150 ಮಂದಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ
Team Udayavani, Jun 14, 2021, 8:30 PM IST
ಕೆಜಿಎಫ್: ಕೊರೊನಾ ಸೋಂಕಿನಿಂದ ಮೃತಪಟ್ಟ150 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡುವಮೂಲಕ ಆ್ಯಂಬುಲೆನ್ಸ್ ಚಾಲಕ ದಿನೇಶ್ ಮತ್ತುಸಂಗಡಿಗರು ಮಾನವೀಯತೆ ಮೆರೆದಿದ್ದಾರೆ.ಕೋವಿಡ್ ಎರಡನೇ ಅಲೆ ಭೀತಿಯನ್ನುಸೃಷ್ಟಿಸಿತ್ತು. ಕಣ್ಣ ಮುಂದೆಯೇ ನಿನ್ನೆ ಇದ್ದವರು ಇಂದು ಇಲ್ಲ ಎಂಬ ರೀತಿಯಲ್ಲಿ ಸಾವನ್ನಪ್ಪುತ್ತಿದ್ದರು.ಆಸ್ಪತ್ರೆಗೆ ಬಂದರೆ ಸಾವು ಬರುವುದು ಶತಸಿದ್ಧ ಎಂಬಭಾವನೆ ಸೋಂಕಿತರಲ್ಲಿ ಮೂಡಿತ್ತು.
ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ದಿನೇ ದಿನೆಹೆಚ್ಚುತ್ತಿತ್ತು.ಸರ್ಕಾರದ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಸಂಸ್ಕಾರ ನಡೆಸಬೇಕಿತ್ತು. ಕೋವಿಡ್‌ಕೇರ್ ಸೆಂಟರ್‌ನಲ್ಲಿ ಹೋಗಲು ವೈದ್ಯರು ಕೂಡಹಿಂದೇಟು ಹಾಕುತ್ತಿದ್ದರು. ನರ್ಸ್‌ಗಳಿಗೆ ಎಲ್ಲಾಆರೈಕೆಯ ಜವಾಬ್ದಾರಿ ನೀಡುತ್ತಿದ್ದರು.
ಈ ವೇಳೆಸಂದರ್ಭದಲ್ಲಿ ಕೇರ್ ಸೆಂಟರ್‌ನಲ್ಲಿ ಮೃತಪಟ್ಟವರನ್ನು ಶವಗಾರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಮಾರ್ಗಸೂಚಿಯಂತೆ ಬಟ್ಟೆ ಸುತ್ತುವಜವಾಬ್ದಾರಿಯನ್ನು ದಿನೇಶ್ ಮತ್ತು ಸಂಗಡಿಗರುನಡೆಸುತ್ತಿದ್ದರು.ಮತ್ತೂಂದು ತಂಡ ಸಿದ್ಧ: ಇಲ್ಲಿನ ಆಸ್ಪತ್ರೆಯಲ್ಲಿದಾಖಲಾದ ಸೋಂಕಿತರಿಗೆ ರೋಗ ಉಲ½ಣಗೊಂಡಾಗ ಅವರನ್ನು ಕೋಲಾರ ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿತ್ತು.
ಮಾರ್ಗಮಧ್ಯದಲ್ಲಿ ಮೃತಪಟ್ಟವರನ್ನು ಪುನಃವಾಪಸ್ ಕರೆದುಕೊಂಡು ಬರಬೇಕಿತ್ತು. ಪ್ರತಿದಿನಕೋವಿಡ್, ಇತರೆ ಕಾಯಿಲೆಯಿಂದ ಮೃತಪಟ್ಟವರಸಂಖ್ಯೆ 10 ಮೀರುತ್ತಿತ್ತು. ಆಗ ಹಗಲು ರಾತ್ರಿ ಎನ್ನದೆಈ ತಂಡ ಕಾರ್ಯೋನ್ಮುಖರಾಗುತ್ತಿತ್ತು. ಮತ್ತೂಂದುತಂಡ ಸ್ಮಶಾನದಲ್ಲಿಯೇ ಜೆಸಿಬಿ ಸಿದ್ಧ ಮಾಡಿಕೊಂಡು, ಸಂದೇಶ ಬಂದ ತಕ್ಷಣ ಹಳ್ಳ ತೋಡಿ,ಶವದ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುತ್ತಿತ್ತು.
ಭಯ ಎಂದೂ ಬರಲಿಲ್ಲ: ಕೆಜಿಎಫ್ ನಗರದಸಾವಿನ ಜೊತೆಗೆ ಬಂಗಾರಪೇಟೆ, ಮಾಲೂರುಮತ್ತು ರಾಜಪೇಟೆ ರೋಡ್‌ವರೆಗೂ ಸಂಚರಿಸಿ,ಕೋವಿಡ್ ಮೃತರ ಅಂತ್ಯಸಂಸ್ಕಾರ ಮಾಡಿದಪುಣ್ಯವನ್ನು ಈ ತಂಡ ಕಟ್ಟಿಕೊಂಡಿದೆ. ನನಗೆಕೋವಿಡ್ ಮೃತರನ್ನು ಸಾಗಿಸಲು ಭಯ ಎಂದೂಬರಲಿಲ್ಲ. ಜೊತೆಗೆ ನನಗೆ ಉತ್ತಮ ಜೊತೆಗಾರರುಸಿಕ್ಕಿದರು. ಅವರ ಸಹಕಾರದಿಂದ ಯಾವ ಕೋವಿಡ್‌ಮೃತರ ಕುಟುಂಬದವರಿಗೂ ತೊಂದರೆಯಾಗದಂತೆಕಾರ್ಯನಿರ್ವಹಿಸಲಾಯಿತು ಎಂದು ತಂಡದ ಪ್ರಮುಖ ದಿನೇಶ್ ಹೇಳುತ್ತಾರೆ.
ಬೆಮಲ್ ಸಂಸ್ಥೆ ಶವಸಾಗಿಸುವ ವಾಹನವನ್ನುನಮಗೆ ನೀಡಿತು. ಇದರಿಂದಾಗಿ ಎರಡು ಶವಗಳನ್ನುಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲುಸಾಧ್ಯವಾಯಿತು ಎಂದು ಅವರು ಹೇಳಿದರು.ಸಂಘ ಸಂಸ್ಥೆಗಳಿಂದ ಗೌರವ: ತಂಡದ ಸದಸ್ಯರಾದರಾಮಬಾಬು, ಅಪ್ಪು, ಜಯರಾಜ್, ನಾಗಮ್ಮ,ಜೆಸಿಬಿ ಚಾಲಕ ಪರಮೇಶ್ ಮತ್ತು ಮುನಿಸ್ವಾಮಿಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ ಕಾರ್ಯನಿರ್ವಹಣೆ ನಗರದ ಜನತೆಯಮೆಚ್ಚುಗೆಗೆ ಪಾತ್ರವಾಗಿದ್ದು, ಹಲವಾರು ಸಂಘಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿ ಋಣ ತೀರಿಸಿಕೊಳ್ಳುತ್ತಿದ್ದಾರೆ.
ಬಿ.ಆರ್.ಗೋಪಿನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.