ಜಾಲಪ್ಪ ಆಸ್ಪತ್ರೆ ನಗರ ಘಟಕಕ್ಕೆ ಡೀಸಿ ಭೇಟಿ, ಪರಿಶೀಲನೆ
Team Udayavani, May 5, 2021, 6:04 PM IST
ಕೋಲಾರ: ಜಾಲಪ್ಪ ಆಸ್ಪತ್ರೆಯ ನಗರ ಹೊರರೋಗಿಗಳ ಘಟಕವನ್ನು ಕೋವಿಡ್ ಕೇಂದ್ರವಾಗಿಪರಿವರ್ತಿಸಿ, ರೋಗಿಗಳ ದಾಖಲಾತಿಗೆ ಅನುವುಮಾಡಿಕೊಡುವ ಕುರಿತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆನಡೆಸಿದರು.
ನಗರದ ಅಂತರಗಂಗೆ ರಸ್ತೆಯ ಜಾಲಪ್ಪಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಮಂಗಳವಾರ ನಗರಸಭಾ ಅಧ್ಯಕ್ಷರು, ಸ್ಥಳೀಯಸದಸ್ಯರೊಂದಿಗೆ ಭೇಟಿ ನೀಡಿದ ಡೀಸಿ, ಕೋವಿಡ್‌ಕೇಂದ್ರವಾಗಿ ಪರಿವರ್ತಿಸುವ ಕುರಿತ ಸಾಧ್ಯತೆಗಳಕುರಿತು ಗಮನ ಹರಿಸಿದರು.
ಈ ಆಸ್ಪತ್ರೆ ವಾರಕ್ಕೊಮ್ಮೆ ಹೊರ ರೋಗಿಗಳಚಿಕಿತ್ಸೆಗೆ ಬಳಕೆಯಾಗುತ್ತಿದ್ದು, ಕೋವಿಡ್ ಬೆಡ್‌ಕೊರತೆ ನೀಗಿಸಲು ಇಲ್ಲಿ ವ್ಯವಸ್ಥೆ ಮಾಡುವ ಕುರಿತುಜಿಲ್ಲಾಡಳಿತಕ್ಕೆ ತಾತ್ಕಾಲಿಕವಾಗಿ ವರ್ಗಾಯಿಸಲು ಜಾಲಪ್ಪ ಆಸ್ಪತ್ರೆ ಆಡಳಿತದೊಂದಿಗೆ ಮಾತನಾಡುವುದಾಗಿ ಡೀಸಿಯವರು ತಿಳಿಸಿದರು.
40 ವೆಂಟಿಲೇಟರ್‌ಗಳ ಅಳವಡಿಕೆ: ಕೋಲಾರ ಜಿಲ್ಲಾ ನರಸಿಂಹರಾಜ ಆಸ್ಪತ್ರೆಯಲ್ಲಿ ಬಳಕೆಯಾಗದೇಇರುವ 40 ಹೊಸ ವೆಂಟಿಲೇಟರ್‌ಗಳನ್ನು ಇಲ್ಲಿಅಳವಡಿಸುವ ಮೂಲಕ ತೀವ್ರ ಅಸ್ವಸ್ಥರಾಗಿರುವರೋಗಿಗಳ ಚಿಕಿತ್ಸೆಗೆ ಬಳಕೆಮಾಡಿಕೊಳ್ಳುವಆಲೋಚನೆ ಇದೆ ಎಂದು ತಿಳಿಸಿದರು.ಸಿಬ್ಬಂದಿಗಳ ಬಳಕೆ: ಜಿಲ್ಲಾಡಳಿತ ಮತ್ತು ಜಿಲ್ಲಾಸ್ಪತ್ರೆಯಿಂದಲೇ ವೈದ್ಯರು, ಶುಶ್ರೂಕಿಯರು ಮತ್ತಿತರಸಿಬ್ಬಂದಿಯನ್ನೇ ಇಲ್ಲಿ ಬಳಸಿಕೊಂಡು ಕೋವಿಡ್‌ಕೇಂದ್ರವಾಗಿ ಬಳಸಿಕೊಂಡರೆ ಜಿಲ್ಲೆಯಲ್ಲಿ ಎದುರಾಗಿರುವ ವೆಂಟಿಲೇಟರ್ ಸಮಸ್ಯೆಯನ್ನು ಸ್ವಲ್ಪಮಟ್ಟಿಗಾದರೂ ಪರಿಹರಿಸಲು ಸಾಧ್ಯ ಎಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ಡೀಸಿ ತಿಳಿಸಿದರು.
