ಬಡವರು ಸಾಲವನ್ನು ಮರುಪಾವತಿ ಮಾಡುವ ನಿಷ್ಠೆಯುಳ್ಳವರು
Team Udayavani, Apr 9, 2022, 3:39 PM IST
ಬೇತಮಂಗಲ/ಕೆಜಿಎಫ್: ಕಷ್ಟಪಟ್ಟು ಜೀವನ ನಡೆಸುವ ಬಡವರು ಎಂದಿಗೂ ಮೋಸಗಾರರಲ್ಲ. ಬ್ಯಾಂಕ್‌ನಿಂದ ಪಡೆದ ಶೂನ್ಯ ಬಡ್ಡಿ ದರದ ಸಾಲವನ್ನು ಮರುಪಾವತಿ ಮಾಡುವ ನಿಷ್ಠೆಯುಳ್ಳವರು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದೆಗೌಡ ಹೇಳಿದರು.
ಪಟ್ಟಣದ ದೊಡ್ಡಗಾಂಡ್ಲಹಳ್ಳಿ ಸೇವಾ ಸಹಕಾರ ಸಂಘದಿಂದ ಜಕ್ಕರಸಕುಪ್ಪ ಗ್ರಾಪಂ ವ್ಯಾಪ್ತಿ ಸಾಯಿಬಾಬಾ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀ ಶಕ್ತಿ ಸಂಘ ಹಾಗೂ ರೈತರಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ 11 ಸ್ತ್ರೀ ಶಕ್ತಿ ಸಂಘಕ್ಕೆ, 91 ರೈತರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಇದೀಗ ನೀಡಲಾಗುತ್ತಿರುವ ಸಾಲ ನನಗೆ ಸಮಾಧಾನ ತಂದಿಲ್ಲ. ಇನ್ನು ಹೆಚ್ಚಿನ ರೈತರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳಿಗೆ ನೀಡುವ ವ್ಯವಸ್ಥೆ ಯನ್ನು ಕಲ್ಪಿಸಬೇಕು. ಡಿಸಿಸಿ ಬ್ಯಾಂಕ್ ಎಂದಿಗೂ ರಾಜಕೀಯ ಬೆರಸುವುದಿಲ್ಲ. ರಾಜಕೀಯ ಹೊರತು ಪಡಿಸಿದ ಕ್ಷೇತ್ರ ಆಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ಬೆಂಬಲಿಗರಿಗೆ ಹಾಗೂ ಬಡ ಕುಟುಂಬಗಳ ಮನೆ ಬಾಗಿಲಿಗೆ ಸಾಲವನ್ನು ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.
1 ಲಕ್ಷ ರೂ.ಗೆ ಸಾಲ ಏರಿಕೆ: ಪ್ರಮಾಣಿಕವಾಗಿ ಬ್ಯಾಂಕ್‌ಗೆ ಮರು ಪಾವತಿ ಮಾಡಿರುವ ಸ್ತ್ರೀ ಶಕ್ತಿ ಸಂಘಗಳಿಗೆ ಇನ್ನು ಮುಂದೆ 1 ಲಕ್ಷ ರೂ.ವನ್ನು ನೀಡಲಾಗುವುದು. ನಿಮ್ಮ ಗ್ರಾಮಗಳಲ್ಲಿರುವ ಬಡ ಕುಟುಂಬಗಳ ಮಹಿಳೆಯರನ್ನು ಗುರುತಿಸಿ ಅವರಿಗೆ ಸಾಲ ನೀಡಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿ ಮುಖಂಡರು ಎನ್ನಿಸಿಕೊಂಡವರು ತಮ್ಮ ಗ್ರಾಮಗಳಲ್ಲಿರುವ ಬಡ ಮಹಿಳೆಯರನ್ನು ಗುರುತಿಸಿ ಅವರಿಗೆ ಸಾಲ ನೀಡುವಂತ ವ್ಯವಸ್ಥೆ ಮಾಡಬೇಕು. ಅವರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್‌ನ ನಿರ್ದೇಶಕಿಯಾಗಿ ಪ್ರಮಾಣಿಕ ವಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲವನ್ನು ಶಾಸಕಿ ರೂಪಕಲಾ ಶಶಿಧರ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನೀವು ಆರ್ಶೀವಾದಿಸಬೇಕು ಎಂದು ಮನವಿ ಮಾಡಿದರು.
ಪ್ರಾಮಾಣಿಕವಾಗಿ ಮರು ಪಾವತಿ: ಶಾಸಕಿ ರೂಪಕಲಾ ಮಾತನಾಡಿ, ನಾನು ಶಾಸಕಿಯಾದ ನಂತರ ಹಾಗೂ ಶಾಸಕಿಯಾಗುವ ಮುನ್ನ ದಿನಗಳಿಂದ ಡಿಸಿಸಿ ಬ್ಯಾಂಕ್ ನ ನಿರ್ದೇಶಕಿಯಾಗಿ ಕೆಜಿಎಫ್ ವಿಧಾನಸಭೆ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಮನೆ ಬಾಗಿಲಿನಲ್ಲಿ ನಿಂತು ಶೂನ್ಯ ಬಡ್ಡಿ ದರದ ಸಾಲವನ್ನು ವಿತರಿಸಿದ್ದೇನೆ. ಮಹಿಳೆಯರು ಸಹ ಬ್ಯಾಂಕ್‌ಗೆ ಮೋಸ ಮಾಡದೆ, ಪ್ರಾಮಾಣಿಕವಾಗಿ ಮರು ಪಾವತಿ ಮಾಡಿ 2-3 ಬಾರಿ ಸಾಲವನ್ನು ಪಡೆದಿದ್ದಾರೆ. ಕ್ಷೇತ್ರದ ಜನರ ನೋವನ್ನು ನಿವಾರಣೆ ಮಾಡುವುದೆ ನನ್ನ ಆದ್ಯ ಕರ್ತವ್ಯವಾಗಿ ಸ್ವೀಕರಿಸಿ ದುಡಿಯುತ್ತಿದ್ದೇನೆ ಎಂದು ಹೇಳಿದರು.
ಜಕ್ಕರಸಕುಪ್ಪ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಮುಖಂಡ ಬಾಲ ಕೃಷ್ಣ, ಕಂಗಾಡ್ಲಹಳ್ಳಿ ವೆಂಕಟ್ ರಾಮ್, ಬೇತ ಮಂಗಲ ಸುರೇಂದ್ರಗೌಡ, ಎಪಿಎಂಸಿ ಮಾಜಿ ನಿರ್ದೇ ಶಕ ರಾಮ ಚಂದ್ರ, ಎನ್‌ಟಿಆರ್, ಒಬಿಸಿ ಮುನಿಸ್ವಾಮಿ, ದೊಡ್ಡ ಗಾಂ ಡ್ಲಹಳ್ಳಿ ಸೇವಾ ಸಹಕಾರ ಸಂಘದ ಕಾರ್ಯ ದರ್ಶಿ ಮುನಿ ರಾಜ್, ವೆಂಕಟರಮಣಪ್ಪ, ರಾಮ ಚಂದ್ರ ರೆಡ್ಡಿ, ಅಶ್ವಥ್ ರೆಡ್ಡಿ, ರಂಗಪ್ಪ, ಕೇಶವ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.