Kolar:ಸರಣಿ ಕೊಲೆಗಳಿಗೆ ಬೆಚ್ಚಿ ಬಿದ್ದ ಕೋಲಾರ!


Team Udayavani, Nov 7, 2023, 3:32 PM IST

Kolar:ಸರಣಿ ಕೊಲೆಗಳಿಗೆ ಬೆಚ್ಚಿ ಬಿದ್ದ ಕೋಲಾರ!

ಕೋಲಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲಾ ಕೇಂದ್ರದ ಜನವಸತಿ ಪ್ರದೇಶದಲ್ಲೇ ಅಪ್ರಾಪ್ತ ಬಾಲಕನನ್ನು ಅವನ ಸ್ನೇಹಿತರೇ ಕೊಚ್ಚಿ ಕೊಂದಿರುವ ಘಟನೆ ಸಾರ್ವಜನಿಕರನ್ನು ತಲ್ಲಣಗೊಳಿಸಿದೆ.

ಸರಣಿಯಾಗಿ ನಡೆಯುತ್ತಿರುವ ಕೊಲೆಗಳಿಗೆ ಕಾರಣಗಳೇನು?. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದಾದರೂ ಹೇಗೆ? ಈ ಕೊಲೆಗಳಿಂದ ಕೋಲಾರವನ್ನು ರಕ್ಷಿಸುವುದೇಗೆ ಎಂಬ ಕುರಿತು ಸಾರ್ವಜನಿಕರ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಜಿಲ್ಲೆಯ ಹಿನ್ನೆಲೆ: ಕೋಲಾರ ಜಿಲ್ಲೆ ಹಲವು ದಶಕಗಳ ಕಾಲ ವಿಪರೀತ ಜಾತಿ ಮತ್ತು ಧರ್ಮದ ವೈಷಮ್ಯಗಳಿಂದ ನರಳಿದೆ. ಈ ವೈಷಮ್ಯಗಳಿಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಕೋಲಾರ ಜಾತಿ, ಕೋಮುಗಲಭೆಗಳಿಗೆ ಕುಖ್ಯಾತಿಯನ್ನು ಪಡೆದುಕೊಂಡಿತ್ತು. ಮತ್ತೂಂದು ಹಂತ ದಲ್ಲಿ ರಾಜಕೀಯ ದ್ವೇಷದ ಕೊಲೆಗಳು ಹೆಚ್ಚಾಗಿದ್ದವು. ಆದರೆ, ಈಗ ನಡೆಯುತ್ತಿರುವ ಬಹುತೇಕ ಕೊಲೆಗಳು ವೈಯಕ್ತಿಕ ದ್ವೇಷದ್ದು, ಅದರಲ್ಲೂ ಕ್ಷುಲ್ಲಕ ಕಾರಣಗಳಿಗಾಗಿ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

ದೊಡ್ಡಮಟ್ಟದ ಚರ್ಚೆಗೆ: ಜಾತಿ, ಕೋಮು ಹಾಗೂ ರಾಜಕೀಯ ವೈಷಮ್ಯದ ಕೊಲೆಗಳು ಇತ್ತೀಚಿನ ವರ್ಷಗಳಲ್ಲಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿತ್ತು. ಅಲ್ಲಲ್ಲಿ ಕಾಣಸಿಗುತ್ತಿವಾದರೂ, ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಕೇಸು, ಪ್ರತಿ ಕೇಸು ದಾಖಲು ಮಾಡಿಸಿ ಕೋರ್ಟಿಗೆ ಅಲೆದಾಡುವ ಹಂತಕ್ಕೆ ಕೊನೆಗೊಳ್ಳುತ್ತಿತ್ತು. ಇಲ್ಲವೇ ಮೂರು ನಾಲ್ಕು ತಿಂಗಳ ಜೈಲು ವಾಸದ ಶಿಕ್ಷೆಯಲ್ಲಿ ಕೊನೆ ಸಾಗುತ್ತಿತ್ತು. ಆದರೆ, ಈಗಿನ ವ್ಯ ಯಕ್ತಿಕ ದ್ವೇಷದ ಕೊಲೆಗಳ ನಿಯಂತ್ರಣ ಮಾಡುವುದಾದರೂ ಹೇಗೆ ಎಂಬುದು ದೊಡ್ಡಮಟ್ಟದ ಚರ್ಚೆಗೆ ವಸ್ತುವಾಗಿ ಬಿಟ್ಟಿದೆ.

