ಕೋಲಾರ: 825 ಗ್ರಾಮ ಸೋಂಕು ಮುಕ್ತ
Team Udayavani, May 30, 2021, 7:42 PM IST
ಕೋಲಾರ: ಜಿಲ್ಲೆಯ 825 ಗ್ರಾಮಗಳು ಕೊರೊನಾಮುಕ್ತ ಆಗಿದ್ದು, 1029 ಗ್ರಾಮಗಳಲ್ಲಿ 4943 ಸೋಂಕಿತರು ಇದ್ದಾರೆ. ಏಪ್ರಿಲ್ ಮಧ್ಯಭಾಗದಿಂದ ಮೇಮಧ್ಯಭಾಗದವರೆಗೂ ಜಿಲ್ಲೆಯ ನಗರ ಮತ್ತು ಪಟ್ಟಣಪ್ರದೇಶಗಳನ್ನು ತೀವ್ರವಾಗಿ ಕಾಡಿದ್ದ ಕೊರೊನಾಇದೀಗ ಗ್ರಾಮೀಣ ಭಾಗದಲ್ಲಿ ಹರಡುತ್ತಿದೆ.ಜಿಲ್ಲೆಯಲ್ಲಿ ಪ್ರಸ್ತುತ 7 ಸಾವಿರ ಸಕ್ರಿಯ ಪ್ರಕರಣಗಳಲ್ಲಿ 5 ಸಾವಿರ ಗ್ರಾಮೀಣ ಭಾಗದಲ್ಲಿಯೇ ಇರುವುದನ್ನು ಗಮನಿಸಿದರೆ ಸೋಂಕು ಎಷ್ಟರ ಮಟ್ಟಿಗೆ ಹಳ್ಳಗಳಲ್ಲಿ ಹರಡಿದೆ ಎಂಬುದು ತಿಳಿಯುತ್ತದೆ.
ಇದರಿಂ ದಲೇ ಜಿಲ್ಲಾಡಳಿತ ಗ್ರಾಮೀಣ ಜನರನ್ನುಕೊರೊನಾ ದಿಂದ ಕಾಪಾಡಲು ಗಮನ ಹರಿಸಿದೆ.ಗ್ರಾಮ ಪಡೆ, ಪಂಚಾಯ್ತಿ ಪಡೆಗಳ ಮೂಲಕ ವಿವಿಧಚಟುವಟಿಕೆಗಳನ್ನು ನಡೆಸುತ್ತಿದೆ.
ಗ್ರಾಮ ಕಾರ್ಯಪಡೆ – ಪಂಚಾಯ್ತಿ ಪಡೆ: ಕೋಲಾರಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾನಿಯಂತ್ರಿಸಲು ಪ್ರತಿ ಗ್ರಾಮದಲ್ಲಿಯೂ ಗ್ರಾಮ ಪಡೆರಚಿಸಲಾಗುತ್ತಿದೆ. ಈ ಗ್ರಾಮ ಪಡೆಯಲ್ಲಿ 11 ಮಂದಿಇದ್ದು, ಸಮಿತಿಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆ,ಗ್ರಾಮದ ಹಿರಿಯರು, ಸ್ವಯಂ ಸೇವಾ ಸಂಸ್ಥೆಗಳಸದಸ್ಯರು ಇರುವಂತೆ ನೋಡಿಕೊಳ್ಳಲಾಗಿದೆ.ಸೂಕ್ತ ತರಬೇತಿ: ಈ ಎಲ್ಲಾ ಗ್ರಾಮ ಪಡೆಗಳ ಉಸ್ತುವಾರಿ ಯನ್ನು ಪಂಚಾಯ್ತಿ ಕಾರ್ಯಪಡೆ ಮೇಲುಸ್ತುವಾರಿನಡೆಸಲಿದೆ.
ಈ ಪಂಚಾಯ್ತಿ ಕಾರ್ಯಪಡೆಯಲ್ಲಿ ಗ್ರಾಪಂಅಧ್ಯಕ್ಷ, ಪಿಡಿಒ, ಅಂಗನವಾಡಿ, ಆಶಾ ಕಾರ್ಯಕರ್ತೆ,ಇಬ್ಬರು ಹಿರಿಯ ಸದಸ್ಯರು ಇತರರು ಸೇರಿ 10ಮಂದಿ ಇರುವಂತೆ ನೋಡಿಕೊಳ್ಳಲಾಗಿದೆ. ಕೋಲಾರಜಿಲ್ಲೆಯ ಎಲ್ಲಾ 156 ಗ್ರಾಮ ಪಂಚಾಯ್ತಿಗಳಲ್ಲಿಯೂಕಾರ್ಯಪಡೆ ರಚಿಸಲಾಗಿದೆ. 1808 ಗ್ರಾಮಗಳಲ್ಲಿ ಗ್ರಾಮಪಡೆಗಳನ್ನು ರಚಿಸಲಾಗಿದೆ. ಈಗಾಗಲೇ ಗ್ರಾಮಪಡೆಮತ್ತು ಪಂಚಾಯ್ತಿ ಕಾರ್ಯಪಡೆ ಸಮಿತಿ ಸದಸ್ಯರಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತಂತೆ ಸೂಕ್ತತರಬೇತಿ ನೀಡಲಾಗಿದೆ.ಕೋಲಾರ ಜಿಲ್ಲೆಯಲ್ಲಿ ಒಟ್ಟು 156 ಗ್ರಾಮ ಪಂಚಾಯ್ತಿಗಳಿದ್ದು, 1854 ಗ್ರಾಮಗಳಿವೆ.
