ಕೋಲಾರ: 12.10 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ
Team Udayavani, Jul 2, 2021, 7:40 PM IST
ಕೋಲಾರ: ಜಿಲ್ಲೆಯಲ್ಲಿ ಖುದ್ದು ಡೀಸಿ ಡಾ.ಆರ್.ಸೆಲ್ವಮಣಿ ಆಸಕ್ತಿವಹಿಸಿ ಕೋವಿಡ್ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುತ್ತಿದ್ದು, ಈವರೆಗೂ(ಜೂ.28ರವರೆಗೂ) ಮೊದಲ ಡೋಸ್‌ನಲ್ಲಿ ಶೇ.44 ಮತ್ತುಎರಡನೇ ಡೋಸ್‌ನಲ್ಲಿ ಶೇ.17 ಗುರಿ ಸಾಧಿಸಲಾಗಿದೆ.
ಒಟ್ಟು 12.10 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿಹೊಂದಿದ್ದು,6.21 ಲಕ್ಷ ಮಂದಿಗೆ ನೀಡಲಾಗಿದೆ.ಕೋವಿಡ್ ಅಲೆಗಳನ್ನು ಸಮರ್ಥವಾಗಿಎದುರಿಸಬೇಕಾದರೆ ಎರಡು ಡೋಸ್‌ಕೋವಿಡ್ ಲಸಿಕೆಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಕೇಂದ್ರ ಮತ್ತುರಾಜ್ಯ ಸರ್ಕಾರ ಸೂಚಿಸಿದೆ.
ಆರಂಭಿಕವಾಗಿ ಲಸಿಕೆಹಾಕಿಸಿಕೊಳ್ಳುವಲ್ಲಿ ಸ್ವಲ್ಪ ಹಿನ್ನಡೆ ಇದ್ದರೂ ಇದೀಗ ವೇಗಪಡೆದುಕೊಳ್ಳುತ್ತಿದೆ.ಲಸಿಕೆ ಬಂದಿದ್ದೆಷ್ಟು? ಕೋಲಾರ ಜಿಲ್ಲೆಗೆ ಜೂ.28ರವರೆಗೂ ಕೋವಿಶೀಲ್ಡ್ ಕೇಂದ್ರದಿಂದ 3,45,270ಡೋಸ್, ರಾಜ್ಯದಿಂದ 1,78,400 ಡೋಸ್,ಕೋವ್ಯಾಕ್ಸಿನ್ 10 ಡೋಸ್‌ಗಳು 66,780, ಇಪ್ಪತ್ತುಡೋಸ್‌ಗಳು 4,520 ಸೇರಿ 5,93,170 ಡೋಸ್‌ಬಂದಿದೆ. ಇದನ್ನು 6,21,394 ಮಂದಿಗೆ ನೀಡಲಾಗಿದೆ.
ಯಾರಿಗೆ ಎಷ್ಟು ಲಸಿಕೆ? ಕೋಲಾರ ಜಿಲ್ಲೆಯಲ್ಲಿ16,054 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆನೀಡುವ ಗುರಿ ಹೊಂದಲಾಗಿದ್ದು, 14,927 ಮಂದಿಗೆಮೊದಲ ಡೋಸ್ ಹಾಗೂ 10514 ಮಂದಿಗೆ ಎರಡನೇಡೋಸ್ ಸೇರಿ 25,441 ಮಂದಿಗೆ ಲಸಿಕೆ ನೀಡಲಾಗಿದೆ.ಮೊದಲ ಸಾಲಿನ ಕೊರೊನಾ ಯೋಧರ ವಿಭಾಗದಲ್ಲಿ17,897 ಮಂದಿಗೆ ಲಸಿಕೆ ನೀಡುವ ಗುರಿಹೊಂದಲಾಗಿದೆ. 17,897 ಮಂದಿಗೆ ಮೊದಲಡೋಸ್, 7078 ಮಂದಿಗೆ ಎರಡನೇ ಡೋಸ್ ಸೇರಿ24,975 ಮಂದಿಗೆ ಲಸಿಕೆ ನೀಡಲಾಗಿದೆ.18 ವರ್ಷ ಮೇಲ್ಪಟ್ಟು 60 ನಂತರ ವ್ಯಕ್ತಿಗಳಗುಂಪಿನಲ್ಲಿ 11,76,068 ಮಂದಿಗೆ ಲಸಿಕೆ ನೀಡುವಗುರಿ ಹೊಂದಲಾಗಿದೆ. 4,99,501 ಮಂದಿಗೆ ಮೊದಲಡೋಸ್, 71,477 ಮಂದಿಗೆ ಎರಡನೇ ಡೋಸ್ ಸೇರಿ5,70,978 ಮಂದಿಗೆ ಲಸಿಕೆ ನೀಡಲಾಗಿದೆ.