ಕಾರಣಗಳೇನು?: ವಿದ್ಯಾರ್ಥಿ ಯುವ ಸಮೂಹ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದೇ ಈ ಕೃತ್ಯಗಳಿಗೆ ಪ್ರಮುಖ ಕಾರಣ ಎಂದು ಗುರುತಿಸಲಾಗುತ್ತಿದೆ. ಶ್ರೀನಿವಾಸಪುರ, ಕೋಲಾರ, ಮಾಲೂರು ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಲ್ಲಿ ಜರುಗಿದ್ದ ಕೊಲೆಗಳಿಗೆ ಆರೋ ಪಿಗಳು ಮಾದಕ ಸೇವನೆಯ ಮತ್ತಿನಲ್ಲಿಯೇ ಕೊಲೆಗಳನ್ನು ನಡೆಸಿರುವುದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಕೋಲಾರದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣದಲ್ಲಿಯೇ ಆರೋಪಿ ಸ್ಥಾನದಲ್ಲಿರುವ ಎಲ್ಲಾ ಬಾಲಕರು ಅಪ್ರಾಪ್ತರೇ ಆಗಿದ್ದು, ಮಾದಕ ವಸ್ತುಗಳ ಸೇವನೆಯ ದಾಸರಾಗಿದ್ದರು ಎಂಬ ಆರೋ ಪವೂ ಕೇಳಿ ಬರುತ್ತಿದೆ. ವಿದ್ಯಾರ್ಥಿ ಸಮೂಹವನ್ನೇ ಗುರಿಯಾಗಿಟ್ಟುಕೊಂಡು ಮಾದಕ ವಸ್ತುಗಳನ್ನ ಯತೇತ್ಛವಾಗಿ ಮಾರಾಟ ಮಾಡುತ್ತಿರುವ ದಂಧೆ ನಗರದಲ್ಲಿ ಯಾವುದೇ ಭಯ ಇಲ್ಲದೆ ಸಾಗುತ್ತಿರುವುದನ್ನು ಬಹುತೇಕ ಸಾರ್ವಜನಿಕರಿಗೆ ಅರಿವಾಗುತ್ತಿದೆ. ಮಾದಕವಸ್ತು ಸೇವನೆ: ನಗರದಲ್ಲಿ ಅಬಕಾರಿ ಇಲಾಖೆಯ ಗುರಿ ಮೀರಿ ಮಾರಾಟ ಮಾಡುವ ತಂತ್ರಗಾರಿಕೆಯಿಂದ ಪ್ರತಿ ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಸಿಗುತ್ತಿದೆ. ಮದ್ಯದಂಗಡಿಗಳಿಗೆ ವಿಧಿಸಿರುವ ಯಾವುದೇ ಷರತ್ತು ಈ ಅಂಗಡಿಗಳಿಗೆ ತಟ್ಟುತ್ತಿಲ್ಲ. ದಿನದ 24 ಗಂಟೆಯೂ ಅಪ್ರಾಪ್ತರಿಂದ ಹಿಡಿದು ಯಾವುದೇ ವಯೋಮಾ ನದ ವ್ಯಕ್ತಿಗಳಿಗೆ ಮದ್ಯ ಸುಲಭವಾಗಿ ಸಿಗುತ್ತಿದೆ.

