ಅರಹಳ್ಳಿಯ ವ್ಯಕ್ತಿಗೆ ಕೋವಿಡ್ ಸೋಂಕು
Team Udayavani, Aug 4, 2020, 10:48 AM IST
ಮುಳಬಾಗಿಲು: ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ 39 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮುಡಿಯನೂರು ಗ್ರಾಪಂ ಪಿಡಿಒ ಕೆ.ವೆಂಕಟಾಚಲಪತಿ, ಕರ ವಸೂಲಿಗಾರ ಮಂಜುನಾಥ್, ಡಾ.ಹರಿಕೃಷ್ಣ, ಎಎನ್ಎಂ ವರಲಕ್ಷ್ಮೀ, ಆಶಾ ಕಾರ್ಯಕರ್ತೆ ವೆಂಕಟರತ್ನಮ್ಮ ಸೋಂಕಿತನ ಮನೆಯನ್ನು ಸೀಲ್ಡೌನ್ ಮಾಡಿಸಿ, ಗ್ರಾಮವನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿ ಗ್ರಾಮದಲ್ಲಿ ಕೋವಿಡ್ ಕಡಿವಾಣಕ್ಕೆ ಸೋಂಕು ನಿವಾರಕ ಸಿಂಪಡಿಸಿ, ಜನರು ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿಕೊಟ್ಟರು.
ಇತ್ತೀಚಿಗೆ ಮಂಡಿಕಲ್ ಗ್ರಾಮದ 30 ವರ್ಷದ ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಂತೆ ಸೋಮವಾರ ಆಕೆಯ ಪತಿಗೂ ಸೋಂಕು ದೃಢಪಟ್ಟಿದ್ದು, ಸೋಂಕಿತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ನಂಗಲಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಆಸ್ಪತ್ರೆಯಲ್ಲಿಯೇ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ನಗರದ ಕುರುಬರಪೇಟೆಯ ವ್ಯಕ್ತಿಯೊಬ್ಬರಿಗೂ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಿದೆ. ನಗರಸಭೆ ಸಿಬ್ಬಂದಿ ಸೋಂಕಿತನ ಮನೆಯನ್ನು ಸೀಲ್ಡೌನ್ ಮಾಡಿ, ಸೋಂಕು ನಿವಾರಕಗಳನ್ನು ಸಿಂಪಡಿಸಿದರು. ಇದುವರೆಗೂ ತಾಲೂಕಿನಲ್ಲಿ 173 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 42 ಪ್ರಕರಣ ಗಳು ಸಕ್ರಿಯವಾಗಿವೆ. 128 ಸೋಂಕಿತರು ಗುಣಮುಖ ರಾಗಿ ಮನೆಗೆ ತೆರಳಿದ್ದು ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.