ಒಪಿಡಿ ಬಿಟ್ಟುಕೊಡಿ: ಕೋವಿಡ್ ಸೋಂಕಿತರಸಂಖ್ಯೆ ಹೆಚ್ಚುತ್ತಿದೆ, ಜತೆಗೆ ಉಸಿರಾಟದ ತೊಂದರೆಅನುಭವಿಸುವ ಸೋಂಕಿತರ ಸಂಖ್ಯೆಯೂಹೆಚ್ಚುತ್ತಿದೆ, ಆಕ್ಸಿಜನ್, ವೆಂಟಿಲೇಟರ್ ಒದಗಿಸುವಮೂಲಕ ಜೀವ ಉಳಿಸುವ ಕಾರ್ಯದಲ್ಲಿ ಜಾಲಪ್ಪಆಸ್ಪತ್ರೆ ಆಡಳಿತ ಮಂಡಳಿ ಈಗಾಗಲೇ ಕೆಲಸಮಾಡುತ್ತಿದೆ. ಜತೆಗೆ ಹೊರ ರೋಗಿಗಳ ಘಟಕತಾತ್ಕಾಲಿಕವಾಗಿ ಬಿಟ್ಟುಕೊಟ್ಟರೆ ಅಲ್ಲಿಯೂಸೋಂಕಿತರ ತುರ್ತು ಚಿಕಿತ್ಸೆಗೆ ಕ್ರಮವಹಿಸುವುದಾಗಿಡೀಸಿ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಸದಸ್ಯರಾದಗುಣಶೇಖರ್, ರಫಿ, ಇದಾಯಿತುಲ್ಲಾ, ಕಾರಂಜಿಕಟ್ಟೆಮಂಜುನಾಥ್ ಮತ್ತಿತರರಿದ್ದರು.
ಜಿಲ್ಲಾಸ್ಪತ್ರೆಗೂ ಡೀಸಿ, ಎಸ್ಪಿ ಭೇಟಿ: ಜಿಲ್ಲಾಎಸ್ಸೆನ್ನಾರ್ ಆಸ್ಪತ್ರೆಗೆ ಡೀಸಿಯವರೊಂದಿಗೆ ಭೇಟಿನೀಡಿದ ಎಸ್ಪಿ ಕಾರ್ತಿಕ್ ರೆಡ್ಡಿ, ಪೊಲೀಸ್ ಇಲಾಖೆಯಿಂದ ಆಕ್ಸಿಜನ್ ಇಲ್ಲದಾಗ ತುರ್ತು ಸಂದರ್ಭದಲ್ಲಿ ಬಳಸಬಹುದಾದ 10 ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಜಿಲ್ಲಾಸ್ಪತ್ರೆಗೆ ಒದಗಿಸಿಕೊಡುವುದಾಗಿತಿಳಿಸಿದರು.ಡೀಸಿ, ಎಸ್ಪಿಯವರು ಆಸ್ಪತ್ರೆಯಲ್ಲಿನ ಆಕ್ಸಿಜನ್‌ಲಭ್ಯತೆ, ರೋಗಿಗಳ ಸಂಖ್ಯೆ, ಆಕ್ಸಿಜನ್ ಘಟಕದಕಾಮಗಾರಿ ವೀಕ್ಷಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕಡಾ.ಜಗದೀಶ್ ಹಾಜರಿದ್ದು, ಅಗತ್ಯ ಮಾಹಿತಿಒದಗಿಸಿದರು. ಆಸ್ಪತ್ರೆಯ ನಂದೀಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.