ಒಟ್ಟು6,21,394 ಮಂದಿ ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ5,32,325ಮಂದಿಮೊದಲಡೋಸ್‌ಹಾಗೂ89,069ಮಂದಿ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಲಸಿಕಾ ಅಭಿಯಾನ: ಕೋಲಾರ ಜಿಲ್ಲಾದ್ಯಂತ ನಗರ,ಪಟ್ಟಣ ಹಾಗೂ ಗ್ರಾಪಂ ಮಟ್ಟದಲ್ಲಿ ಲಸಿಕಾ ಅಭಿಯಾನಆಯೋಜಿಸಲಾಗುತ್ತಿದೆ. ಪ್ರತಿ ವಾರ್ಡ್, ಗ್ರಾಮದಲ್ಲಿಪ್ರತ್ಯೇಕವಾಗಿ ಲಸಿಕಾ ಅಭಿಯಾನದ ಮೂಲಕ ಜನತೆಗೆಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ಶೇ.44ಮಂದಿಗೆ ಲಸಿಕೆ ನೀಡಲಾಗಿದ್ದು, ಪ್ರತಿ ಗ್ರಾಮ, ವಾಡ್ìನಲ್ಲಿ ಲಸಿಕೆ ಹಾಕಿಸಿಕೊಂಡವರಿದ್ದಾರಾದರೂಯಾವುದೇ ಗ್ರಾಮ ಲಸಿಕೆ ಪೂರ್ಣಗೊಂಡಿಲ್ಲ.
ಎಲ್ಲಾವಾರ್ಡ್, ಗ್ರಾಮಗಳಲ್ಲಿ ಲಸಿಕೆ ಅಭಿಯಾನಕೈಗೊಳ್ಳಲಾಗಿದ್ದು, ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.ಯಾವುದೇ ವಾರ್ಡ್, ಗ್ರಾಮ, ಪ್ರದೇಶ ಲಸಿಕೆ ಬೇಡಎಂದು ನಿರಾಕರಿಸಿದ ಘಟನೆಗಳು ನಡೆದಿಲ್ಲ.ಕೆಲವೊಂದು ಗ್ರಾಮದಲ್ಲಿ ಶೇ.50ರಿಂದ 60ಪ್ರಮಾಣದವರೆಗೂ ಲಸಿಕೆ ಹಾಕಲಾಗಿದೆ.
ಲಸಿಕೆಗೆ ಸಮಸ್ಯೆ: ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿರುವಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಲಸಿಕೆಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದು ಲಸಿಕಾಅಭಿಯಾನದ ವೇಗಕ್ಕೆ ತೊಡಕಾಗಿದೆ. ಅದೇ ರೀತಿಕೆಜಿಎಫ್ ಭಾಗದಲ್ಲಿ ತಮಿಳು ನಟ ವಿವೇಕ್ ಲಸಿಕೆಹಾಕಿಸಿಕೊಂಡು ನಿಧನಹೊಂದಿದರೆಂಬ ವದಂತಿಯುಪ್ರಭಾವ ಬಿದ್ದು ಜನತೆ ಲಸಿಕೆ ಹಾಕಿಸಿಕೊಳ್ಳಲುಹಿಂದೇಟು ಹಾಕಿದ್ದರು. ಈ ಎರಡು ಸಮಸ್ಯೆ ಹೊರತುಪಡಿಸಿ ಕೋಲಾರ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆಯಾವುದೇ ತೊಡಕು ಕ ಂಡು ಬಂದಿಲ್ಲ.