ಅಪರಾಧ ಪ್ರಕರಣ: ಧೂಮಪಾನ, ಮಾದಕ ವಸ್ತು ಗಳ ನಿಯಂತ್ರಣ ಎನ್ನುವುದು ಕೇವಲ ಬೀಡಿ ಸಿಗರೇಟು ಮಾರಾಟ ಮಾಡುವ ಅಂಗಡಿಗಳ ಮೇಲೆ ಸ್ಟಿಕರ್‌ ಮೆತ್ತಿಸಲು ಸೀಮಿತವಾಗುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ಹಳ್ಳಿಯಂತಿರುವ ಕೋಲಾರ ಮಾದಕ ವಸ್ತುಗಳ ಮಾರಾಟದಲ್ಲಿ ಬೆಂಗಳೂರು ಮಹಾನಗರದ ಮತ್ತೂಂ ದು ಬ್ರಾಂಚ್‌ ಆಗಿರುವುದನ್ನು ಪೊಲೀಸ್‌ ಇಲಾಖೆಯೇ ಗಮನಿಸುತ್ತಿದೆ.

ಒಟ್ಟಾರೆ ಹಣ ನೀಡಿದರೆ ಎಂತದ್ದೇ ವಯೋಮಾನದ ವ್ಯಕ್ತಿಗೆ ಮಾದಕ ವಸ್ತುಗಳು, ಮದ್ಯವು ಜಿಲ್ಲೆಯಲ್ಲಿ ಸುಲಭವಾಗಿ ಸಿಗುವಂತಾಗಿರುವುದು ವ್ಯಸನಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ವ್ಯಸನಿ ಗಳಾದವರ ಕೈಯಲ್ಲಿ ಅಪರಾಧ ಪ್ರಕರಣಗಳನ್ನು ಹೆಚ್ಚಿಸುತ್ತಿದೆ.

ಡ್ರಗ್‌ ವ್ಯಸನಿಗಳು: ಜಿಲ್ಲೆಯಲ್ಲಿ ಕೊಂಚ ಜನನಿಬಿಡ ಪ್ರದೇಶಗಳಿಂದ ದೂರ ಇರುವ ಯಾವುದೇ ಶಾಲಾ ಕಾಲೇಜಿನ ಆವರಣ ಸಂಜೆಯಾಯಿತೆಂದರೆ ಡ್ರಗ್‌ ವ್ಯಸನಿಗಳ ವೇದಿಕೆಯಾಗುತ್ತಿರುವುದನ್ನು ಗಮನಿಸಬಹು ದಾಗಿದೆ. ಶಾಲಾ-ಕಾಲೇಜು ಆವರಣವನ್ನು ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೆ ಸಂಜೆಯ ವೇಳೆ ಯುವಕರ ಗುಂಪುಗೂಡುವುದು, ಅವರಿದ್ದ ಜಾಗದಲ್ಲಿ ಸಿರಿಂಜ್‌,ಬರಿಸುವ ಮಾತ್ರೆಗಳು, ವೈಟ್ನರ್‌ ಬಾಟೆಲ್‌, ನಿಷೇಧಿತ ಮಾತ್ರೆ, ಇನ್ನಿತರೇ ಮಾದಕ ವಸ್ತುಗಳನ್ನು ಬಳಸಿ ಬಿಸಾಡಿರುವುದು ಪತ್ತೆಯಾಗುತ್ತದೆ. ಇವರಿಗೆ ಔಷಧಿ ಅಂಗಡಿಗಳಿಂದಲೇ ನೇರವಾಗಿ, ಬರಿಸುವ ಪದಾರ್ಥಗಳು ಮಾರಾಟ ಆಗುತ್ತಿರುವುದನ್ನು ಇತ್ತೀಚಿಗೆ ಔಷಧಿ ಅಂಗಡಿಗಳ ಮೇಲೆ ಅಧಿಕಾರಿ ನಡೆಸಿದ ದಾಳಿಯೇ ದೃಢಪಡಿಸಿದೆ.

