ದಿವಾಳಿ ಹಂತದಲ್ಲಿದ್ದ ಡಿಸಿಸಿ ಬ್ಯಾಂಕ್ ಈಗ ನಂ.1
Team Udayavani, Mar 10, 2022, 2:38 PM IST
ಕೋಲಾರ: ಶೋಚನೀಯ ಸ್ಥಿತಿಯಲ್ಲಿದ್ದ ಡಿಸಿಸಿ ಬ್ಯಾಂಕನ್ನು ರಾಜ್ಯದಲ್ಲೇ ಅತಿ ಎತ್ತರಕ್ಕೆ ಬೆಳೆಸಿ 1800ಕೋಟಿ ರೂ. ವಹಿವಾಟು ನಡೆಸುವಂತೆ ಮಾಡುವ ಮೂಲಕ ಸಹಕಾರ ರಂಗ ಮಾತ್ರ ಅಭಿವೃದ್ಧಿಯ ಹೆಬ್ಬಾಗಿಲು ಎಂಬುದನ್ನು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಸಾಬೀತು ಮಾಡಿದ್ದಾರೆ ಎಂದು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಶ್ಲಾಘಿಸಿದರು.
ನಗರದ ಸ್ಕೌಟ್ ಭವನದಲ್ಲಿ ಬುಧವಾರ ಕರ್ನಾಟಕರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಆಯೋಜಿಸಿದ್ದ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘಗಳ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು 7 ಲಕ್ಷಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿದೆ, 1800 ಕೋಟಿರೂ. ವಹಿವಾಟು ನಡೆಸಿದೆ, ಠೇವಣಿ ಸಂಗ್ರ ಹದಲ್ಲೂಸಾಧನೆ ಮಾಡಿದೆ, ಎಟಿಎಂ ಕಾರ್ಡ್ ನೀಡಿ ತಂತ್ರಜ್ಞಾನಅಳವಡಿಸಿಕೊಂಡು ನಂ.1 ಬ್ಯಾಂಕ್‌ಗಿದ್ದು, ಈ ಪರಿವರ್ತನೆಗೆ ಕಾರಣರಾದ ಗೋವಿಂದಗೌಡರ ಆಡ ಳಿತ ಮಂಡಳಿಯನ್ನು ಅಭಿನಂದಿಸುತ್ತೇನೆ ಎಂದು ವಿವರಿ ಸಿದರು.
ಸಹಕಾರ ಭವನಕ್ಕೆ ಅನುದಾನದ ಭರವಸೆ: ನಗರದಲ್ಲಿಅಲಂಗೂರು ಶ್ರೀನಿವಾಸ್ ಸಚಿವರಾಗಿದ್ದಾಗನೀಡಿರುವ ನಿವೇಶನದಲ್ಲಿ ಸುಂದರ ಸಹಕಾರ ಭವನನಿರ್ಮಿಸಲು ಅಗತ್ಯ ಅನುದಾನವನ್ನು ಸಹಕಾರಮಹಾಮಂಡಳದಿಂದ ಒದಗಿಸುವುದಾಗಿ ಭರವಸೆನೀಡಿದ ಅವರು, ಕೃಷಿಪತ್ತಿನ ಸಹಕಾರ ಸಂಘಗಳಿಗೆಅಗತ್ಯ ತರಬೇತಿಗೆ ಸುಸಜ್ಜಿತ ಕಟ್ಟಡ ಅಗತ್ಯವಿದೆ ಎಂದು ವಿವರಿಸಿದರು.
