್ಯಾಸ ಮಾಡಿಕೊಂಡಿರು ವುದರಿಂದಚಿತ್ರಮಂದಿರಗಳಿಗೆ ಜನ ಬರುತ್ತಾರೆಯೇ ಎಂಬ ಅನುಮಾನ ಮಾಲೀಕರನ್ನುಕಾಡುತ್ತಿದೆ.

ಅಮಾವಾಸ್ಯೆ ಭೀತಿ : ಸರ್ಕಾರ ನಿಗದಿಪಡಿಸುವ ಅ.15 ರಿಂದಚಿತ್ರ ಮಂದಿರ ಆರಂಭಿಸಲು ಮಾಲೀಕರಿಗೆ ಅಮಾವಾಸ್ಯೆಭೀತಿ ಅಡ್ಡಿಯಾಗಿದೆ. ಅ.16 ಶುಕ್ರವಾರ ಅಮಾವಾಸ್ಯೆ ಇರುವುದಿಂದ ಚಿತ್ರಮಂದಿರಗಳ ಆರಂಭಕ್ಕೆ ಸೂಕ್ತ ಕಾಲವಲ್ಲ ಎಂದು ಮಾಲೀಕರು, ಪ್ರದರ್ಶಕರು ನಂಬುತ್ತಿದಾರೆ. ಇದರಿಂದ ಜಿಲ್ಲಾ ಕೇಂದ್ರದಐದುಚಿತ್ರಮಂದಿರಗಳ ಪೈಕಿಬಸ್‌ ನಿಲ್ದಾಣದಬಳಿ ಇರುವ ನಾರಾಯಣಿಚಿತ್ರಮಂದಿರವನ್ನು ಮಾತ್ರವೇ ಮಾಲೀಕರು ಆರಂಭಿಸಲು ಸಜ್ಜಾಗುತ್ತಿದ್ದಾರೆ. ಉಳಿದಚಿತ್ರಮಂದಿರಗಳು ಜಿಲ್ಲೆಯಲ್ಲಿ ಅ.23 ರಂದು ಆಯುಧ ಪೂಜೆ ನಂತರ ಆರಂಭಿಸಲು ಮಾಲೀಕರು ಯೋಚಿಸುತ್ತಿದ್ದಾರೆ.

ಚಿತ್ರಮಂದಿರ ಮಾಲೀಕರು ಹಾಗೂ ಕಾರ್ಮಿಕರ ಸಮಸ್ಯೆಗಳಕುರಿತಂತೆಅಧಿವೇಶನದಲ್ಲೂ ಮಾತನಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ.ಕಾರ್ಮಿಕರ ಹಿತದೃಷ್ಟಿಯಿಂದ ಚಿತ್ರಮಂದಿರ ಆರಂಭಿಸಲು ಸೂಚನೆ ನೀಡಿದ್ದೇನೆ. ಸರ್ಕಾರದ ಮಾರ್ಗಸೂಚಿಗಳನ್ನುಕಡ್ಡಾಯವಾಗಿ ಪಾಲಿಸಿಯೇ ಶೇ.50 ಟಿಕೆಟ್‌ ಮಾರಾಟ ಮಾಡಿ ಚಿತ್ರಪ್ರದರ್ಶಿಸಲು ನಿರ್ಧರಿಸಿದ್ದೇವೆ. ಆರಂಭದಲ್ಲಿ ಶೇ.50 ರಷ್ಟು ಜನಚಿತ್ರಮಂದಿರಗಳಿಗೆ ಬರುವುದು ಅನುಮಾನವೇ! ಇಂಚರ ಗೋವಿಂದರಾಜು, ವಿಧಾನಪರಿಷತ್‌ಸದಸ್ಯರು, ನಾರಾಯಣಿ ಚಿತ್ರಮಂದಿರ ಮಾಲೀಕರು. ಕೋಲಾರ

ಚಿತ್ರಮಂದಿರ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹವೇ. ಆದರೂ,ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಮಾರ್ಗಸೂಚಿ ಕಡ್ಡಾಯ ಪಾಲನೆಕಷ್ಟವಾಗಬಹುದು. ಜನ ಸಮುದಾಯದ ಆರೋಗ್ಯದ ದೃಷ್ಟಿಯಿಂದ ಇನ್ನು ಕೆಲ ತಿಂಗಳು ಚಿತ್ರ ಪ್ರದರ್ಶನ ಮಂದೂಡಿಕೆ ಒಳ್ಳೆಯದು. ಬಿ.ಸಿ.ರಾಮಪ್ರಸಾದ್‌, ಮುಳಬಾಗಿಲು ವರದರಾಜ ಚಿತ್ರಮಂದಿರ ಮಾಲೀಕರು

 

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.