ಸೊಪ್ಪು ಹಾಕದ ಜನತೆ: ಸರಣಿ ಕೊಲೆಗಳ ಅಪರಾಧಿಗಳನ್ನು ತಕ್ಷಣಕ್ಕೆ ಬಂಧಿಸುತ್ತಿರುವ ಪೊಲೀಸ್‌ ವ್ಯವಸ್ಥೆಯಿಂದ ವ್ಯಕ್ತಿಗತ ದ್ವೇಷದ ಕೊಲೆಗಳನ್ನು ಇಡೀ ಜಾತಿಗೋ, ಧರ್ಮಕ್ಕೊ, ರಾಜಕೀಯ ಪಕ್ಷಕ್ಕೋ ಅನ್ವಯಿಸಿಕೊಂಡು ಸಮುದಾಯವನ್ನು ರೊಚ್ಚಿಗೆಬ್ಬಿಸುವ ಕೃತ್ಯಗಳು ನಡೆಯುತ್ತಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಕೆಲವರು ಕೊಲೆಗಳನ್ನು ತಮ್ಮ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದರೂ, ಅವುಗಳಿಗೆ ಜನ ಸೊಪ್ಪು ಹಾಕುತ್ತಿಲ್ಲ ಎನ್ನುವ ಮಟ್ಟಿಗೆ ಜನ ಜಾಗೃತರಾಗಿರುವುದು ಮೆಚ್ಚುವ ವಿಷಯವೇ ಆಗಿದೆ.

ಶಾಸಕ ಸಮೃದ್ಧಿ ಮಂಜುನಾಥ್‌ ಫೇಸ್‌ಬುಕ್‌ ಸಂದೇಶ : ಆತ್ಮೀಯ ತಂದೆ ತಾಯಿಯರೇ, ಪೊಷಕರೇ, ಆರೋಪಿಗಳಿಗೆ ಶಿಕ್ಷೆಯಾಗಲಿ ಅನ್ನೋದೊಂದೆ ನಮ್ಮ ಉದ್ದೇಶವಲ್ಲ. ನಾಳೆ ನಮ್ಮ ಮಕ್ಕಳು ಆರೋಪಿ ಸ್ಥಾನದಲ್ಲಿ ನಿಲ್ಲದಿರಲಿ ಎಂದು ಸಂಕಲ್ಪ ಮಾಡಿ. ನಮ್ಮ ಕನಸಿನ ಕೂಸುಗಳು ಕೈಜಾರುವ ಮುನ್ನ, ನಮ್ಮ ಕರುಳಿನ ಕುಡಿಗಳ ಮನಸ್ಸು ಕದ ಡುವ ಮುನ್ನ ಉಳಿಸಿಕೊಳ್ಳುವ ಸಂಕಲ್ಪ ನಮ್ಮದಾ ಗಲಿ.. ಹೆತ್ತವರ ಕನಸ್ಸನ್ನು ನನಸು ಮಾಡಿ ಸಮಾಜ ದಲ್ಲಿ ಪ್ರಜ್ವಲಿಸಬೇಕಾದ ಮಕ್ಕಳು, ದುಷ್ಟಶಕ್ತಿಗಳ ಕೈವಶವಾಗುವ ಮುನ್ನ ಎಚ್ಚೆತ್ತುಕೊಳ್ಳಿ. ಉತ್ತಮ ಸಮಾಜಕ್ಕಾಗಿ, ನಿಮ್ಮ ಮಕ್ಕಳ ಉತ್ತಮ ಭವಿಷ್ಯ ಕ್ಕಾಗಿ ಭವಿಷ್ಯದ ಕೋಲಾರಕ್ಕಾಗಿ ಚಿನ್ನದ ನಾಡು ಶಾಂತಿಯ ಬೀಡು ಕರ್ನಾಟಕ್ಕಾಗಿ ಕೈಜೋಡಿಸಿ. ಕೋಲಾರ ಜಿಲ್ಲೆಯ ಮಕ್ಕಳ ಭವಿಷ್ಯಕ್ಕಾಗಿ ಧ್ವನಿಯಾಗಿ.-(ಕೋಲಾರ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣ ಕುರಿತಂತೆ)