ಸಾಲ ಸದ್ಬಳಕೆ ಮಾಡಿಕೊಳ್ಳಿ: ಕೋಲಾರ ಜಿಲ್ಲೆ ಹೈನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆಯಲ್ಲಿರಾಜ್ಯಕ್ಕೆ ಮಾದರಿಯಾಗಿದೆ. ಕೆ.ಸಿ.ವ್ಯಾಲಿ ನೀರಿನಿಂದಅಂತರ್ಜಲ ಅಭಿವೃದ್ಧಿ ಹೊಂದಿದೆ. ಈ ಸಂದರ್ಭದಲ್ಲಿಸಹಕಾರ ಕ್ಷೇತ್ರದಿಂದ ಸಿಗುವಂತಹ ಸಾಲ ಸೌಲಭ್ಯ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಾಗ ಮಂಜೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರಾಸ್ತಾವಿಕವಾಗಿ ಮಾತನಾಡಿ,ಮುಳಬಾಗಿಲಿನ ದಿ.ಆಲಂಗೂರು ಶ್ರೀನಿವಾಸ್ ಅವರುಸಚಿವರಾಗಿದ್ದ ಸಂದರ್ಭದಲ್ಲಿ ಸಹಕಾರ ಭವನಕ್ಕೆ 11ಸಾವಿರ ಚದರ ಅಡಿ ಜಾಗ ಮಂಜೂರು ಮಾಡಿದ್ದು,ಅಲ್ಲಿ ತರಬೇತಿ ಕೇಂದ್ರ, ಸಹಕಾರ ಭವನ ನಿರ್ಮಿಸಲುಅಗತ್ಯ ಅನುದಾನ ನೀಡಲು ಮನವಿ ಮಾಡಿದರು.ಕ್ರಿಯಾ ಯೋಜನೆ ಮಂಜೂರು: ಆಲಂಗೂರು ಶ್ರೀನಿವಾಸ್, ಶ್ರೀನಿವಾಸಗೌಡರು ಹಾಗೂದೇವೇಗೌಡರ ಸಹಕಾರ, ಯೂನಿಯನ್ ಅಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಯೂನಿಯನ್ ಕಟ್ಟಡದದುರಸ್ತಿಗೆ 24 ಲಕ್ಷ ರೂ. ಕ್ರಿಯಾ ಯೋಜನೆಯನ್ನುರೂಪಿಸಿರುವುದನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಗೌಡರು ಫ್ಯಾಕ್ಸ್‌ಸಿಬ್ಬಂದಿಗಳಿಗೆ ವಿಮಾ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ5 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯ ಬಾಂಡ್ ಅನ್ನುಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕನಿರ್ದೇಶಕ ಎಸ್.ಎನ್.ಅರುಣ್‌ಕುಮಾರ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸ್ವಾಗತಿಸಿ, ಅರುಣಮ್ಮ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಯೂನಿಯನ್ ನಿರ್ದೇಶಕರಾದ ಅ.ಮು.ಲಕ್ಷ್ಮೀನಾರಾಯಣ್, ಚೆಂಜಿಮಲೆ ರಮೇಶ್, ಎಸ್.ವಿ.ಗೋವರ್ಧನ ರೆಡ್ಡಿ, ಡಿ.ಆರ್. ರಾಮಚಂದ್ರೇಗೌಡ, ವಿ.ರಘುಪತಿರೆಡ್ಡಿ, ಪಿ.ಎಂ.ವೆಂಕಟೇಶ್, ಎನ್.ವೆಂಕಟೇಶ್, ಕೆ.ಎಂ.ವಿ.ಮಂಜುನಾಥ್, ಸಲಹೆಗಾರಶೇಖ್ ಮಹಮದ್, ಮುಂತಾದವರು ಹಾಜರಿದ್ದರು.ಇದಕ್ಕೂ ಮುನ್ನ ಸ್ವಸಹಾಯ ಗುಂಪುಗಳ ರಚನೆಜವಾಬ್ದಾರಿ ಮತ್ತು ಹಣಕಾಸಿನ ನೆರವು ಕುರಿತು ಅಪೆಕ್ಸ್‌ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಎಚ್.ಎಸ್.ಸತೀಶ್, ಸರ್ಕಾರದ ವಿವಿಧ ಯೋಜನೆ ಬಡ್ಡಿ ಬಿಲ್ಲುಸಿದ್ಧಪಡೆಸುವ ಕುರಿತು ಎಸ್. ಜಿ.ಕುಲಕರ್ಣಿ ತರಬೇತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.