ಮಾಲೂರು ತಾಲೂಕಲ್ಲಿ ಹತೋಟಿಗೆ ಬಾರದ ಸೋಂಕು
Team Udayavani, May 30, 2021, 7:49 PM IST
ಮಾಲೂರು: ಕಠಿಣ ಲಾಕ್ಡೌನ್ ನಡುವೆಯೂ ಕೊರೊನಾ ಸೋಂಕು ಹತೋಟಿ ಬಾರದ ಕಾರಣತಾಲೂಕಿನ ಜನತೆ ಆತಂಕದಲ್ಲಿದ್ದಾರೆ.ರಾಜ್ಯದ ಅತಿ ಹೆಚ್ಚು ಸೋಂಕು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಕೋಲಾರಜಿಲ್ಲೆಯ 6 ತಾಲೂಕು ಪೈಕಿ ಮಾಲೂರು, ಕೋಲಾರನಿರಂತರ ಮೊದಲೆರಡು ಸ್ಥಾನ ಉಳಿದುಕೊಂಡಿವೆ.
ಇದುವರೆಗೂ ಮಾಲೂರು, ಕೋಲಾರ ತಾಲೂಕುಗಳಲ್ಲಿ ಅತಿಹೆಚ್ಚು ಎಂದರೆ 300ಕ್ಕೂ ಹೆಚ್ಚು ಪ್ರಕರಣಒಂದೇ ದಿನ ದಾಖಲಾಗಿರುವ ನಿದರ್ಶನಗಳಿವೆ.ಇತರೆ ತಾಲೂಕುಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ.ವಲಸಿಗರಿಂದ ಸೋಂಕು: ಒಂದು ವಾರದಿಂದಮಾಲೂರು ಪಟ್ಟಣದಲ್ಲಿ ಸೋಂಕಿನ ಪ್ರಮಾಣಕಡಿಮೆ ಆದಂತೆ ಕಾಣುತ್ತಿದ್ದರೂ, ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ.
ಇದಕ್ಕೆಕಾರಣ ಉದ್ಯೋಗ ಅರಸಿ ಬೆಂಗಳೂರು,ಮುಂತಾದ ಕಡೆ ಹೋಗಿದ್ದ ವಲಸಿಗರುಡಿ ಸ್ವಗ್ರಾಮಗಳಿಗೆ ವಾಪಸ್ ಆಗಿರುವುದು.ಕಾರ್ಮಿಕರೇ ಕಂಟಕ: ಮತ್ತೂಂದು ಕಾರಣವೆಂದರೆಮಾಲೂರು ತಾಲೂಕಿನಲ್ಲಿರುವ ಕೆಲವು ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಹೊರಗಿನಿಂದ ಬರುತ್ತಾರೆ.
ರೈಲಿನಲ್ಲಿ ಮಾಲೂರು ಪ್ರವೇಶಮಾಡುತ್ತಿರುವ ಜನರ ಜೊತೆಗೆ ಇಲ್ಲಿನ ಇಟ್ಟಿಗೆಕಾರ್ಖಾನೆಗಳು, ಕೋಳಿ ಫಾರಂಗಳಲ್ಲಿ ಕೆಲಸಮಾಡುವ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ,ಗುಜರಾತ್, ಅಸ್ಸಾಂ ರಾಜ್ಯಗಳ ಕೂಲಿ ಕಾರ್ಮಿಕರುಸುರಕ್ಷತಾ ಕ್ರಮ ಅನುಸರಿಸದ ಕಾರಣ ಸೋಂಕಿನಪ್ರಮಾಣವು ಹೆಚ್ಚಾಗುತ್ತಿದೆ ಎನ್ನುವುದು ಕೊರೊನಾನಿಯಂತ್ರಣ ಸಮಿತಿ ಅಭಿಪ್ರಾಯವಾಗಿದೆ.
ಕೆಲವು ಸಾವು ದಾಖಲಾಗಿಲ್ಲ: ಸರ್ಕಾರದ ಅಂಕಿಅಂಶ ಪ್ರಕಾರ ತಾಲೂಕಿನಲ್ಲಿ ಕೊರೊನಾದಿಂದಗುರುವಾರದವರೆಗೂ 55 ಮಂದಿ ಮೃತಪಟ್ಟಿದ್ದಾರೆ.ಇದು ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವಮಾಲೂರು ತಾಲೂಕಿನಲ್ಲಿ ಕೆಲವು ಮೃತ ವ್ಯಕ್ತಿಗಳವಿವರ ದಾಖಲೇ ಆಗಿಲ್ಲ ಎನ್ನುವುದು ಕೆಲವರಅಭಿಪ್ರಾಯವಾಗಿದೆ.
ಶಾಸಕರಿಂದ ಶ್ರಮ: ಸರ್ಕಾರದ ಅಸಹಕಾರದನಡುವೆ ದಾನಿಗಳು, ಸ್ಥಳೀಯ ಕೈಗಾರಿಕೆಗಳು,ಗ್ರಾಮ ದೇವತೆ ಮಾರಿಕಾಂಬ ದೇವಾಲಯ ಸಮಿತಿಸಹಕಾರದೊಂದಿಗೆ ಅಗತ್ಯವಾಗಿರುವ ಎಲ್ಲಾ ಮುಂಜಾ ಗ್ರತಾ ಕ್ರಮ ಮತ್ತು ಸೌಲಭ್ಯವನ್ನು ಪಡೆಯು ವಲ್ಲಿ ಸಫಲವಾಗಿರುವ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದ ತಾಲೂಕು ಅಡಳಿತ, ಅಗಲಿರಳುಕೊರೊನಾ ನಿಯಂತ್ರಣಕ್ಕೆ ಶ್ರಮವಹಿಸುತ್ತಿದೆ.
ಸಾವಿನ ಪ್ರಮಾಣ ಕಡಿಮೆ ಆಗಿಲ್ಲ: ಮೂರುಖಾಸಗಿ ಆಸ್ಪತ್ರೆಗಳ ಜೊತೆಗೆ ಮಾಲೂರು ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚುಕೊರೊನಾ ಬೆಡ್, ನಾಲ್ಕು ವೆಂಟಿಲೇಟರ್, ಆಮ್ಲಜನಕದ ಘಟಕ, ಸಿಲಿಂಡರ್ಗಳು ದಾನಿಗಳುನೀಡಿದ ವೆಂಟಿಲೇಟರ್ ಬಳಸಿಕೊಂಡರೂ ಸಾವಿನಪ್ರಮಾಣ ಕಡಿಮೆಯಾಗಿಲ್ಲ. ಸುರಕ್ಷಿತಾ ಮಾರ್ಗಅನುಸರಿಸುತ್ತಿದ್ದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ ಎನ್ನುವುದು ತಾಲೂಕಿನ ಜನತೆಗೆ ಆತಂಕಮೂಡಿಸಿದೆ.ಒಟ್ಟಾರೆಯಾಗಿ ಸೋಂಕಿನ ಪ್ರಮಾಣ ಗ್ರಾಮೀಣಭಾಗದಲ್ಲಿ ಹೆಚ್ಚಾಗಿದ್ದು, ಜನರಲ್ಲಿ ಅರಿವುಮಾಡಿಸುವ ಮೂಲಕ ಸೋಂಕಿತರ ಸಂಖ್ಯೆಯನ್ನುಕಡಿಮೆ ಮಾಡುವ ಕ್ರಮಗಳು ನಡೆಯಬೇಕಾಗಿದೆ.
ಎಂ.ರವಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.