ವೈದ್ಯರ ನೇಮಿಸಿ 6.5 ಲಕ್ಷ ವೇತನ ನೀಡುತ್ತಿದ್ದೇನೆ
Team Udayavani, May 30, 2021, 7:07 PM IST
ಕೊರೊನಾ ಸಂಕಷ್ಟದಲ್ಲಿ ತಾಲೂಕಿನ ಜನತೆಗೆನಿಮ್ಮ ವೈಯಕ್ತಿಕ ಕೊಡುಗೆ ಏನು?
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಹೆಚ್ಚುಸೋಂಕಿತರು ಬಲಿಯಾಗಿದ್ದಾರೆ. ನಮ್ಮ ತಾಲೂಕಿನಲ್ಲಿಅಂತಹ ಘಟನೆ ಸಂಭವಿಸಬಾರದು ಎಂದು ಈಗಾಗಲೇ100ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಟ್ಟಿದ್ದೇವೆ. ಈ ಕಾರ್ಯ ನಿತ್ಯ ನಡೆಯುತ್ತಿದೆ.ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು,ಸಿಬ್ಬಂದಿ ಕೊರತೆ ನೀಗಿಸಲು ತಾವೇ ಕೈಯಿಂದತಿಂಗಳಿಗೆ 6.5 ಲಕ್ಷ ರೂ.ನಂತೆ ಮೂರು ತಿಂಗಳು19.50 ಲಕ್ಷ ರೂ. ಖರ್ಚು ಮಾಡಿ ವೈದ್ಯರು, ಸಿಬ್ಬಂದಿಯನ್ನು ಒದಗಿಸಿದ್ದೇನೆ. ಇನ್ನು ವೈದ್ಯಕೀಯಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಸೋಂಕುತಗುಲದಂತೆ ರಕ್ಷಣಾ ಸಾಮಗ್ರಿ ವಿತರಣೆ ಮಾಡಿದ್ದೇನೆ.
ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆಹೆಚ್ಚುತ್ತಿದೆ. ಹಳ್ಳಿ ಜನರಿಗೆ ನಿಮ್ಮ ಸಲಹೆ ಏನು?
ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದತಕ್ಷಣ ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆಮಾಡಿಸಿಕೊಳ್ಳಬೇಕು, ಪಾಸಿಟಿವ್ ಬಂದ ತಕ್ಷಣಹೋಂ ಕ್ವಾರಂಟೈನ್ ಅಥವಾ ಕೋವಿಡ್ ಕೇರ್‌ಸೆಂಟರ್, ಇಲ್ಲ, ಸರ್ಕಾರಿ ಆಸ್ಪತ್ರೆಗೆದಾಖಲಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬೇಡಿ.
ಕೊರೊನಾ ತಡೆಗಟ್ಟುವಲ್ಲಿ ಸರ್ಕಾರಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಿಮ್ಮಅಭಿಪ್ರಾಯ ವೇನು?
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ತಕ್ಷಣ ಅದನ್ನು ತಡೆಯುವುದು ಯಾರಿ ಗಾದ್ರೂ ಕಷ್ಟ ಆಗುತ್ತೆ. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳುಕೈಜೋಡಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು.
ಕೊರೊನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯರು,ಅಧಿಕಾರಿಗಳ ಜೊತೆ ನಿಮ್ಮ ಸಮನ್ವಯ ಹೇಗಿದೆ?
ಅವರಿಗೆ ನಿಮ್ಮ ಸಲಹೆ ಏನು?ಪ್ರತಿ 8-10 ದಿನಗಳಿಗೊಮ್ಮೆ ಅಧಿಕಾರಿಗಳ ಸಭೆನಡೆಸುತ್ತೇನೆ. ಸೋಂಕಿತರ ದಾಖಲಾತಿ, ಗುಣಮುಖರಾ ದವರ ಮಾಹಿತಿ ಪಡೆಯುತ್ತೇನೆ. ವೈದ್ಯರಿಗೆ ಮತ್ತುಅಧಿಕಾರಿಗಳಿಗೆ ನಮ್ಮ ಕಡೆಯಿಂದ ಸಲಹೆ, ಸಹಾಯಮಾಡುತ್ತಿದ್ದೇನೆ. ಅಧಿಕಾರಿಗಳು ನಮ್ಮ ಸಲಹೆಗಳನ್ನುಕಾರ್ಯರೂಪಕ್ಕೆ ತರುತ್ತಿದ್ದಾರೆ. ಕೊರೊನಾನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮೀಣ ಜನರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ,ನಿಮ್ಮ ಕಡೆಯಿಂದ ಜನರಿಗೆ ಮನವಿ ಏನು?
ಲಸಿಕೆ ಪಡೆದ ತಕ್ಷಣ ನಮಗೆ ಕೊರೊನಾಸೋಂಕು ಬರುವುದಿಲ್ಲ ಎಂದು ಹೇಳುವುದಿಲ್ಲ,ಸೋಂಕು ಕಾಣಿಸಿಕೊಂಡರೂ ಐಸಿಯು ಅಥವಾವೆಂಟಿಲೇಟರ್‌ಗೆ ಹೋಗುವ ಸ್ಥಿತಿ ತಪ್ಪುತ್ತದೆ.ತ್ವರಿತವಾಗಿ ಗುಣಮುಖರಾಗಲು ಸಹಕಾರಿಆಗುತ್ತದೆ. ಲಸಿಕೆ ಪಡೆಯದೇ ಹಲವು ಮಂದಿಮೃತಪಟ್ಟು ತಮ್ಮ ಕುಟುಂಬ ಕಳೆದುಕೊಂಡಿದ್ದಾರೆ.ಹೀಗಾಗಿ, ವದಂತಿಗಳಿಗೆ ಕಿವಿಗೊಡದೇ ನಮ್ಮಗ್ರಾಮೀಣ ಜನರು ಲಸಿಕೆ ಹಾಕಿಸಿಕೊಂಡುಆರೋಗ್ಯಕರ ಜೀವನ ಸಾಗಿಸಬೇಕು.
ಕೊರೊನಾ ಪರೀಕ್ಷೆ ಮಾಡಿಸಲುಹಿಂಜರಿಯುವ ಜನತೆಗೆ ನಿಮ್ಮ ಸಲಹೆ ಏನು?
ಯಾವುದೇ ಒಂದು ಮನೆಯಲ್ಲಿ ಒಬ್ಬರಿಗೆಕೊರೊನಾ ಪಾಸಿಟಿವ್ ಬಂದಿದೆ ಎಂದರೆ ಆಮನೆಯವರೆಲ್ಲರೂ ಕೊರೊನಾ ಪರೀಕ್ಷೆಮಾಡಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದು ಮುಖ್ಯ.ಪರೀಕ್ಷೆ ಮಾಡಿಸಿಕೊಳ್ಳದೆ, ಸೋಂಕು ಹೆಚ್ಚಾದಾಗ ಸಂಕಟಪಡುವುದು ಸರಿಯಲ್ಲ. ತಮ್ಮ ಮನೆ ಬಳಿ ಬರುವಕೊರೊನಾ ವಾರಿಯರ್ಗೆ ಸಹಕರಿಸಿ, ಕೊರೊನಾಪರೀಕ್ಷೆ ಮಾಡಿಸಿ ಅವಶ್ಯಕ ಚಿಕಿತ್ಸೆ ಪಡೆದು ಆರೋಗ್ಯಕರಜೀವನ ಸಾಗಿಸಲು ಜನರಲ್ಲಿ ಮನವಿ ಮಾಡುತ್ತೇನೆ.
ಕಾಗತಿ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.