ನಿಬಾವಣೆ ಹೇಗೆ?
ಲಸಿಕೆ ಹಾಕಿಸಿಕೊಳ್ಳಲು Óವ ುಸ್ಯೆಇರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಮ®ವ ೂಲೆ çಸೆ ಲು ಜಿಲ್ಲಾಡಳಿತ ವಿಶೇಷ ಕ್ರಮಗಳನ್ನುನಡೆಸುತ್ತಿದೆ. ಮುಸ್ಲಿಂ ಜ®ಸ ಂಖ್ಯೆ ಹೆಚ್ಚಾಗಿರುವಪ್ರದೇಶಗಳಲ್ಲಿಯೇ ಲಸಿಕಾ ಅಭಿಯಾನವನ್ನುಆಯೋಜಿಸುತ್ತಿದೆ.
ಅಲ್ಲಿನ ಸ್ಥಳೀಯ ಮುಖಂಡರು,ವಿದ್ಯಾವಂತರು, ಯುವ ಮುಖಂಡರ ನೆರವಿನಿಂದಲಸಿಕೆ ಹಾಕಿಸಿಕೊಂಡರೆ ಸಮಸ್ಯೆ ಇಲ್ಲ ಎಂದುಮನವೊಲಿಸಲಾಗುತ್ತಿದೆ. ಇದಕಾಗಿ ಅR ಂಜುಮನ್ ಸಂÓ§ೆಮತ್ತು ಮಸೀದಿಗಳ ಧಾರ್ಮಿಕ ಮುಖಂಡರ ನೆರವನ್ನುಪಡೆದುಕೊಳ್ಳಲಾಗುತ್ತಿದೆ. ಸಂಸದ, ಡೀಸಿ ನೇತೃತ್ವದಲ್ಲಿಪ್ರತ್ಯೇಕವಾಗಿ ಮುಖಂvರ ಸಭೆ ನಡೆಸಲಾಗಿದೆ.
ಡೀಸಿಯಿಂದಲಸಿಕಾಪ್ರಚಾರ:ಕೆಜಿಎಫ್ ತಾಲೂಕಿನಲ್ಲಿಇದ್ದ ಹಿಂಜರಿಕೆ ನಿವಾರಿಸಲು ಖು¨ುª ಡೀಸಿಯೇಮುಂದಾಗಿದ್ದರು. ಜಿಲ್ಲೆಯ ಯಾವುದೇ ಸಾರ್ವಜನಿಕಸಭೆ, ಸಮಾರಂಭದಲ್ಲಿ ಲಸಿಕೆ ತೆಗೆದುಕೊಳ್ಳುವಂತೆಜನತೆಗೆ ಮನವರಿಕೆ ಮಾಡದೆ ÊÞತ ು ಮುಗಿಸುತ್ತಿಲ್ಲ.ಲಸಿಕಾ ಅಭಿಯಾನ ಯಶಸ್ವಿಗೊಳಿಸಲುಸಾರ್ವಜನಿಕರು ಕೈಜೋಡಿಸಬೇಕೆಂದು ಡೀಸಿ ಮನವಿಮಾಡುತ್ತಿದ್ದಾರೆ.
ಸಾಕಷ್ಟು ಬಾರಿ ಕೆಜಿಎಫ್ ತಾಲೂಕಿಗೆತೆರಳಿ ಅಲ್ಲಿನ ಜನತೆಗೆ ಲಸಿಕೆ ತೆಗೆದುಕೊಂಡರೆ ಮರಣಉಂಟಾಗುವುದಿಲ್ಲ ಎಂದು ಮನದಟ್ಟು ಮಾಡಿಸಿದ್ದಾರೆ.ಸಂಸದ, ಶಾಸಕರ ನೆರವು ಪಡೆದುಕೊಳ್ಳಲಾಗಿದೆ. ಈಎಲ್ಲಾ ಪ್ರಯತ್ನಗಳಿಂದ ಲಸಿಕೆ ಅಭಿಯಾನ ಅಲ್ಲಿಯೂಕ್ರಮೇಣ ಚುರುಕುಗೊಳ್ಳುತ್ತಿದೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.