ಈ ಪೈಕಿ 1029ಗ್ರಾಮಗಳಲ್ಲಿ ಪಾಸಿಟಿವ್ ಸೋಂಕಿತರು ಇದ್ದು, 825ಗ್ರಾಮಗಳು ಕೊರೊನಾ ಮುಕ್ತವಾಗಲಿದೆ. 1808ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ.1029 ಗ್ರಾಮಗಳಲ್ಲಿ 4943 ಕೊರೊನಾ ಪಾಸಿಟಿವ್‌ಪತ್ತೆ ಮಾಡಲಾಗಿದೆ.
ಗ್ರಾಪಂನಲ್ಲಿ ಸಹಾಯವಾಣಿ: ಸೋಂಕಿತರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸ್ಥಳೀಯವಾಗಿಯೇ ಕೋವಿಡ್‌ಕೇರ್ ಕೇಂದ್ರ ಆರಂಭಿಸಲಾಗುತ್ತಿದೆ. ಅಲ್ಲಿಯವರೆಗೂಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವಸೋಂಕಿತರಿಗೆ ಅಗತ್ಯ ಮಾಹಿತಿ ನೀಡಲು ಪ್ರತಿ ಗ್ರಾಮಪಂಚಾಯ್ತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.ಪ್ರತಿ ಪಂಚಾಯ್ತಿಯಲ್ಲಿಯೂ ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಪಂಚಾಯ್ತಿ ವ್ಯಾಪ್ತಿಯ ಎಲ್ಲಾಮನೆಗಳಿಗೂ ತಲುಪಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇರಲು ಒಪ್ಪದಸೋಂಕಿತರು ಇರುವ ಮನೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಲು ಬಿಲ್ ಕಲೆಕ್ಟರ್ ಅಥವಾ ಇತರೆಸಿಬ್ಬಂದಿ ನೇಮಕ ಮಾಡಲಾಗಿದೆ. ಕರೆಯ ಮೂಲಕಸೋಂಕಿತರಿಂದ ಬಂದಿರುವ ಮಾಹಿತಿಯನ್ನು ನಿಗದಿತಡೇರಿಯಲ್ಲಿ ಬರೆದಿಡುವ ವ್ಯವಸ್ಥೆ ಮಾಡಲಾಗಿದೆ.ಆನಂ ತರ ಅಗತ್ಯವಾಗಿ ಕರೆ ಮಾಡಿರುವ ಸೋಂಕಿತರಿಗೆಬೇಕಾಗಿರುವ ಮಾಹಿತಿ, ನೆರವು, ಔಷಧಿಗಳ ಸಹಾಯವನ್ನು ಕಾರ್ಯಪಡೆಯ ಮೂಲಕ ಕಲ್ಪಿಸಲಾಗು ತ್ತಿದೆ.ಇದರಿಂದ ಬಹಳಷ್ಟು ಮಂದಿ ಸೋಂಕಿತರಿಗೆಅನುಕೂಲವಾಗುತ್ತಿದೆ.ಕಾರ್ಯ ಪಡೆಯ ಕರ್ತವ್ಯಗಳು: ಗ್ರಾಪಂ ಪಡೆ ಮತ್ತುಪಂಚಾಯ್ತಿ ಕಾರ್ಯಪಡೆಯ ಸದಸ್ಯರು ಮನೆ ಮನೆಗಳಿಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ನಿಗಾವಹಿಸಲುಸೂಚಿಸಲಾಗುತ್ತಿದೆ. ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದೆ.ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ.ಹೊರಗಿನಿಂದ ಯಾರೇ ಗ್ರಾಮಗಳಿಗೆ ಬರಬೇಕಾದರೂಅವರಿಗೆ ಕೋವಿಡ್ ಚಿಕಿತ್ಸೆ ಮಾಡಿಸಿ ನಿಗಾ ಇಡಲಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವಕಾರ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಚುರುಕಾಗಿನಡೆಸಲಾಗುತ್ತಿದೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.