ಎಚ್ಚೆತ್ತುಕೊಂಡ ಜಿಲ್ಲೆಯ ಸಾರ್ವಜನಿಕರು: ಸರಣಿ ಕೊಲೆಗಳ ನಂತರ ಕೋಲಾರ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಕೊಲೆಗಳ ನಿಯಂತ್ರಣ ವಿಚಾರದಲ್ಲಿ ಶಾಸಕರಿಂದ ಸಾಮಾನ್ಯರವರೆಗೂ ಅನೇಕ ಸಲಹೆಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ನೀಡುತ್ತಿದ್ದಾರೆ. ಮಕ್ಕಳ ವಿಚಾರದಲ್ಲಿ ಪೊಷಕರ ನಿಗಾ ಹೇಗಿರಬೇಕು, ಅಪರಾಧಿಗಳು ಪೊಲೀಸ್‌ ಭಯ ಹೇಗಿರಬೇಕು, ಮಾದಕ ವಸ್ತುಗಳು ಮತ್ತು ಮದ್ಯ ಮಾರಾಟವನ್ನು ಹೇಗೆಲ್ಲಾ ಸಾರ್ವತ್ರಿಕರಣಗೊಳಿಸಲಾಗಿದೆ. ಶಾಲಾ-ಕಾಲೇಜು ಆಡಳಿತ ಮಂಡಳಿ ಪಾತ್ರ ಏನಿರಬೇಕು, ದಾರಿ ತಪ್ಪುತ್ತಿರುವ ಯುವ ಪೀಳಿಗೆಯನ್ನು ಏನೆಲ್ಲಾ ಕಾರ್ಯಕ್ರಮಗಳ ಮೂಲಕ ಸರಿದಾರಿಗೆ ತರಬಹುದು ಇತ್ಯಾದಿ ವಿಚಾರಗಳನ್ನು ಕುರಿತು ಸಲಹೆ ರೂಪದಲ್ಲಿ ಸಾಮಾಜಿಕ ಜಾಲ ತಾಣವನ್ನು ಜನ ಬಳಕೆ ಮಾಡಿಕೊಂಡು ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳಿಗೂ ದೂರು: ಇತ್ತೀಚಿಗೆ ಕೋಲಾರದಿಂದ ಮುಖ್ಯಮಂತ್ರಿಗಳನ್ನು ನೋಡಲು ತೆರಳಿದ್ದ ತಂಡದ ಮುಖಂಡರು ಖುದ್ದು ಸಿದ್ದರಾಮಯ್ಯರಿಗೆ ಕೋಲಾರದ ಸರಣಿ ಕೊಲೆಗಳ ಪೈಕಿ ಕೆಲವು ಕೊಲೆಗ ವೀಡಿಯೊ ತೋರಿಸಿದ್ದಾರೆ. ಕೋಲಾರದ ಕೊಲೆಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ವ್ಯವಸ್ಥೆಯನ್ನು ಹೇಗೆ ಚುರುಕುಗೊಳಿಸಬೇಕು ಎಂಬ ಕುರಿತು ಚರ್ಚಿಸಿದ್ದಾರೆ. ಮುಖಂಡರ ಮನವಿ ಆಲಿಸಿದ ಮುಖ್ಯಮಂತ್ರಿಗಳು ಕೋಲಾರದ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆಯನ್ನು ನೀಡಿರುವುದು ಸದ್ಯದ ಆಶಾದಾಯಕ ವಿಷಯವಾಗಿದೆ.

– ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.